ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು: BDA ಫ್ಲಾಟ್ ಖರೀದಿಗೆ ತಕ್ಷಣ ಅರ್ಜಿ ಸಲ್ಸಿ

By Srinath
|
Google Oneindia Kannada News

ಬೆಂಗಳೂರು, ಮಾರ್ಚ್ 3- ಕರ್ನಾಟಕ ಸರಕಾರದ ಆದೇಶದ ಮೇರೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಾನಾ ವಿಸ್ತೀರ್ಣದ 4228 ಮನೆಗಳನ್ನು ನಿರ್ಮಿಸಿ, ಮಾರಾಟ ಮಾಡುವ ಯೋಜನೆಯ ಸಂಬಂಧ ಇಂದು (ಮಾ. 3) ಅಧಿಕೃತ ಅಧಿಸೂಚನೆ ಹೊರಡಿಸಿದೆ. ಸರಕಾರದ ಸೂಚನೆ ಅನ್ವಯ ಈ ಬಾರಿ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ (ews) ಆದ್ಯತೆ ಸಿಗಲಿದೆ.

ಅದರಂತೆ BDA ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಈ ಮನೆಗಳನ್ನು ನಿರ್ಮಿಸಿಕೊಡುವ ಕಾರ್ಯವನ್ನು ಕೈಗೆತ್ತಿಕೊಂಡಿದೆ. ವಲಗೇರಹಳ್ಳಿ, ಮಾಳಗಾಲ, ಆಲೂರು, ದೊಡ್ಡಬನಹಳ್ಳಿ, ಕಣಿಮಿಣಿಕೆ, ತಿಪ್ಪಸಂದ್ರ (ಅಂಜನಾಪುರ) ಮತ್ತು ಗುಂಜೂರು ಭಾಗಗಳಲ್ಲಿ ಈ ವಸತಿಸಮುಚ್ಚ ನಿರ್ಮಾಣವಾಗಲಿದ್ದು, 1 BHK, 2 BHK ಮತ್ತು 3 BHK ವಸತಿ ಘಟಕಗಳು ವಿತರಣೆಗೆ ಲಭ್ಯವಿವೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 30-04-2014

bda-offers-4228-flats-in-bangalore-last-date-april-30

ಈ ಹಿನ್ನೆಲೆಯಲ್ಲಿ, ಮನೆಗಳ ಹಂಚಿಕೆಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಯ ವಿವರಗಳಿಗಾಗಿ http://www.bdabangalore.org/ ಸಂಪರ್ಕಿಸಬಹುದು. ಅರ್ಹತಾ ಮಾನದಂಡಗಳು, ಅರ್ಜಿ ಶುಲ್ಕ, ನೋಂದಣಿ ಶುಲ್ಕ ಮತ್ತು ಅರ್ಜಿಯೊಂದಿಗೆ ಪಾವತಿಸಬೇಕಾದ ಆರಂಭಿಕ ಠೇವಣಿ, ಪ್ರಸ್ತಾವಿತ ಹಂಚಿಕೆ ದರ ವಿವರಗಳನ್ನು ವೆಬ್ ಸೈಟಿನಲ್ಲಿ ನೋಡಬಹುದು. ಬೆಂಗಳೂರಿನಲ್ಲಿ ಸ್ವಂತ ಮನೆ ಮಾಡಬೇಕೆಂಬ ನಿಮ್ಮ ಜೀವಮಾನದ ಕನಸು ನನಸಾಗಲಿ ಎಂದು ನಿಮಗೆ ಈ ಸಂದರ್ಭದಲ್ಲಿ ಹಾರೈಸುತ್ತೇವೆ.

repeatersಗೆ ಮೊದಲ ಮಣೆ: ಅರ್ಜಿದಾರರು ಈ ಹಿಂದೆ ಫ್ಲಾಟ್ ಗಾಗಿ ಅರ್ಜಿ ಸಲ್ಲಿಸಿ, ಆಯ್ಕೆಯಾಗದೇ ಇದ್ದಲ್ಲಿ ಅಂತಹವರ ಹಿಂದಿನ ಪ್ರಯತ್ನಗಳನ್ನು ಹಂಚಿಕೆಯ ಜ್ಯೇಷ್ಠತೆಗೆ ಆದ್ಯವಾಗಿ ಪರಿಗಣಿಸಲಾಗುವುದು.

ಈಗಾಗಲೇ ಮೈಸೂರು ರಸ್ತೆಯ ವಲಗೇರಹಳ್ಳಿ ಬಳಿ ನಿರ್ಮಿಸಿರುವ ವಸತಿ ಸಮುಚ್ಛಯದಲ್ಲಿ ಮೊದಲ ಹಂತದಲ್ಲಿ ಮೂರು ಸಾವಿರ ಅರ್ಜಿದಾರರಿಗೆ ಲಾಟರಿ ಮೂಲಕ ಹಂಚಿಕೆ ಮಾಡಲಾಗಿದೆ. ಈ ವಸತಿ ಸಮುಚ್ಛಯಗಳ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಕೆಲ ಕಾಮಗಾರಿ ಮಾತ್ರ ಬಾಕಿ ಉಳಿದಿದೆ. ಇದನ್ನೂ ಸಕಾಲದಲ್ಲಿ ಪೂರ್ಣಗೊಳಿಸಿ ಫಲಾನುಭವಿಗಳ ವಾಸಕ್ಕೆ ಅನುವು ಮಾಡಿಕೊಡುವುದಾಗಿ ಬಿಡಿಎ ಭರವಸೆ ನೀಡಿದೆ.

ಬ್ಯಾಂಕ್ ಮೂಲಕ ಅರ್ಜಿ ವಿತರಣೆ: ಫ್ಲಾಟ್ ಗಾಗಿ ಅರ್ಜಿ ಪಡೆಯಲು ಬಿಡಿಎ ಬ್ಯಾಂಕ್ ಮೂಲಕ ವಿತರಿಸುವ ಪದ್ಧತಿ ಅನುಸರಿಸುತ್ತಿದೆ. ನಿಗದಿತ ಠೇವಣಿ ಮೊತ್ತ ಹಾಗೂ ನೋಂದಣಿ ಶುಲ್ಕ ಪಾವತಿಸಿ ಆದ್ಯತೆಗೆ ಅನುಗುಣವಾಗಿ ಫಾರಂ ಭರ್ತಿ ಮಾಡಿ ಅದೇ ಬ್ಯಾಂಕಿನಲ್ಲಿ ಪಾವತಿಸಬೇಕು. ಇದಕ್ಕಾಗಿ ಕೆನರಾ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್ ಹಾಗೂ ಇಂಡಿಯನ್ ಓವರ್‌ಸೀಸ್ ಬ್ಯಾಂಕಿನ ಆಯ್ದ ಶಾಖೆಗಳಲ್ಲಿ ಅರ್ಜಿ ಲಭಿಸಲಿದೆ.

ಈ ಬಾರಿಯ ಅಧಿಸೂಚನೆ ಪ್ರಕಾರ 2 ಬಿಎಚ್‌ಕೆ, 3 ಬಿಎಚ್‌ಕೆ Faltಗೆ ಹಿಂದಿಗಿಂತ ಶೇ. 20-25ರಷ್ಟು ದರ ಹೆಚ್ಚಳ ಮಾಡಲಾಗಿದೆ. ಭೂಮಿಯ ಮಾರುಕಟ್ಟೆ ದರ, ನಿರ್ಮಾಣ ವೆಚ್ಚದಿಂದಾಗಿ ದರ ಏರಿಕೆ ಅನಿವಾರ್ಯವಾಗಿದ್ದು, ನಿರ್ಮಾಣದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

ಅರ್ಜಿ ಯಾವ ಬ್ಯಾಂಕಿನಲ್ಲಿ ಲಭ್ಯ?: ಕೆನರಾ ಬ್ಯಾಂಕ್ (7 ಶಾಖೆಗಳಲ್ಲಿ), ಕಾರ್ಪೊರೇಷನ್ ಬ್ಯಾಂಕ್ (10 ಶಾಖೆ), ಇಂಡಿಯನ್ ಓವರ್‌ ಸೀಸ್ ಬ್ಯಾಂಕ್ (15 ಶಾಖೆ). ಅರ್ಜಿ ಪಡೆದ ಬ್ಯಾಂಕಿನಲ್ಲೇ ಠೇವಣಿಯೊಂದಿಗೆ ಹೆಸರು ನೋಂದಣಿ ಮಾಡಿಕೊಳ್ಳಬೇಕು.

Falt ಹಂಚಿಕೆ ಯಾರಿಗೆ?: ಶೇ. 50 ಭಾಗ ಸಾರ್ವಜನಿಕರಿಗೆ. ಉಳಿದವುಗಳು ಕೇಂದ್ರ/ರಾಜ್ಯ ಸರಕಾರಿ ನೌಕರರು, ಹಿಂ. ವರ್ಗ/ ಎಸ್‌ಸಿ/ ಎಸ್‌ಟಿ, ವಿಕಲಚೇತನರು, ಮಾಜಿ ಸೈನಿಕರು, ಕಲೆ-ವಿಜ್ಞಾನ-ಕ್ರೀಡೆ ಕ್ಷೇತ್ರ ಸೇರಿ ಒಂಬತ್ತು ವರ್ಗ ಸಾಧಕರು.

ಪಾವತಿಸುವ ಠೇವಣಿ ಮೊತ್ತ: ಸಾಮಾನ್ಯ ವರ್ಗ- ಫ್ಲಾಟ್ ನ ಒಟ್ಟು ಮೊತ್ತದ ಶೇ. 12.5ರಷ್ಟು, ಎಸ್‌ಸಿ/ಎಸ್‌ಟಿ- ಶೇ. 5ರಷ್ಟು. ಪ್ರತಿಯೊಂದು ಅರ್ಜಿಗೂ ನೋಂದಣಿ ಶುಲ್ಕ ಪ್ರತ್ಯೇಕ.

ಅರ್ಜಿಯೊಂದಿಗೆ ಬೇಕಿರುವ ಪ್ರಮಾಣ ಪತ್ರ: ಕರ್ನಾಟಕದಲ್ಲಿ ವಾಸವಿರುವ ಕುರಿತು ವಾಸ್ತವ್ಯ ದೃಢೀಕರಣ ಪತ್ರ, ಆದಾಯ ಪ್ರಮಾಣಪತ್ರ. ಎಸ್‌ಸಿ/ಎಸ್‌ಟಿ ಸಹಿತ ಆಯಾ ವರ್ಗಗಳ ಪ್ರಮಾಣ ಪತ್ರ ಸಲ್ಲಿಸಬೇಕು.

English summary
BDA offers 4228 houses in Bangalore last date April 30, 2014. Some major banks will start issuing the applications from today March 3rd. For more details pls visit (www.bdabangalore.org)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X