ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರದ ವಿರುದ್ಧ ಕೆಂಪು ಬಾವುಟ ಹಾರಿಸಿದ ಶಾಸಕ ಬಿ.ಸಿ.ಪಾಟೀಲ್

|
Google Oneindia Kannada News

Recommended Video

ಇಬ್ಬರು ಪಕ್ಷೇತರರಿಗೆ ಮಾತ್ರವೇ ಸಂಪುಟದಲ್ಲಿ ಅವಕಾಶ | Oneindia Kannada

ಬೆಂಗಳೂರು, ಜೂನ್ 15: ನಿನ್ನೆ ಸಂಪುಟ ವಿಸ್ತರಣೆ ಆಗಿದ್ದು, ಎಲ್ಲ ನಿರೀಕ್ಷೆಗಳನ್ನು ಬದಿಗೆ ಸರಿಸಿ ಕೇವಲ ಇಬ್ಬರು ಪಕ್ಷೇತರರಿಗೆ ಮಾತ್ರವೇ ಸಂಪುಟದಲ್ಲಿ ಅವಕಾಶ ನೀಡಲಾಗಿದೆ.

ನಿನ್ನೆ ಮೌನವಾಗಿದ್ದ ಅತೃಪ್ತ ಶಾಸಕರು ಇಂದು ಮಾತನಾಡಲು ಪ್ರಾರಂಭಿಸಿದ್ದು, ಸಚಿವ ಸ್ಥಾನದ ತೀವ್ರ ಆಕಾಂಕ್ಷಿ ಆಗಿದ್ದ ಬಿ.ಸಿ.ಪಾಟೀಲ್ ಅವರು ಅಸಮಾಧಾನವನ್ನು ಹೊರಹಾಕಿದ್ದು, ಪಕ್ಷಕ್ಕೆ ಪೆಟ್ಟು ಕೊಡುವ ಮಾತುಗಳನ್ನು ಆಡಿದ್ದಾರೆ.

ಕೈ ತಪ್ಪಿದ ಸಚಿವ ಸ್ಥಾನ: ಪಕ್ಷ ತೊರೆಯುವ ಸೂಚನೆ ನೀಡಿದ ಬಿಸಿ.ಪಾಟೀಲ್ ಕೈ ತಪ್ಪಿದ ಸಚಿವ ಸ್ಥಾನ: ಪಕ್ಷ ತೊರೆಯುವ ಸೂಚನೆ ನೀಡಿದ ಬಿಸಿ.ಪಾಟೀಲ್

ಶಾಸಕ ಬಿ.ಸಿ.ಪಾಟೀಲ್ ಅವರು ಸಚಿವ ಸ್ಥಾನದ ತೀವ್ರ ಆಕಾಂಕ್ಷಿ ಆಗಿದ್ದರು, ರಮೇಶ್ ಜಾರಕಿಹೊಳಿ ಅವರ ಬಣಕ್ಕೆ ದೂರದಿಂದಲೇ ಬೆಂಬಲ ನೀಡಿದ್ದ ಅವರು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ನ ಇತರ ನಾಯಕರ ಮೇಲೆ ಸತತ ಒತ್ತಡ ಹೇರಿದ್ದರು, ಆದರೆ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಶಾಸಕರೆಲ್ಲಾ (ಅತೃಪ್ತ) ಕೂತು ಮಾತನಾಡುತ್ತೇವೆ, ಮುಂದೆ ಏನು ಮಾಡಬೇಕು ಎಂದು ನಿರ್ಧಾರ ಮಾಡುತ್ತೇವೆ ಎಂದರು.

ಎಲ್ಲವನ್ನೂ ಕಾಲ ನಿರ್ಧರಿಸುತ್ತದೆ: ಬಿಸಿ ಪಾಟೀಲ್

ಎಲ್ಲವನ್ನೂ ಕಾಲ ನಿರ್ಧರಿಸುತ್ತದೆ: ಬಿಸಿ ಪಾಟೀಲ್

ಕಾಂಗ್ರೆಸ್‌ಗೆ ಪರೋಕ್ಷ ಎಚ್ಚರಿಕೆ ಕೊಟ್ಟ ಬಿ.ಸಿ.ಪಾಟೀಲ್, 'ನಾನು ಯಾರ ಬಲದಿಂದಲೂ ಚುನಾವಣೆ ಗೆದ್ದಿಲ್ಲ, ಪಕ್ಷದಲ್ಲಿ ಇರ್ತೀನಿ ಅಂತಲೂ ಹೇಳಿಲ್ಲ, ಹೋಗ್ತೀನಿ ಅಂತಲೂ ಹೇಳಿಲ್ಲ, ಕಾಲ ಎಲ್ಲವನ್ನೂ ತೀರ್ಮಾನ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ವಿರುದ್ಧ ಬಿಸಿ ಪಾಟೀಲ್ ಬಂಡಾಯ

ಕಾಂಗ್ರೆಸ್ ವಿರುದ್ಧ ಬಿಸಿ ಪಾಟೀಲ್ ಬಂಡಾಯ

ಬಿ.ಸಿ.ಪಾಟೀಲ್ ಮಾತಿನ ಒಳಾರ್ಥ ಸ್ಪಷ್ಟವಾಗಿದ್ದು, ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಬಂಡಾಯ ಏಳುವ ಸರ್ವ ಸೂಚನೆಯನ್ನು ಕೊಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ಬಣದಿಂದ ಅಂತರ ಕಾಯ್ದುಕೊಂಡಿದ್ದ ಅವರು ಈ ಸಮಯದಲ್ಲಿ ಅವರ ಬಣ ಸೇರುವ ಸರ್ವ ಲಕ್ಷಣ ಕಾಣುತ್ತಿದೆ.

ಬಿಜೆಪಿ ಸೇರುವ ಕುರಿತು ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದೇನು?ಬಿಜೆಪಿ ಸೇರುವ ಕುರಿತು ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದೇನು?

ಬಿಸಿ.ಪಾಟೀಲ್‌ಗೆ ಮೋಸ ಮಾಡಲಾಗಿದೆ: ಸೃಷ್ಟಿ ಪಾಟೀಲ್

ಬಿಸಿ.ಪಾಟೀಲ್‌ಗೆ ಮೋಸ ಮಾಡಲಾಗಿದೆ: ಸೃಷ್ಟಿ ಪಾಟೀಲ್

ಬಿಸಿ.ಪಾಟೀಲ್ ಮಗಳು ಸೃಷ್ಟಿ ಪಾಟೀಲ್ ಅವರು ಸಹ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದು, ಒಬ್ಬ ವ್ಯಕ್ತಿಯನ್ನು ಎಷ್ಟು ಬಾರಿ ಮೂರ್ಖರನ್ನಾಗಿ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಸ್ಥಿತಿಗೆ ತಲುಪಿದೆ, ಜಿಲ್ಲೆಯಲ್ಲಿ ಪಕ್ಷ ಬಲಪಡಿಸುವ ಸಲುವಾಗಿ ತಂದೆಯವರಿಗೆ ಸಚಿವ ಸ್ಥಾನದ ಅವಶ್ಯಕತೆ ಇತ್ತು ಎಂದು ಅವರು ಹೇಳಿದ್ದಾರೆ.

ಚರ್ಚಿಸಿ ನಿರ್ಣಯ ತೆಗೆದುಕೊಳ್ಳುತ್ತೇವೆ: ಸೃಷ್ಟಿ ಪಾಟೀಲ್

ಚರ್ಚಿಸಿ ನಿರ್ಣಯ ತೆಗೆದುಕೊಳ್ಳುತ್ತೇವೆ: ಸೃಷ್ಟಿ ಪಾಟೀಲ್

ಅಪ್ಪ ಪಕ್ಷ ಬಿಡುತ್ತಾರೆಯೇ ಎಂಬ ಮಾತಿಗೆ ಉತ್ತರಿಸಿದ ಅವರು, ಪಕ್ಷ ತ್ಯಜಿಸುತ್ತೇನೆ ಎಂದು ಅವರು ಹೇಳಿಲ್ಲ, ಆದರೆ ಪಕ್ಷದಲ್ಲಿ ಇರುತ್ತೇನೆ ಎಂದೂ ಸಹ ಹೇಳಿಲ್ಲ, ನಾವೆಲ್ಲಾ ಕೂತು ಚರ್ಚಿಸಿ ನಿರ್ಧಾರ ತಿಳಿಸುತ್ತೇವೆ ಎಂದು ಅವರು ಹೇಳಿದರು.

English summary
Congress MLA BC Patil said decedent MLAs will meet and discuss the further step. He is unhappy with Congress for not giving minister post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X