ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಬಿ.ಎಸ್. ಯಡಿಯೂರಪ್ಪರಿಗೆ BU ನಂಬರ್ ಕೊಟ್ಟ ಬಿಬಿಎಂಪಿ

|
Google Oneindia Kannada News

ಬೆಂಗಳೂರು, ಆ. 03: ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆಸ್ಪತ್ರಯೆಲ್ಲಿ ಐಸೋಲೇಶನ್‌ಗೆ ಒಳಗಾಗಿದ್ದಾರೆ. ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯಡಿಯುರಪ್ಪ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮಣಿಪಾಲ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ ಆಗಿದೆ. ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದೆ.

Recommended Video

BS Yediyurappa ಆಸ್ಪತ್ರೆಯಿಂದ ವಿಡಿಯೋ ಸಂದೇಶ | Oneindia Kannada

ಜನರಿಗೆ ಆಸ್ಪತ್ರೆಯಿಂದ ಯಡಿಯೂರಪ್ಪ ವಿಡಿಯೋ ಸಂದೇಶಜನರಿಗೆ ಆಸ್ಪತ್ರೆಯಿಂದ ಯಡಿಯೂರಪ್ಪ ವಿಡಿಯೋ ಸಂದೇಶ

ಇದೇ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ಸೋಂಕಿತರ ಸಂಖ್ಯೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಕೊಡಲಾಗಿದೆ. ಸಿಎಂ ಯಡಿಯೂರಪ್ಪ ಅವರಿಗೆ ಬಿಬಿಎಂಪಿಯಿಂದ BU ನಂಬರ್ ಕೊಡಲಾಗಿದೆ. ಪ್ರತಿ ಸೋಂಕಿತರಿಗೂ BU ನಂಬರ್ ನೀಡಲಾಗುತ್ತೆ. ಆರಂಭದಲ್ಲಿ ರಾಜ್ಯಮಟ್ಟದಲ್ಲಿ ಈ ನಂಬರ್ ಕೊಡಲಾಗುತ್ತಿತ್ತು. ಆದರೆ ಸೋಂಕಿತರವ ಸಂಖ್ಯೆಯಲ್ಲಿ ಹೆಚ್ಚಳವಾದಂತೆ ಆಯಾ ಜಿಲ್ಲಾವಾರು ನಂಬರ್‌ ಕೊಡಲು ರಾಜ್ಯ ಆರೋಗ್ಯ ಇಲಾಖೆ ಸೂಚಿಸಿದೆ. ಹೀಗಾಗಿ ಸಿಎಂ ಯಡಿಯೂರಪ್ಪ ಅವರಿಗೆ ಬೆಂಗಳೂರು ನಗರ ಜಿಲ್ಲೆ (BENAGLURU URBEN DISTRICT)ಯಲ್ಲಿ ನಂಬರ್ ಕೊಡಲಾಗಿದೆ.

Bu-61718 Has Been Given To Chief Minister Yediyurappa For Covid Treatment

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ BU-61718 ಕೊಡಲಾಗಿದೆ. ಅಂದರೆ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಸಿಎಂ ಅವರು 61718ನೇ ಸೋಂಕಿತ ವ್ಯಕ್ತಿ ಆಗಿದ್ದಾರೆ. ಹೀಗೆ ನಂಬರ್ ಕೊಡುವ ಮೂಲಕ ಸೋಂಕಿತರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗುತ್ತಿದೆ. ಉಳಿದ ಸೋಂಕಿತರಂತೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಸಂಖ್ಯೆ ಕೊಡಲಾಗಿದೆ.

English summary
CM Yeddyurappa has been given a BU number by BBMP. Each infected person is given a number. Initially this number was given at the state level. But the number of infected people has increased, the state health department has giving the district wise number.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X