• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೇಣುಕಾಚಾರ್ಯ ಹೊಸ ಬಾಂಬ್: ಸಚಿವ ಸಂಪುಟದಲ್ಲಿ ಗುಜರಾತ್ ಮಾದರಿ ಭಾರೀ ಬದಲಾವಣೆ

|
Google Oneindia Kannada News

ಬೆಂಗಳೂರು, ಜ.15: ರಾಜ್ಯ ಸಚಿವ ಸಂಪುಟದಲ್ಲಿ ಗುಜರಾತ್ ಮಾದರಿಯಂತೆ ಭಾರೀ ಬದಲಾವಣೆಯಾಗಲಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿ.ಎಂ. ಬಸವರಾಜ ಬೊಮ್ಮಯಿ ಹೊರತುಪಡಿಸಿ ಸಂಪುಟದಲ್ಲಿ ಬದಲಾವಣೆ ಖಚಿತ ಎಂದು ಭವಿಷ್ಯ ನುಡಿದರು. ಸಂಕ್ರಾಂತಿ ಹಬ್ಬದ ನಂತರ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂದು ಇತ್ತೀಚೆಗಷ್ಟೇ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ ಬೆನ್ನಲ್ಲೇ ಇದೀಗ ರೇಣುಕಾಚಾರ್ಯ ಅವರ ಹೇಳಿಕೆ ಕುತೂಹಲ ಮೂಡಿಸಿದೆ.

ಈ ಹಿಂದೆ 2006 , 2013 ರಿಂದ 2018 ಹಾಗೂ ಪ್ರಸ್ತುತ ಸಂಪುಟದಲ್ಲಿ ಸಚಿವರಾದವರೇ ಮತ್ತೆ ಮತ್ತೆ ಸಚಿವರಾಗಿದ್ದಾರೆ. ಅವರೆಲ್ಲರೂ ರಾಜೀನಾಮೆ ನೀಡಿ ಚುನಾವಣೆಗಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಲಿ. ಪಕ್ಷ ನಿಷ್ಟೆ ಹಾಗೂ ಹೊಸಬರಿಗೆ ಒಂದು ಅವಕಾಶ ಕೊಟ್ಟರೆ ತಪ್ಪೇನು? ಎಂದು ಪ್ರಶ್ನಿಸಿದರು.

ನನಗೂ ಸಚಿವ ಸ್ಥಾನ ಕೊಡಿ:

ಪಕ್ಷ ನನಗೆ ತಾಯಿ ಸಮಾನ, ಪಕ್ಷಕ್ಕಾಗಿ ನಾನು ಯಾವುದೇ ತ್ಯಾಗಕ್ಕೂ ಸಿದ್ದ. ಸಚಿವ ‌ಸಂಪುಟ ವಿಸ್ತರಣೆ ಕುರಿತಾಗಿ ನಾನು ಹಾದಿ ಬೀದಿಯಲ್ಲಿ ಮಾತನಾಡುವುದಿಲ್ಲಾ. ಈ ಬಗ್ಗೆ ಪಕ್ಷದ ವರಿಷ್ಟರ ಗಮನಕ್ಕೆ ತಂದಿದ್ದೇನೆ ಎಂದರು.

ರಾಜ್ಯದಲ್ಲಿ ಅಭಿವೃದ್ದಿ ಕೆಲಸಗಳಿಗೆ ಹಣ ಸರಿಯಾಗಿ ಬಿಡುಗಡೆಯಾಗುತ್ತಿಲ್ಲ.ಇದರಿಂದಾಗಿ ನಮ್ಮ ನಮ್ಮ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲಾ ಈ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕ್ಷೇತ್ರದ ಅಭಿವೃದ್ದಿಗಾಗೀ ಜನರು ನನಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ ಮಾಡುತ್ತಿದ್ದು ಅಭಿವೃದ್ದಿ ದೃಷ್ಟಿಯಿಂದ ಸಚಿವ ಸ್ಥಾನ ನೀಡುವಂತೆ ಕೇಳಿದ್ದೇನೆ ಎಂದು ಹೇಳಿದರು.

ಯಾವುದೇ ಕಾರಣಕ್ಕೂ ಬಂಡಾಯದ ಪ್ರಶ್ನೇಯೇ ಇಲ್ಲಾ, ಈ ಹಿಂದೆ ರೆಸಾರ್ಟ್‌ ರಾಜಕೀಯ ಮಾಡಿ ತಪ್ಪು ಮಾಡಿದ್ದೇನೆ. ಮುಂದೆ ನಾನು ಅಂತಹ ತಪ್ಪನ್ನು ಮಾಡುವುದಿಲ್ಲ. ಎಲ್ಲಿ ಏನು ಹೇಳಬೇಕೋ ಅಲ್ಲಿಯೇ ಹೇಳುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆ ಎಂಬುದು ಸಣ್ಣ ಮಕ್ಕಳ ಅಟದ ಗೊಂಬೆಯಂತಾಗಿದೆ. ನನಗೂ ಒಂದು ಕಾರು, ಮನೆ ಕೊಟ್ಟಿದ್ದಾರೆ. ಆದರೆ ನನಗೆ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ‌ರೇಣುಕಾಚಾರ್ಯ ಅವರು ಅಸಮಾಧಾನ ವ್ಯಕ್ತಪಡಿಸಿದರು.

ದೂರು ದಾಖಲಿಸಿದರೆ ಸ್ವಾಗತಿಸುವೆ:

ಒಂದು ವೇಳೆ ನಾನು ಕಾನೂನು ಉಲ್ಲಂಘಿಸಿ ಕಾರ್ಯಕ್ರಮ ನಡೆಸಿದ್ದರೆ, ಪೊಲೀಸರು ಯಾವುದೇ ಕ್ಷಣದಲ್ಲೂ ನನ್ನ ಮೇಲೆ ಎಪ್ ಐ ಆರ್‌ ಸೇರಿದಂತೆ ಯಾವುದೇ ಕಾನೂನು ಕ್ರಮ ತೆಗೆದುಕೊಂಡರೂ ಅದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುವೆ ಎಂದರು.

ನನ್ನ ವಿರುದ್ಧ ದೂರು ದಾಖಲಿಸದಂತೆ ನಾನು ಯಾವ ಅಧಿಕಾರಿಯ ಮೇಲೆಯೂ ಒತ್ತಡ ಹಾಕಿಲ್ಲ. ನಾನೊಬ್ಬ ಜವಬ್ದಾರಿಯುತ ಜನಪ್ರತಿನಿಧಿಯಾಗಿದ್ದು, ಈ ನೆಲದ ಕಾನೂನಿಗೆ ‌ಗೌರವ ಕೊಡುತ್ತೇನೆ. ಪೊಲೀಸರು ಈಗಲೇ ದೂರು ದಾಖಲಿಸಿದರೂ ಅದನ್ನು ಕಾನೂನಿನಡಿ ಎದುರಿಸುವೆ. ಈಗಾಗಲೇ ಇದರ ಬಗ್ಗೆ ಹಲವಾರು ಬಾರಿ ನಾನೇ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್ ನಾಯಕರಂತೆ ನಾನು ದುರಹಂಕಾರ ಪ್ರದರ್ಶನ ಮಾಡುತ್ತಿಲ್ಲ. ಅವರದ್ದು ಕೊರೊನಾ ಅಂಟಿಸುವ ಪಾದಯಾತ್ರೆಯಾಗಿತ್ತು. ಜನಸಾಮಾನ್ಯರಿಗೊಂದು, ಕಾಂಗ್ರೆಸ್ ಪಕ್ಷಕ್ಕೊಂದು ನ್ಯಾಯ ಇಲ್ಲ. ನನ್ನ ಮೇಲೆ ದೂರು ಹಾಕಲಿ ಎಂದು ಹೇಳುವ ನೈತಿಕತೆ ಕಾಂಗ್ರೆಸ್ ಪಕ್ಷದವರಿಗೆ ಇಲ್ಲ. ಕಡೆ ಪಕ್ಷ ನಾನು ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕಾಗಿ ರಾಜ್ಯದ ಜನತೆಯಲ್ಲಿ ಕ್ಷಮೆ ಕೇಳಿದ್ದೇನೆ. ಆದರೆ, ಕಾಂಗ್ರೆಸ್ ಪಕ್ಷದವರು ನನ್ನ ಮೇಲೆ ದೂರು ಹಾಕಿ ಎಂದು ಹೇಳುವ ಮೂಲಕ ದುರಂಹಕಾರ ಪ್ರದರ್ಶಿಸುತ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.

ಸೇವಾ ಲಾಲ್ ಜಯಂತಿ ರದ್ದು:

ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ನಡೆಯ ಬೇಕಾಗಿದ್ದ ಸಂತ ಸೇವಾ ಲಾಲ್‌ 283 ನೇ ಜಯಂತಿಯನ್ನು ರದ್ದು ಮಾಡಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹರಜಾತ್ರೆ, ತರಳಬಾಳು ಹುಣ್ಣಿಮೆಯನ್ನು ರದ್ದು ಮಾಡಲಾಗಿದ್ದು, ಅದೇ ರೀತಿ ಸಂತ ಸೇವಾಲಾಲರ ಜಯಂತಿಯನ್ನು ರದ್ದು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಫೆಬ್ರವರಿ 14 ಹಾಗೂ 15 ರಂದು ಸಂತಸೇವಾಲಾಲರ ಜಯಂತಿ ನಡೆಯಲಿದ್ದು ಅಂದು ಮಾಲಾದಾರಿಗಳು ಸೇವಾಲಾಲ್ ಜನ್ಮಸ್ಥಳಕ್ಕೆ ಬಂದು ಮಾಲೆ ತೆಗೆದು ಭಕ್ತಿ ಸಮರ್ಪಿಸುವುದು ವಾಡಿಕೆ, ಆದರೇ ಈ ಬಾರೀ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಕ್ತರು ತಮ್ಮ ಮನೆಗಳಲ್ಲೇ ಪೂಜೆ ಸಲ್ಲಿಸುವಂತೆ ಮನವಿ ಮಾಡಿದರು.

English summary
Karnataka cabinet minister like gujurat model except CM Basavarj Bommai: MP Renukacharya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X