ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊರಟ್ಟಿ ನೀಡಿರುವ ಈ ಎಲ್ಲಾ ನಿಯಮಗಳನ್ನು ಅಧಿವೇಶನದಲ್ಲಿ ಪಾಲಿಸಲೇಬೇಕು

|
Google Oneindia Kannada News

ಬೆಂಗಳೂರು, ನವೆಂಬರ್ 19: ಬೆಳಗಾವಿ ಅಧಿವೇಶನ ಇನ್ನೇನು ಹೊಸ್ತಿಲಲ್ಲಿರುವಾಗ ಪರಿಷತ್‌ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಪರಿಷತ್ ಸದಸ್ಯರು ಅಧಿವೇಶನದಲ್ಲಿ ಪಾಲಿಸಲೇಬೇಕಾದ ನಿಯಮಗಳನ್ನು ನೀಡಿದ್ದಾರೆ.

ಸದನಕ್ಕೆ ಆಗಮಿಸಿದಾಗ ಮತ್ತು ನಿರ್ಗಮಿಸುವಾದ ಸಭಾಪತಿ ಪೀಠಕ್ಕೆ ವಂದಿಸಬೇಕು, ಸದನದ ಕಾರ್ಯಕಲಾಪಗಳಿಗೆ ಸಂಬಂಧಿಸಿದವು ಬಿಟ್ಟು ಇನ್ನಾವುದೇ ಪುಸ್ತಕ, ಪತ್ರಿಕೆಗಳನ್ನು ಸದನಕ್ಕೆ ತರಬಾರದು ಮತ್ತು ಸದನದಲ್ಲಿ ಓದಬಾರದು ಎಂದು ಸಭಾಪತಿ ಸೂಚನೆ ನೀಡಿದ್ದಾರೆ.

ಪರಿಷತ್ ಸಭಾಪತಿ ಆಯ್ಕೆ ಯಾವಾಗ, ಬೆಳಗಾವಿ ಅಧಿವೇಶನದಲ್ಲಾ?ಪರಿಷತ್ ಸಭಾಪತಿ ಆಯ್ಕೆ ಯಾವಾಗ, ಬೆಳಗಾವಿ ಅಧಿವೇಶನದಲ್ಲಾ?

ಸದನದ ಕಾರ್ಯಕಲಾಪಗಳಿಗೆ ವಿಘ್ನ ಅಥವಾ ತಡೆ ಮಾಡುವಂತಿಲ್ಲ. ಸದನದ ಸಭಾಪತಿ ಪೀಠದ ಬಳಿಗೆ ಖುದ್ದಾಗಿ ಹೋಗುವಂತಿಲ್ಲ. ಅವಶ್ಯಕತೆ ಇದ್ದರೆ ಸದನದ ಅಧಿಕಾರಿಗಳ ಕೈಯಿಂದ ಚೀಟಿ ಕಳುಹಿಸಬೇಕು ಎಂದು ಬಸವರಾಜ ಹೊರಟ್ಟಿ ನಿಯಮ ವಿಧಿಸಿದ್ದಾರೆ.

Basavaraj Horatti gives rules that must be followed in the session

ಸದನದ ಕಾರ್ಯಕಲಾಪಗಳಿಗೆ ಹೊರತಾದ ಯಾವುದೇ ಕರಪ್ರಗಳು, ಪುಸ್ತಕಗಳನ್ನು ಸದನದ ಆವರಣದಲ್ಲಿ ಹಂಚುವಂತಿಲ್ಲ. ಸದನದಲ್ಲಿ ಪ್ರತಿಭಟನೆ ಸೂಚಕವಾಗಿ ಕಾಗದಪತ್ರಗಳನ್ನು ಹರಿದುಹಾಕುವಂತಿಲ್ಲ. ಸಭಾಪತಿ ಸದನವನ್ನುದ್ದೇಶಿಸಿ ಮಾತನಾಡುವಾಗ ಯಾರೂ ಎದ್ದುಹೋಗುವಂತಿಲ್ಲ ಎಂದು ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಡಿ.10 ರಿಂದ ಬೆಳಗಾವಿ ಅಧಿವೇಶನ, ಸರ್ಕಾರದ ಮೇಲೆರಗಲು ವಿಪಕ್ಷಕ್ಕೆ ಕಾತರಡಿ.10 ರಿಂದ ಬೆಳಗಾವಿ ಅಧಿವೇಶನ, ಸರ್ಕಾರದ ಮೇಲೆರಗಲು ವಿಪಕ್ಷಕ್ಕೆ ಕಾತರ

ಪ್ರಶ್ನೆ ಕೇಳಲು ಸೂಕ್ತ ಸಮಯವನ್ನು ಆಯ್ಕೆ ಮಾಡಿಕೊಳ್ಳಬೇಕು. ತಮಗೆ ದೊರೆತ ಅವಧಿಯಲ್ಲಿ ಸಮಯವ್ಯಯ ಮಾಡದೆ ಜನರಿಗೆ ಸಹಕಾರಿ ಆಗುವಂತಹಾ ವಿಷಯ ಪ್ರಸ್ತಾಪಿಸಿ ಉತ್ತರಗಳನ್ನು ಪಡೆಯಬೇಕು ಎಂದು ಸಭಾಪತಿಗಳು ಸೂಚನೆ ನೀಡಿದ್ದಾರೆ.

ಬೆಳಗಾವಿ ಅಧಿವೇಶನವು ಡಿಸೆಂಬರ್ 10 ಕ್ಕೆ ಪ್ರಾರಂಭವಾಗಲಿದ್ದು, ಡಿಸೆಂಬರ್ 21 ರ ವರೆಗೆ ನಡೆಯಲಿದೆ.

English summary
Speaker Basavaraj Horatti gives rules to members which should be followed in the upcoming assembly session. Belgavi session going to start from December 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X