• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಎಂ ಆಗಿ ಅಧಿಕಾರ ವಹಿಸಿಕೊಂಡ ನಂತರ ಬೊಮ್ಮಾಯಿ ಮೊದಲ ಘೋಷಣೆ

|
Google Oneindia Kannada News

ಬೆಂಗಳೂರು, ಜುಲೈ 28: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಬಸವರಾಜ ಬೊಮ್ಮಾಯಿ, ಬುಧವಾರ ರಾಜ್ಯ ಸಚಿವ ಸಂಪುಟ ಸಭೆ ನಡೆಸಿದ್ದಾರೆ. ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಮೊದಲನೇ ದಿನ ರಾಜ್ಯದಲ್ಲಿನ ಪ್ರಮುಖ ವಿಷಯಗಳ ಕುರಿತು ಮಾತನಾಡಿದ ಅವರು ಕೆಲವೊಂದು ಬದಲಾವಣೆಗಳ ಕುರಿತು ಪ್ರಸ್ತಾಪ ಮಾಡಿದ್ದಾರೆ.

"ಪ್ರಮಾಣ ವಚನ ಸ್ವೀಕರಿಸಿದ ನಂತರ ರಾಜ್ಯದ ಬೆಳವಣಿಗೆ ಕುರಿತು ನಮ್ಮ ಚಿಂತನೆ ಆರಂಭವಾಗಿದೆ. ಪೂರ್ಣ ಪ್ರಮಾಣದ ಸಂಪುಟ ರಚನೆ ಆಗಿಲ್ಲ. ಆದರೂ ಆಡಳಿತ ಯಂತ್ರದಲ್ಲಿ ಯಾವುದೇ ವ್ಯತ್ಯಾಸ ಆಗಬಾರದು ಎಂದು ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದೇನೆ" ಎಂದು ಹೇಳಿದರು. ಅಧಿಕಾರ ವಹಿಸಿಕೊಂಡ ಮೊದಲ ದಿನ ರೈತರ ಏಳಿಗೆ ಸಂಬಂಧ ಮೊದಲ ನಿರ್ಣಯ ಪ್ರಕಟಿಸಿದ್ದಾರೆ. ಮುಂದೆ ಓದಿ...

 ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ

ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ

ರೈತರ ಮಕ್ಕಳಿಗಾಗಿ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ಕೊಡಲು, ರೈತರ ಮಕ್ಕಳು ವಿದ್ಯೆಯಿಂದ ವಂಚಿತರಾಗದಂತೆ ಹೊಸ ಶಿಷ್ಯ ವೇತನ ಜಾರಿಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದು, ಇದಕ್ಕಾಗಿ 1000 ಕೋಟಿ ಹೆಚ್ಚುವರಿ ವೆಚ್ಚದ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
1. ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ 1000 ಕೋಟಿ ಹೆಚ್ಚುವರಿ ವೆಚ್ಚದ ಯೋಜನೆ
2. ಸಂಧ್ಯಾ ಸುರಕ್ಷಾ ಯೋಜನೆ 1000 ರೂ ಇಂದ 1200 ರೂ ಹೆಚ್ಚಳ- 862 ಕೋಟಿ ವೆಚ್ಚ. 35. 98 ಲಕ್ಷ ಫಲಾನುಭವಿಗಳಿಗೆ ಅನುಕೂಲ.
3. ವಿಧವಾ ವೇತನ 600 ರಿಂದ 800ಕ್ಕೆ ಹೆಚ್ಚಳ- 408. ಕೋಟಿ, 17 ಲಕ್ಷ
4. ಅಂಗವಿಕಲರಿಗೆ 600 ರಿಂದ 800 ಕೋಟಿ ರೂ- 3.66 ಫಲಾನುಭವಿಗಳಿಗೆ ಅನುಕೂಲ. 90 ಕೋಟಿ ಹೆಚ್ಚುವರಿ ಹೊರೆ.

ಆರ್ಥಿಕ, ಸಾಮಾಜಿಕ ಸವಾಲುಗಳನ್ನು ಎದುರಿಸಬೇಕಿದೆ: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಆರ್ಥಿಕ, ಸಾಮಾಜಿಕ ಸವಾಲುಗಳನ್ನು ಎದುರಿಸಬೇಕಿದೆ: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

 ಶೇ 5ರಷ್ಟು ಖರ್ಚು ಕಡಿಮೆ ಮಾಡಲು ಸೂಚನೆ

ಶೇ 5ರಷ್ಟು ಖರ್ಚು ಕಡಿಮೆ ಮಾಡಲು ಸೂಚನೆ

"ಕೊರೊನಾ ಸೋಂಕಿನಿಂದಾಗಿ ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ಆರ್ಥಿಕ ಶಿಸ್ತು ತರುವ ಅಗತ್ಯವಿದೆ. ಹೀಗಾಗಿ ಅನಗತ್ಯ ಖರ್ಚು ಕಡಿಮೆ ಮಾಡಲು ಸೂಚಿಸಿದ್ದೇನೆ" ಎಂದು ತಿಳಿಸಿದರು. ಮುಂದಿನ ಮಾರ್ಚ್‌ ಅಂತ್ಯದ ಒಳಗೆ ಕನಿಷ್ಠ ಶೇಕಡ 5ರಷ್ಟು ಖರ್ಚು ಕಡಿಮೆ ಮಾಡಲು ಸೂಚಿಸಿರುವುದಾಗಿ ತಿಳಿಸಿದರು. ಈ ವಿಷಯದಲ್ಲಿ ಅಧಿಕಾರಿಗಳ ಕಾರ್ಯಕ್ಷಮತೆ ಆಧರಿಸಿ ಜವಾಬ್ದಾರಿ ಕೊಡುತ್ತೇನೆ. ಯಾವುದೇ ಯೋಜನೆಗಳಿಗೆ ಕತ್ತರಿ ಹಾಕದೆ ವೆಚ್ಚ ಕಡಿಮೆ ಮಾಡಬೇಕು ಎಂದು ಹೇಳಿದರು.

"ಸಚಿವನಾಗಿ ನಿರ್ಣಯ ಹೇಳುತ್ತಿದ್ದೆ, ಈಗ ಸಿಎಂ ಆಗಿ ಹೇಳುತ್ತಿದ್ದೇನೆ"

ಸಿಎಂ ಆಗಿ ತಮ್ಮ ಮೊದಲ ದಿನದ ಅನುಭವದ ಕುರಿತು ಮಾತನಾಡಿರುವ ಅವರು, "ಈ ಮುನ್ನ ಸಚಿವನಾಗಿ ಸಂಪುಟ ನಿರ್ಣಯಗಳನ್ನು ಹೇಳುತ್ತಿದ್ದೆ. ಈಗ ಅದೇ ನಿರ್ಣಯಗಳನ್ನು ಸಿಎಂ ಆಗಿ ಹೇಳುತ್ತಿದ್ದೇನೆ. ಮೋದಿ, ಶಾ, ನಡ್ಡಾ ನನಗೆ ಅವಕಾಶ ಈ ಕೊಟ್ಟಿದ್ದಾರೆ. ನಮ್ಮ ನಾಯಕ ಯಡಿಯೂರಪ್ಪ ಪ್ರಸ್ತಾವನೆ ಇಟ್ಟಿದ್ದರು. ಎಲ್ಲ ಶಾಸಕರು ಅದಕ್ಕೆ ಅನುಮೋದನೆ ಕೊಟ್ಟಿದ್ದರು. ಹಾಗಾಗಿ ನಾನು ಇಂದು ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದೇನೆ" ಎಂದು ಹೇಳಿದರು.

"ಅಧಿಕಾರಿಗಳ ಚಲ್ತಾ ಹೈ ಆ್ಯಟಿಟ್ಯೂಡ್ ಸಹಿಸುವುದಿಲ್ಲ"

"ಪೂರ್ಣ ಪ್ರಮಾಣದ ಸಂಪುಟ ಇನ್ನೂ ಇಲ್ಲ. ಇಂದು ನಾನೊಬ್ಬನೇ ಪ್ರಮಾಣ ಸ್ವೀಕರಿಸಿದ್ದೇನೆ. ಆಡಳಿತ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆ ಆಗಬಾರದು. ಹಾಗಾಗಿ ಇಂದು ಸಂಪುಟ ಸಭೆ ನಡೆಸಿದ್ದೇನೆ. ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ್ದೇನೆ" ಎಂದರು.

ಎಲ್ಲರಿಗೂ ಸರ್ಕಾರ ಇದೆ ಅನ್ನುವ ಭಾವನೆ ಬರಬೇಕು. ಕೇವಲ ಆದೇಶದಿಂದ ಗೊತ್ತಾಗುವುದಲ್ಲ. ಆದೇಶದ ಅನುಷ್ಠಾನಗಳಿಂದ ಅದು ಗೊತ್ತಾಗಬೇಕು. ನಮ್ಮದು ಮೈಕ್ರೋ ಲೆವೆಲ್ ಮೇನೇಜ್ ಮೆಂಟ್. ಇಲಾಖೆಗಳ ನಡುವೆ ಸಮನ್ವಯತೆ ಇರಬೇಕು. ಸಮಯಕ್ಕೆ ಸರಿಯಾಗಿ ಕೆಲಸ ಅನುಷ್ಠಾನ ಆಗಬೇಕು. ಏನೇ ಮಾಡಿದರೂ ನಡೆಯುತ್ತದೆ ಎನ್ನುವ ಮನೋಭಾವವನ್ನು ಅಧಿಕಾರಿಗಳು ಬಿಡಬೇಕು. ಇನ್ನು ಮುಂದೆ ಅಧಿಕಾರಿಗಳ ಚಲ್ತಾ ಹೈ ಆ್ಯಟಿಟ್ಯೂಡ್ ಸಹಿಸುವುದಿಲ್ಲ ಎಂದರು.

  B S Yediyurappa ಮುಂದೆ ಮೂರನೇ ಬಾರಿ ಮಂಡಿಯೂರಿದ ಹೈಕಮಾಂಡ್ | Oneindia Kannada
   ಕೊರೊನಾ ಸೂಕ್ತ ನಿರ್ವಹಣೆಯ ಭರವಸೆ

  ಕೊರೊನಾ ಸೂಕ್ತ ನಿರ್ವಹಣೆಯ ಭರವಸೆ

  ರಾಜ್ಯದಲ್ಲಿನ ಕೊರೊನಾ ಪರಿಸ್ಥಿತಿ ಕುರಿತು ಮಾತನಾಡಿದ ಅವರು, "ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿದೆ. ಆದರೆ ಮೈಮರೆಯೋಕೆ‌ ಸಾಧ್ಯವಿಲ್ಲ. ಲಸಿಕೆ ಕುರಿತು ಹೆಚ್ಚು ಗಮನ ನೀಡುತ್ತೇವೆ" ಎಂದು ಭರವಸೆ ನೀಡಿದರು.

  English summary
  On the day of swearing in ceremony, newly elected Karnataka CM Basavaraj Bommai has made significant announcements. Know more...
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X