ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೊಮ್ಮಾಯಿ ಸರಕಾರ ಅಲ್ಪಾಯುಶಿ: ಮೈಲಾರ ದೈವವಾಣಿಯಲ್ಲಿ ಉಲ್ಲೇಖವಾದ ಗಡ್ಡದಾರಿ ಸಿಎಂ ಯಾರು?

|
Google Oneindia Kannada News

ಯಡಿಯೂರಪ್ಪನವರು ಬಯಸಿದಷ್ಟು ದಿನ ಮಾತ್ರ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವ ಮಾತು ಅಲ್ಲಲ್ಲಿ ಕೇಳಿ ಬರುತ್ತಿದೆ. ಹಿಂದೆ, ಡಿ.ವಿ.ಸದಾನಂದ ಗೌಡ ಎದುರಿಸಿದ ಸಮಸ್ಯೆಯನ್ನು ಬೊಮ್ಮಾಯಿ ಎದುರಿಸಬೇಕಾಗಿ ಬರುತ್ತದೆ ಎನ್ನುವ ವಿರೋಧಿ ಪಾಳಯದಲ್ಲಿ ಚಾಲ್ತಿಯಲ್ಲಿರುವ ಮಾತು.

Recommended Video

ಬೊಮ್ಮಾಯಿ ಖುರ್ಚಿ ಜಾಸ್ತಿ ದಿನ ಉಳಿಯಲ್ವಂತೆ! | Oneindia Kannada

ಸಚಿವ ಸಂಪುಟ ರಚನೆಗಾಗಿ ಬೊಮ್ಮಾಯಿ ಕಸರತ್ತನ್ನು ಆರಂಭಿಸಿದ್ದಾರೆ. ದೆಹಲಿಯಲ್ಲಿರುವ ಬೊಮ್ಮಾಯಿಯವರಿಗೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆಯಿದೆ. ಯಡಿಯೂರಪ್ಪನವರ ಸರಕಾರದಲ್ಲಿದ್ದ ಹಿರಿಯ/ಕಿರಿಯ/ಬಾಂಬೆ ಫ್ರೆಂಡ್ಸ್ ಮುಖಂಡರಿಗೆ ಈ ಬಾರಿ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆಯಿಲ್ಲ ಎಂದೇ ಹೇಳಲಾಗುತ್ತಿದೆ.

ಈಗ ತಾನೇ ಸಿಎಂ ಆಗಿದ್ದಾರೆ, ಅಶುಭ ನುಡಿಯಲಾರೆ: ಕೋಡಿಶ್ರೀಗಳ ಭವಿಷ್ಯದ ಅರ್ಥವೇನು?ಈಗ ತಾನೇ ಸಿಎಂ ಆಗಿದ್ದಾರೆ, ಅಶುಭ ನುಡಿಯಲಾರೆ: ಕೋಡಿಶ್ರೀಗಳ ಭವಿಷ್ಯದ ಅರ್ಥವೇನು?

ಎರಡು ದಿನಗಳ ಹಿಂದೆ ಕೋಡಿಮಠದ ಶ್ರೀಗಳಲ್ಲಿ ನೂತನ ಸರಕಾರದ ಭವಿಷ್ಯದ ಬಗ್ಗೆ ಕೇಳಿದಾಗ, ಈಗತಾನೇ ಮುಖ್ಯಮಂತ್ರಿಯಾಗಿದ್ದಾರೆ, ಅಪಶಕುನ ನುಡಿಯಲಾರೆ, ಆಷಾಢದಲ್ಲಿ ಹೇಳುವುದಿಲ್ಲ, ಶ್ರಾವಣ ಮಾಸದಲ್ಲಿ ಮಾತನಾಡುತ್ತೇನೆ ಎಂದು ಹೇಳಿದ್ದರು. ಇದರಿಂದ ಬೊಮ್ಮಾಯಿ ಸರಕಾರ ಅಲ್ಪಾಯುಶಿಯೇ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿತ್ತು.

ಕೋಡಿಮಠದ ಶ್ರೀಗಳು ಪರೋಕ್ಷವಾಗಿ ಬೊಮ್ಮಾಯಿ ಸರಕಾರ ಹೆಚ್ಚುದಿನ ಇರುವುದಿಲ್ಲ ಎಂದು ಹೇಳಿದ್ದರು. ಆದರೆ, ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿಗಳು ಆ ಮಾತನ್ನು ನೇರವಾಗಿ ಹೇಳಿದ್ದಾರೆ. ಗಡ್ಡಧಾರಿಯೊಬ್ಬರು ಮುಂದಿನ ದಿನಗಳಲ್ಲಿ ರಾಜ್ಯದ ದೊರೆಯಾಗಲಿದ್ದಾರೆ ಎಂದು ಹೇಳಿದ್ದಾರೆ. ಹಾಗಾದರೆ, ಆ ಗಡ್ಡಧಾರಿ ಯಾರಿರಬಹುದು? ಮಂಚೂಣಿಯಲ್ಲಿ ಇಬ್ಬರು!!

 ಕೋಡಿಮಠ ಶ್ರೀ ಭವಿಷ್ಯ: ಸಂಕ್ರಾಂತಿಯೊಳಗೆ ದೇಶದಲ್ಲಿ ದೊಡ್ಡಮಟ್ಟದ ರಾಜಕೀಯ ಅವಘಡ! ಕೋಡಿಮಠ ಶ್ರೀ ಭವಿಷ್ಯ: ಸಂಕ್ರಾಂತಿಯೊಳಗೆ ದೇಶದಲ್ಲಿ ದೊಡ್ಡಮಟ್ಟದ ರಾಜಕೀಯ ಅವಘಡ!

 ಈಗತಾನೇ ಅವರು ಮುಖ್ಯಮಂತ್ರಿಯಾಗಿದ್ದಾರೆ, ಈಗಲೇ ಅಶುಭವನ್ನು ನುಡಿಯಲಾರೆ

ಈಗತಾನೇ ಅವರು ಮುಖ್ಯಮಂತ್ರಿಯಾಗಿದ್ದಾರೆ, ಈಗಲೇ ಅಶುಭವನ್ನು ನುಡಿಯಲಾರೆ

"ರಾಜ್ಯ ರಾಜಕೀಯದ ಬಗ್ಗೆ ಪೂರ್ಣ ಮಂತ್ರಿ ಮಂಡಲ ರಚನೆಯಾದ ನಂತರ ಹೇಳುತ್ತೇನೆ. ದೈವಕೃಪೆ ಇದ್ದರೆ ಬೊಮ್ಮಾಯಿಯವರಿಗೆ ಒಳ್ಳೆಯದಾಗುತ್ತದೆ. ಈಗತಾನೇ ಅವರು ಮುಖ್ಯಮಂತ್ರಿಯಾಗಿದ್ದಾರೆ, ಹಾಗಾಗಿ ಈಗಲೇ ಅಶುಭವನ್ನು ನುಡಿಯಲಾರೆ. ಜ್ಯೋತಿಷ್ಯ ಬೇರೆ, ಗುರುಪೀಠದಿಂದ ನುಡಿಯುವ ಮಾತು ಬೇರೆ. ಪೀಠಕ್ಕೆ ಅಗೌರವ ಆಗಬಾರದು, ಹೇಳಿದ್ದು ಸತ್ಯವಾಗಬೇಕು. ಕುಂಭದಲಿ ಗುರುಬರಲು ತುಂಬೋ ಕೆರೆಕಟ್ಟೆ, ಹಾಗಾಗಿ, ಕಾರ್ತಿಕದ ವರೆಗೆ ಮಳೆ ಇರಲಿದೆ"ಎಂದು ಕೋಡಿಶ್ರೀಗಳು ಹೇಳಿದ್ದರು.

 ಮುತ್ತಿನ ರಾಶಿ ಮೂರು ಭಾಗವಾಗಿತಲೇ ಪರಾಕ್’, ಇದರರ್ಥ ಮೂವರು ಮುಖ್ಯಮಂತ್ರಿಗಳು

ಮುತ್ತಿನ ರಾಶಿ ಮೂರು ಭಾಗವಾಗಿತಲೇ ಪರಾಕ್’, ಇದರರ್ಥ ಮೂವರು ಮುಖ್ಯಮಂತ್ರಿಗಳು

"ಮೈಲಾರದಲ್ಲಿ ಭರತ ಹುಣ್ಣಿಮೆಯಂದು ನುಡಿದ ದೈವವಾಣಿ ‘ಮುತ್ತಿನ ರಾಶಿ ಮೂರು ಭಾಗವಾಗಿತಲೇ ಪರಾಕ್' ಎಂದಾಗಿತ್ತು. ಇದರರ್ಥ ಮೂವರು ಮುಖ್ಯಮಂತ್ರಿಗಳು ರಾಜ್ಯವನ್ನು ಆಳಲಿದ್ದಾರೆ ಎಂದು. ಈಗಿರುವ ಬಿಜೆಪಿಯ ಸರಕಾರದಲ್ಲಿ ಮೂವರು ಸಿಎಂ ಆಗಲಿದ್ದಾರೆ ಎನ್ನುವುದು ಇದರರ್ಥ"ಎಂದು ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಹೇಳಿದ್ದಾರೆ.

 ಬಸವರಾಜ ಬೊಮ್ಮಾಯಿಯವರು ಪೂರ್ಣಾವಧಿಯನ್ನು ಮುಗಿಸುವುದಿಲ್ಲ

ಬಸವರಾಜ ಬೊಮ್ಮಾಯಿಯವರು ಪೂರ್ಣಾವಧಿಯನ್ನು ಮುಗಿಸುವುದಿಲ್ಲ

"ಬಸವರಾಜ ಬೊಮ್ಮಾಯಿಯವರು ಪೂರ್ಣಾವಧಿಯನ್ನು ಮುಗಿಸುವುದಿಲ್ಲ. ಇನ್ನೇನು ಆರೇಳು ತಿಂಗಳು ಮಾತ್ರ ಅವರು ರಾಜ್ಯಭಾರ ನಡೆಸುತ್ತಾರೆ. ಮುಂದಿನ ಯುಗಾದಿಯೊಳಗೆ ಗಡ್ಡಧಾರಿಯೊಬ್ಬರು ಈ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ಈ ಹಿಂದೆ ಬೊಮ್ಮಾಯಿಯವರು ಕ್ಷೇತ್ರಕ್ಕೆ ಭೇಟಿ ನೀಡಿದಾಗ ಯಡಿಯೂರಪ್ಪನವರ ನಂತರ ನೀವೇ ಮುಖ್ಯಮಂತ್ರಿ ಆಗುತ್ತೀರಿ ಎಂದು ಹೇಳಿದ್ದೆ" ಎಂದು ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಹೇಳಿದ್ದಾರೆ.

 ಹಣೆಯಲ್ಲಿ ತಿಲಕ, ಕಿವಿಯಲ್ಲಿ ಓಲೆ, ಗಡ್ಡ ಬಿಡುವುದು ನನ್ನ ಐಡೆಂಟಿಟಿ

ಹಣೆಯಲ್ಲಿ ತಿಲಕ, ಕಿವಿಯಲ್ಲಿ ಓಲೆ, ಗಡ್ಡ ಬಿಡುವುದು ನನ್ನ ಐಡೆಂಟಿಟಿ

ಹಾಗಾದರೆ, ಆ ಗಡ್ಡಧಾರಿ ಯಾರಿರಬಹುದು ಎನ್ನುವುದು ಈಗಲೇ ಚರ್ಚೆಯ ವಿಷಯವಾಗಿದೆ. ಬಿಜೆಪಿಯ ಇಬ್ಬರು ಹಿರಿಯ ಮುಖಂಡರು ಗಡ್ಡಧಾರಿಗಳು, ಅವರಿಬ್ಬರಲ್ಲಿ ಒಬ್ಬರು ಮೈಲಾರ ದೈವವಾಣಿಯಂತೆ ಸಿಎಂ ಆಗಬಹುದೇ. ಸಿ.ಟಿ.ರವಿ ಮತ್ತು ಬಿ.ಶ್ರೀರಾಮುಲು ಹೆಚ್ಚಾಗಿ ಗಡ್ಡಬಿಟ್ಟುಕೊಂಡು ಇರುವವರು. ಈ ಬಗ್ಗೆ ರವಿಯವರನ್ನು ಮಾಧ್ಯಮದವರು ಕೇಳಿದಾಗ, "ಹಣೆಯಲ್ಲಿ ತಿಲಕ, ಕಿವಿಯಲ್ಲಿ ಓಲೆ, ಗಡ್ಡ ಬಿಡುವುದು ನನ್ನ ಐಡೆಂಟಿಟಿ, ಸಿಎಂಗಾಗಿ ಗಡ್ದ ಬಿಟ್ಟಿರುವುದಲ್ಲ"ಎಂದು ಸಿ.ಟಿ.ರವಿ ಉತ್ತರಿಸಿದ್ದಾರೆ. ಇನ್ನು, ಶ್ರೀರಾಮುಲು ಅವರ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ.

English summary
Basavaraj Bommai Government Will Run For Short Period, Bearded Will Be The New CM, As Per Mylara Karnika.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X