ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬಸವಣ್ಣಗೆ ಹಾರ ಹಾಕಬಾರದೆಂದು ಹೇಳಲು ಶೋಭಾ ಯಾರು?'

By Prasad
|
Google Oneindia Kannada News

Recommended Video

Basava Jayanthi 2018 : ಶೋಭಾ ಕರಂದ್ಲಾಜೆಯನ್ನ ತರಾಟೆಗೆ ತೆಗೆದುಕೊಂಡ ರಾಮಲಿಂಗಾ ರೆಡ್ಡಿ | Oneindia Kananda

ಬೆಂಗಳೂರು, ಏಪ್ರಿಲ್ 18 : ಭಾರತದ ಮೊದಲ ಪ್ರಜಾಪ್ರಭುತ್ವವಾದಿ, ಕ್ರಾಂತಿಯೋಗಿ ಬಸವಣ್ಣನ ಜಯಂತ್ಯೋತ್ಸವದಂದು ಬಸವೇಶ್ವರ ಪುತ್ಥಳಿಗೆ ಹೂವಿನ ಹಾರ ಹಾಕಲು ಕಾಂಗ್ರೆಸ್ ನಾಯಕರಿಗೆ ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಹೇಳಿರುವುದು ಭಾರೀ ವಿವಾದ ಸೃಷ್ಟಿಸಿದೆ.

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹಂತದಲ್ಲಿ, ಲಿಂಗಾಯತರ ಮತಗಳಿಗೆಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡು ಭಾರೀ ಪೈಪೋಟಿ ನಡೆಸಿರುವ ಹಿನ್ನೆಲೆಯಲ್ಲಿ, ಶೋಭಾ ಅವರ ಈ ಮಾತು ಎರಡೂ ಪಕ್ಷಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ.

ಯಶವಂತಪುರದಿಂದ ಶೋಭಾ ಕರಂದ್ಲಾಜೆ ಸ್ಪರ್ಧೆ?ಯಶವಂತಪುರದಿಂದ ಶೋಭಾ ಕರಂದ್ಲಾಜೆ ಸ್ಪರ್ಧೆ?

ಶೋಭಾ ಅವರ ಮಾತಿಗೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ತಿರುಗೇಟು ನೀಡಿದ್ದು, ಹಾರ ಹಾಕಬಾರದೆಂದು ಹೇಳಲು ಶೋಭಾ ಕರಂದ್ಲಾಜೆ ಯಾರು? 12ನೇ ಶತಮಾನದ ತತ್ತ್ವಜ್ಞಾನಿ ಬಸವೇಶ್ವರ ಅವರು ಶೋಭಾ ಕರಂದ್ಲಾಜೆ ಅವರ ಆಸ್ತಿಯಾ ಎಂದು ಪ್ರಶ್ನಿಸಿದ್ದಾರೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಹುಟ್ಟಾ ಬ್ರಾಹ್ಮಣನಾದರೂ ಜನಿವಾರವನ್ನು ತ್ಯಜಿಸಿ ಲಿಂಗಾಯತ ಹೊಸ ಧರ್ಮವನ್ನು ಸ್ಥಾಪಿಸಿದ್ದಲ್ಲದೆ, ಸಮಾಜದಲ್ಲಿ ಎಲ್ಲ ಧರ್ಮೀಯರ ಸಮಾನತೆಗೆ ಶ್ರಮಿಸಿದ ಜಗಜ್ಯೋತಿ ಬಸವೇಶ್ವರ ಅವರ ವಚನಗಳು, ಪ್ರಜಾಪ್ರಭುತ್ವವನ್ನು ಸ್ಥಾಪಿಸಿದ ರೀತಿ, ಅವರ ಜೀವನ ಇಂದಿಗೂ ಎಲ್ಲರಿಗೂ ಮಾದರಿಯಾಗಿವೆ.

ಉಪವಾಸ ಕೂತ ಶೋಭಾ ಕರಂದ್ಲಾಜೆಯಿಂದ ಕಾಂಗ್ರೆಸ್ ವಿರುದ್ದ ವಾಗ್ದಾಳಿಉಪವಾಸ ಕೂತ ಶೋಭಾ ಕರಂದ್ಲಾಜೆಯಿಂದ ಕಾಂಗ್ರೆಸ್ ವಿರುದ್ದ ವಾಗ್ದಾಳಿ

ದುರಾದೃಷ್ಟವೆಂದರೆ, ಲಿಂಗಾಯತ ಧರ್ಮವನ್ನು ವೋಟ್ ಬ್ಯಾಂಕ್ ಆಗಿ ಚುನಾವಣೆಯ ಸಮಯದಲ್ಲಿ ಪರಿವರ್ತಿಸಲಾಗಿದೆ. ಒಂದೆಡೆ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಅಸ್ತತ್ವ ನೀಡಿ, ಬಿಜೆಪಿಯ ಕಡೆ ಒಲವು ಹೊಂದಿದ್ದ ಲಿಂಗಾಯತರನ್ನು ಸೆಳೆಯಲು ಕಾಂಗ್ರೆಸ್ ಸರ್ವ ಪ್ರಯತ್ನ ನಡೆಸಿದೆ. ಲಿಂಗಾಯತರ ಮತಗಳು ಯಾರ ಪಾಲಾಗಲಿವೆ ಎಂಬುದು ಮೇ 12ರಂದು ನಡೆಯಲಿರುವ ಮತದಾನ ಮತ್ತು ಮೇ 15ರಂದು ಫಲಿತಾಂಶದಲ್ಲಿ ತಿಳಿದುಬರಲಿದೆ.

ಈ ನಡುವೆ ಎಲ್ಲ ಕರ್ನಾಟಕದ ರಾಜಕಾರಣಿಗಳು ಟ್ವಿಟ್ಟರಿನಲ್ಲಿ ಬಸವೇಶ್ವರ ಅವರಿಗೆ ಶುಭ ಕೋರಿ ತರಹೇವಾರಿ ಟ್ವೀಟುಗಳನ್ನು ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ನಾಯಕ ಯಡಿಯೂರಪ್ಪ, ಕಾಂಗ್ರೆಸ್ ಧುರೀಣ, ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ, ಶೋಭಾ ಕರಂದ್ಲಾಜೆ ಮುಂತಾದವರು ಟ್ವೀಟ್ ಮಾಡಿದ್ದಾರೆ.

ಬಸವಣ್ಣನಿಗೆ ಮೋದಿಯಿಂದ ಕನ್ನಡದಲ್ಲಿ ಶುಭಾಶಯ

ನಾನು ಭಗವಾನ್ ಬಸವೇಶ್ವರರಿಗೆ ತಲೆಬಾಗುತ್ತೇನೆ. ಅವರಿಗೆ ನಮ್ಮ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವಿದೆ. ಸಾಮಾಜಿಕ ಸಾಮರಸ್ಯ, ಸೋದರತ್ವ, ಐಕ್ಯತೆ ಮತ್ತು ಉದಾತ್ತ ಭಾವ ನಮ್ಮನ್ನು ಯಾವತ್ತೂ ಪ್ರೇರೇಪಿಸುತ್ತಿರುತ್ತದೆ. ಜಗದ್ಗುರು ಬಸವೇಶ್ವರರು ನಮ್ಮ ಸಮಾಜವನ್ನು ಒಂದುಗೂಡಿಸಿದರು ಮತ್ತು ಜ್ಞಾನದ ಪ್ರಾಮುಖ್ಯತೆಗೆ ಮಹತ್ವ ನೀಡಿದರು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.

ಶೋಭಾ ಕರಂದ್ಲಾಜೆ ಗೌರವ ಸಲ್ಲಿಕೆ

ಬಸವಣ್ಣನ ಪುತ್ಥಳಿಯನ್ನು ಮಲಿನ ಮಾಡಲು ಕಾಂಗ್ರೆಸ್ ನಾಯಕರಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿ ವಿವಾದಕ್ಕೆ ಕಾರಣರಾಗಿರುವ ಶೋಭಾ ಕರಂದ್ಲಾಜೆ ಅವರು ಬಸವೇಶ್ವರನ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಅವರು ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಗಾಳಿಸುದ್ದಿ ಭಾರೀ ಸದ್ದು ಮಾಡುತ್ತಿದೆ. 2008ರ ಚುನಾವಣೆಯಲ್ಲಿ ಅವರು ಇದೇ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ಸೋಮಶೇಖರ ಗೌಡ ಅವರನ್ನು ಕೇವಲ 1082 ಮತಗಳಿಂದ ಸೋಲಿಸಿ ಪ್ರಥಮ ಬಾರಿ ವಿಧಾನಸೌಧ ಪ್ರವೇಶಿಸಿದ್ದರು.

ಬಸವಣ್ಣನವರು ಸಮಾನತೆಯ ಹರಿಕಾರ

ಬಸವಣ್ಣನವರು ಸಮಾನತೆಯ ಹರಿಕಾರ. ಸಬಲೀಕರಣ ಮತ್ತು ದಾಸೋಹದ ಮೂಲಕ ಅಸಮಾನತೆಯನ್ನು ನೀಗಿಸಬಹುದೆಂದು ತೋರಿದವರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಹಸಿವುಮುಕ್ತ ಕರ್ನಾಟಕಕ್ಕಾಗಿ ಅನ್ನ ಭಾಗ್ಯ, ಕ್ಷೀರ ಭಾಗ್ಯ, ಮಾತೃಪೂರ್ಣ, ಇಂದಿರಾ ಕ್ಯಾಂಟೀನ್ ಆರಂಭಿಸಿದ್ದೇವೆ. 22.5 ಲಕ್ಷ ರೈತರ 8,165 ಕೋಟಿ ರುಪಾಯಿ ಸಾಲವನ್ನು ಮನ್ನಾ ಮಾಡಿದ್ದೇವೆ. ರೈತ ಬೆಳಕು ಯೋಜನೆಯನ್ನು ಕೂಡ ಆರಂಭಿಸಿದ್ದೇವೆ ಎಂದು ಬಸವಣ್ಣನ ಜಯಂತಿಯಂದು ಸಿದ್ದರಾಮಯ್ಯನವರು ತಮ್ಮ ಸಾಧನೆಯನ್ನು ಹೇಳಿಕೊಂಡಿದ್ದಾರೆ.

ಬಸವಣ್ಣನ ಗುಣಗಾನ ಮಾಡಿದ ಪರಮೇಶ್ವರ

ಕಳೆದಬಾರಿ ಸೋತಿತ್ತ ಕೊರಟಗೆರೆ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ ಅವರು ಬಸವಣ್ಣನವರ ಗುಣಗಾನ ಮಾಡಿ, ಅವರ ಸಮಾಯಾತೀತ ವಚನಗಳು ಮತ್ತು ಬೋಧನೆಗಳು ಮನುಕುಲದ ಮೇಲೆ ಗಾಢ ಪ್ರಭಾವ ಬೀರಿವೆ ಎಂದು ಹೇಳಿದ್ದಾರೆ. ಅವರಿಗೆ ವಿರುದ್ಧವಾಗಿ ಜೆಡಿಎಸ್ ನಿಂದ ಸುಧಾಕರ್ ಲಾಲ್ ಅವರು ಸ್ಪರ್ಧಿಸುತ್ತಿದ್ದಾರೆ. ಕಳೆದ ಬಾರಿ ಸುಧಾಕರ್ ಲಾಲ್ ಅವರೇ ಜಿ ಪರಮೇಶ್ವರ ಅವರನ್ನು ಮಣ್ಣುಮುಕ್ಕಿಸಿದ್ದರು.

ಬಸವಣ್ಣನ ಕೃಪೆಗೆ ಪಾತ್ರರಾಗುವರೆ ಯಡಿಯೂರಪ್ಪ

ಲಿಂಗಾಯತರ ಮತಗಳು ಈ ಬಾರಿಯ ಚುನಾವಣೆಯಲ್ಲಿ ನಿರ್ಣಾಯಕವಾಗುವ ಸಾಧ್ಯತೆಗಳು ನಿಚ್ಚಳವಾಗಿ ಕಾಣಿಸುತ್ತಿವೆ. 2008ರ ಚುನಾವಣೆಯಲ್ಲಿ ಲಿಂಗಾಯತರ ಮತಗಳು ಯಡಿಯೂರಪ್ಪನವರ ಕೈಹಿಡಿದಿದ್ದವು. ಶೇ.14ರಷ್ಟಿರುವ ಲಿಂಗಾಯತ ಮತಗಳನ್ನು ಸೆಳೆಯಲು ಎಂಬಿ ಪಾಟೀಲ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕೂಡ ಭಾರೀ ಸರ್ಕಸ್ ನಡೆಸಿದೆ. ಈ ಬಾರಿಯಾದರೂ ಬಸವಣ್ಣನ ಕೃಪೆಗೆ ಪಾತ್ರರಾಗುವರೆ ಯಡಿಯೂರಪ್ಪ?

English summary
Basavanna is not property of Shobha Karandlaje. Who is she to tell not to garland Basaveshwara? Congress leader and home minister Ramalinga Reddy has lambasted Shobha Karandlaje. Shobha had allegedly stated they will not allow Congress leaders to malign the statue of Basavanna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X