ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸವ ಜಯಂತಿ; ಸಮಾಜ ಸುಧಾರಣೆಯ ಆಶಯ ಪಾಲಿಸೋಣ

|
Google Oneindia Kannada News

ಬೆಂಗಳೂರು, ಏಪ್ರಿಲ್ 26 : ಭಾನುವಾರ ಬಸವ ಜಯಂತಿ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೇರಿದಂತೆ ನಾಡಿನ ವಿವಿಧ ಗಣ್ಯರು ರಾಜ್ಯದ ಜನರಿಗೆ ಬಸವ ಜಯಂತಿಯ ಶುಭಾಶಯಗಳನ್ನು ಕೋರಿದ್ದಾರೆ.

ಬಸವ ಜಯಂತಿಯನ್ನು ಸರ್ಕಾರಿ ಕಚೇರಿಗಳಲ್ಲಿ ಈ ಬಾರಿ ಸರಳವಾಗಿ ಆಚರಿಸಲಾಗುತ್ತಿದೆ. ಕೊರೊನಾ ಸೋಂಕು ಹರಡದಂತೆ ತಡೆಯಲು ಲಾಕ್‍ ಡೌನ್ ಜಾರಿಯಲ್ಲಿದೆ. ಆದ್ದರಿಂದ, ಹೆಚ್ಚು ಜನರು ಸೇರದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

ಅನುಭವ ಮಂಟಪ ನಿರ್ಮಾಣಕ್ಕೆ 50 ಕೋಟಿ ಘೋಷಿಸಿದ ಬಿಎಸ್‌ವೈಅನುಭವ ಮಂಟಪ ನಿರ್ಮಾಣಕ್ಕೆ 50 ಕೋಟಿ ಘೋಷಿಸಿದ ಬಿಎಸ್‌ವೈ

ಕರ್ನಾಟಕದ ಸರ್ಕಾರದ ನಿರ್ದೇಶನದಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬಸವಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸಾಂಕೇತಿಕವಾಗಿ ಬಸವ ಜಯಂತಿ ಆಚರಿಸಲಾಗುತ್ತದೆ. ಜನರು ಮನೆಯಲ್ಲಿಯೇ ಇರಬೇಕು ಎಂದು ಮನವಿ ಮಾಡಲಾಗಿದೆ.

ಲಿಂಗಾಯತ ಧರ್ಮ ಸ್ವತಂತ್ರ ಧರ್ಮ: ಸಿದ್ದರಾಮಯ್ಯ ಅಭಿಪ್ರಾಯಲಿಂಗಾಯತ ಧರ್ಮ ಸ್ವತಂತ್ರ ಧರ್ಮ: ಸಿದ್ದರಾಮಯ್ಯ ಅಭಿಪ್ರಾಯ

Basava Jayanthi

12ನೇ ಶತಮಾನದ ತತ್ವಜ್ಞಾನಿ, ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಬಸವಣ್ಣ ದೇಶ ಕಂಡ ಸಾಮಾಜಿಕ ಸುಧಾಕರ. ವಚನ ಸಾಹಿತ್ಯದ ಮೂಲಕ ಜನರನ್ನು ತಲುಪಿದ ಸಾಹಿತಿ. ಸಮಾನತೆಯ ಪಾಠವನ್ನು ವಿಶ್ವಕ್ಕೆ ಸಾರಿದ ಮಹಾನ್ ಜ್ಞಾನಿ.

ಲಿಂಗಾಯತ ಚಳವಳಿಯನ್ನು ಹದಗೆಡಿಸಿದ ರಾಜಕೀಯ ಮುಖಂಡರುಲಿಂಗಾಯತ ಚಳವಳಿಯನ್ನು ಹದಗೆಡಿಸಿದ ರಾಜಕೀಯ ಮುಖಂಡರು

ಆಡು ಭಾಷೆಯಲ್ಲಿ ಸರಳವಾಗಿ ಜನರಿಗೆ ಅರ್ಥವಾಗುವಂತೆ ವಚನಗಳನ್ನು ರಚನೆ ಮಾಡಿದ ಬಸವಣ್ಣನವರು, ಸಮಾಜದಲ್ಲಿ ಹಲವಾರು ಬದಲಾವಣೆಗಳನ್ನು ತಂದರು. ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ಹೋಗಲಾಡಿಸಿದರು.

ಇಷ್ಟಲಿಂಗ ಪೂಜೆಯನ್ನು ಪರಿಚಯಿಸಿದರು. ಶಿವ ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು. ಎಲ್ಲರು ಇಷ್ಟಲಿಂಗವನ್ನು ಧರಿಸಿ ಪೂಜಿಸಬಹುದು ಎಂದು ಸಮಾಜಕ್ಕೆ ಕರೆ ನೀಡಿದರು. ಮಹಿಳೆಯರು ಮತ್ತು ಪುರುಷರಿಗೆ ಸಮಾನವಾದ ಹಕ್ಕು ಸಿಗಬೇಕು ಎಂದು ಪ್ರತಿಪಾದಿಸಿದರು.

ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಬಸವಣ್ಣನವರು ಇಡೀ ವಿಶ್ವಕ್ಕೆ ಪ್ರಜಾಪ್ರಭುತ್ವದಕ್ಕೆ 12ನೇ ಶತಮಾಡನದಲ್ಲಿ ಅಡಿಪಾಯ ಹಾಕಿಕೊಟ್ಟರು. ಅವರ ಅನುಭವ ಮಂಟಪದ ಆಲೋಚನೆ ಇಂದಿಗೂ ಪ್ರಸ್ತುತವಾಗಿದೆ.

ಬಸವಣ್ಣನವರ ಆದರ್ಶಗಳನ್ನು ಪಾಲನೆ ಮಾಡಿದರೆ ಸಮಾಜದಲ್ಲಿ ಅಮೂಲಾಗ್ರವಾದ ಬದಲಾವಣೆ ಕಂಡುಕೊಳ್ಳಲು ಸಾಧ್ಯವಿದೆ. ವರ್ಣ, ವರ್ಗ, ಲಿಂಗ ಬೇಧವನ್ನು ವಚನಗಳಲ್ಲಿ ಧಿಕ್ಕರಿಸಿದವರು ಬಸವಣ್ಣ.

ಕಾಯಕದಲ್ಲಿ ನಂಬಿಕೆ ಇಟ್ಟುಕೊಳ್ಳಬೇಕು ಎಂಬ ಸಂದೇಶವನ್ನು ಜಗತ್ತಿಗೆ ಸಾರಿದವರು ಬಸವಣ್ಣ. ಅಂದು ಅವರು ನುಡಿದಂತೆ ನಡೆದು ಮಾದರಿಯಾದರು.

ಜಗತ್ತಿಗೆ ವೈಚಾರಿಕತೆಯ ಬೆಳಕು ನೀಡಿದ ಬಸವಣ್ಣ ಹುಟ್ಟಿದ ಸ್ಥಳ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ. ಇಂದಿನ ದಿನಗಳಲ್ಲಿಯೂ ಬಸವಣ್ಣನವರ ತತ್ವಗಳು ಅನುಕರಣೀಯ.

English summary
Basava Jayanti is the annual festival celebrated in Karnataka. which is celebrated by the Lingayats. Lingayat will celebrate Basava jayanthi honours the birthday of lord Basavanna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X