ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿ.ಎಸ್.ಯಡಿಯೂರಪ್ಪ ಇನ್ನೇನು ಹೆಚ್ಚು ದಿನ ಮುಖ್ಯಮಂತ್ರಿ ಆಗಿರುವುದಿಲ್ಲ: ಬಿಜೆಪಿ ಹಿರಿಯ ಶಾಸಕ

|
Google Oneindia Kannada News

ಬೆಂಗಳೂರು, ಅ. 20: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕುರಿತು ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಬಿಜೆಪಿ ನಾಯಕರ ಮಧ್ಯೆ ಬಹಿರಂಗವಾಗಿಯೇ ವಾಕ್ಸಮರ ಶುರುವಾಗಿದೆ. ಈವರೆಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಆಗುತ್ತಿದ್ದ ವಿಚಾರ ಇದೀಗ ಬಹಿರಂಗವಾಗಿ ಬಿಜೆಪಿ ನಾಯಕರ ಮಧ್ಯ ಚರ್ಚೆ ಆಗುತ್ತಿದೆ. ಇದಕ್ಕೆ ಕಾರಣವಾಗಿರುವುದು ಉತ್ತರ ಕರ್ನಾಟಕದ ಪ್ರವಾಹ ಪರಿಸ್ಥಿತಿ ಎಂಬುದು ಗಮನಿಸಬೇಕಾದ ವಿಚಾರ.

ಬಿಜೆಪಿ ಹೈಕಮಾಂಡ್‌ಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಾಕಾಗಿ ಹೋಗಿದ್ದಾರೆ. ಉತ್ತರ ಕರ್ನಾಟಕದವರನ್ನೇ ಮುಖ್ಯಮಂತ್ರಿ ಮಾಡಲು ಸ್ವತಃ ಪ್ರಧಾನಿ ಮೋದಿ ಅವರ ಮನಸ್ಸಿನಲ್ಲಿ ಬಂದಿದೆ. ಹೀಗಾಗಿ ಇನ್ನು ಹೆಚ್ಚಿಗೆ ದಿನ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಸಾಧ್ಯವಿಲ್ಲ ಎಂದು ಬಿಜೆಪಿ ಶಾಸಕರೇ ಬಹಿರಂಗ ಹೇಳಿಕೆ ಕೊಟ್ಟಿದ್ದಾರೆ.

ಮತ್ತೆ ರಾಜ್ಯದಲ್ಲಿ ಕೇಳಿ ಬಂತು ಮತ್ತೆ ರಾಜ್ಯದಲ್ಲಿ ಕೇಳಿ ಬಂತು "ಪರ್ಸಂಟೇಜ್ ಸರ್ಕಾರ" ಎಂಬ ಮಾತು!

ಇದು ದಕ್ಷಿಣ ಕರ್ನಾಟಕದ ಶಾಸಕರ ಆಕ್ರೋಶಕ್ಕೆ ಕಾರಣವಾಗಿದ್ದು ಆ ಭಾಗದ ಶಾಸಕರೂ ಉತ್ತರ ಕರ್ನಾಟಕ ಶಾಸಕರ ಮೇಲೆ ಬಹಿರಂಗವಾಗಿಯೇ ವಾಗ್ದಾಳಿ ಮಾಡಿದ್ದಾರೆ. ಇದು ಬಿಜೆಪಿಯಲ್ಲಿಯೇ ಉತ್ತರ ಹಾಗೂ ದಕ್ಷಿಣ ಕರ್ನಾಟಕ ಎಂಬ ಕಂದಕವನ್ನು ಸೃಷ್ಟಿಸಿದ್ದು, ಬಿಜೆಪಿಯಲ್ಲಿ ಹೊಸ ವಿಪ್ಲವಕ್ಕೆ ಕಾರಣವಾಗಿದೆ. ಹಾಗಾದರೆ ಬಹಿರಂಗ ಹೇಳಿಕೆ ನೀಡಿದ ಬಿಜೆಪಿಯ ನಾಯಕರು ಯಾರು? ಯಾರು? ಮುಂದಿದೆ ಓದಿ!

ಹೈಕಮಾಂಡ್‌ಗೂ ತಲೆ ನೋವಾಗಿದ್ದಾರೆ!

ಹೈಕಮಾಂಡ್‌ಗೂ ತಲೆ ನೋವಾಗಿದ್ದಾರೆ!

ಬಿಜೆಪಿ ಹೈಕಮಾಂಡ್‌ಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಸಂಬಾಳಿಸಿ ಸಾಕಾಗಿ ಹೋಗಿದೆ. ಹೀಗಾಗಿ ಹೈಕಮಾಂಡ್‌ಗೂ ಸಿಎಂ ಯಡಿಯೂರಪ್ಪ ಸಾಕಾಗಿ ಹೋಗಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರು ಇನ್ನೇನು ಬಹಳ ದಿನ ಕರ್ನಾಟಕದ ಮುಖ್ಯಮಂತ್ರಿಯಾಗಿ ಇರುವುದಿಲ್ಲ ಎಂದು ಬಿಜೆಪಿ ಹಿರಿಯ ಶಾಸಕ, ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆ ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.

ಉತ್ತರ ಕರ್ನಾಟಕದ ಮುಖ್ಯಮಂತ್ರಿ

ಉತ್ತರ ಕರ್ನಾಟಕದ ಮುಖ್ಯಮಂತ್ರಿ

ಉತ್ತರ ಕರ್ನಾಟಕದ ಮಂದಿ ಬಿಜೆಪಿಯಲ್ಲಿ 100ಕ್ಕೂ ಶಾಸಕರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಜನತೆ ಕಳುಹಿಸುತ್ತಾರೆ. ಆದರೆ ಉಳಿದ ಭಾಗದಲ್ಲಿ ಕೇವಲ 15 ಶಾಸಕರು ಬಿಜೆಪಿಯಿಂದ ಗೆದ್ದು, ಅವರಲ್ಲೆ ಒಬ್ಬರು ಮುಖ್ಯಮಂತ್ರಿ ಆಗುತ್ತಾರೆ. ಆದರೆ ಇದು ಹೆಚ್ಚು ದಿನ ನಡೆಯುವುದಿಲ್ಲ. ಯಡಿಯೂರಪ್ಪ ಅವರು ಸಿಎಂ ಹುದ್ದೆಯಿಂದ ಇಳಿದ ಬಳಿಕ ಈ ಬಾರಿ ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿ ಆಗುವುದು ಪಕ್ಕಾ. ಉತ್ತರ ಕರ್ನಾಟಕದವರನ್ನೇ ಸಿಎಂ ಮಾಡುವ ಭರವಸೆಯನ್ನು ಪ್ರಧಾನಿ ಮೋದಿ ಅವರು ಕೊಟ್ಟಾಗಿದೆ ಎಂದು ಯತ್ನಾಳ್ ವಿಜಯಪುರದಲ್ಲಿ ಹೇಳಿಕೆ ಕೊಟ್ಟಿದ್ದಾರೆ.

ಯಡಿಯೂರಪ್ಪ ಮಧ್ಯೆ ಜಗಳ ಶುರುವಾಗಿದೆ

ಯಡಿಯೂರಪ್ಪ ಮಧ್ಯೆ ಜಗಳ ಶುರುವಾಗಿದೆ

ಈಗಾಗಲೇ ನನಗೂ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಜಗಳ ಶುರುವಾಗಿದೆ. ನನ್ನ ಮತಕ್ಷೇತ್ರದ 125 ಕೋಟಿ ರೂಪಾಯಿ ಅನುದಾನವನ್ನು ಕಡಿತ ಮಾಡಿದ್ದಾರೆ. ಇದಕ್ಕಾಗಿ ಸಿಎಂ ವಿರುದ್ಧ ಜಗಳವಾಗಿದೆ. ಇನ್ನೇನು ಯಡಿಯೂರಪ್ಪ ಬಹಳ ದಿನ ಮುಖ್ಯಮಂತ್ರಿಯಾಗಿ ಇರುವುದಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಅವರಿಗೆ ಕಂದಾಯ ಸಚಿವ ಆರ್. ಅಶೋಕ್ ಅವರು ತಿರುಗೇಟು ನೀಡಿದ್ದಾರೆ.

Recommended Video

ಹುಷಾರು!! ಇನ್ನು 3 ದಿನ ಮಳೆರಾಯನ ತಡಿಯೋಕ್ ಆಗಲ್ಲ | Oneindia Kannada
ಯತ್ನಾಳ್‌ಗೆ ಆರ್. ಅಶೋಕ್ ತಿರುಗೇಟು

ಯತ್ನಾಳ್‌ಗೆ ಆರ್. ಅಶೋಕ್ ತಿರುಗೇಟು

ಸದ್ಯಕ್ಕೆ ಇನ್ನು ಮೂರು ವರ್ಷ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಶಾಸಕ ಯತ್ನಾಳ್ ಅವರಿಗೆ ತಿರುಗೇಟು ಕೊಟ್ಟಿದ್ದಾರೆ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಾವು ಚುನಾವಣೆ ಗೆದ್ದಿದ್ದೇವೆ ಎಂದು ಹೇಳುವ ಮೂಲಕ ಉತ್ತರ ಕರ್ನಾಟಕದವರು ಬಿಜೆಪಿ ಅಧಿಕಾರಕ್ಕೆ ತಂದಿಲ್ಲ ಎಂದು ಆರ್. ಅಶೋಕ್ ಅವರು ಪರೋಕ್ಷವಾಗಿ ಉತ್ತರ ಕರ್ನಾಟಕ ಭಾಗದ ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈಗ ಸಿಎಂ ಸೀಟ್ ಖಾಲಿ ಇಲ್ಲ ಅಂದ್ಮೇಲೆ ಅವರು ಎಲ್ಲಿ ಟವೆಲ್ ಹಾಕ್ತಾರೆ? ಹೀಗಾಗಿ ಖಾಲಿ ಇಲ್ಲದೆ ಸೀಟ್‌ಗೆ ಟವೆಲ್ ಹಾಕಿ ಸಮಯ ವ್ಯರ್ಥ ಮಾಡೋದು ಸರಿಯಲ್ಲ ಎಂದು ಆರ್. ಅಶೋಕ್ ಹೇಳಿಕೆ ಕೊಟ್ಟಿದ್ದಾರೆ.

ಒಟ್ಟಾರೆ ಇದೀಗ ಬಿಜೆಪಿಯಲ್ಲಿನ ನಾಯಕತ್ವ ಬದಲಾವಣೆ ವಿಚಾರ ಉತ್ತರ ಕರ್ನಾಟಕ ಬಿಜೆಪಿ ಹಾಗೂ ದಕ್ಷಿಣ ಕರ್ನಾಟಕ ಬಿಜೆಪಿ ಎಂದು ಭಾಗವಾಗಲೂ ಕಾರಣವಾಗಿದೆ. ಈ ಹಿಂದೆ ಬಿಜೆಪಿಯ ಮತ್ತೊಬ್ಬ ಹಿರಿಯ ಶಾಸಕ ಉಮೇಶ್ ಕತ್ತಿ ಅವರು ಉತ್ತರ ಕರ್ನಾಟಕದ ಮುಖ್ಯಮಂತ್ರಿ ಹಾಗೂ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬಗ್ಗೆ ಮಾತನಾಡಿದ್ದನ್ನು ನೆನಪಿಸಿಕೊಳ್ಳಬಹುದು!

English summary
Vijayapura MLA Basanagowda Patil Yatnal has said that the BJP high command has decided to change BS Yediyurappa from chief minister post, Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X