ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆಬ್ರವರಿಯಲ್ಲಿ 29 ದಿನ; ಬ್ಯಾಂಕ್ ರಜೆಗಳ ಪಟ್ಟಿ

|
Google Oneindia Kannada News

ಬೆಂಗಳೂರು, ಜನವರಿ 31 : ಈ ವರ್ಷದ ಫೆಬ್ರವರಿಯಲ್ಲಿ 29 ದಿನಗಳಿವೆ. 2 ಮತ್ತು 4ನೇ ಶನಿವಾರ, ಭಾನುವಾರ ಸೇರಿ ಬ್ಯಾಂಕ್‌ಗಳಿಗೆ ಹಲವು ರಜೆಗಳಿವೆ. ತಿಂಗಳ ಮೊದಲ ದಿನವೇ ಬ್ಯಾಂಕ್ ಸಿಬ್ಬಂದಿ ಮುಷ್ಕರದಿಂದಾಗಿ ಬ್ಯಾಂಕ್ ವ್ಯವಹಾರ ಬಂದ್ ಆಗುವ ಸಾಧ್ಯತೆ ಇದೆ.

ನಾಲ್ಕು ವರ್ಷಕ್ಕೊಮ್ಮೆ ಫೆಬ್ರವರಿಯಲ್ಲಿ 29 ದಿನಗಳು ಬರುತ್ತವೆ. ಈ ಬಾರಿ 29 ದಿನಗಳು ಬಂದಿವೆ. ಬ್ಯಾಂಕ್ ವ್ಯವಹಾರಕ್ಕೆ ಹೋಗುವವರು ಎಂದು ರಜೆ ಇದೆ ಎಂದು ಮೊದಲೇ ತಿಳಿದುಕೊಳ್ಳುವುದು ಉತ್ತಮ.

ಎರಡು ದಿನ ಬ್ಯಾಂಕ್ ಮುಷ್ಕರ: ನೀವು ತಿಳಿದಿರಬೇಕಾದ ಸಂಗತಿಗಳುಎರಡು ದಿನ ಬ್ಯಾಂಕ್ ಮುಷ್ಕರ: ನೀವು ತಿಳಿದಿರಬೇಕಾದ ಸಂಗತಿಗಳು

ಬ್ಯಾಂಕ್ ನೌಕರರು ಫೆಬ್ರವರಿ 1ರಂದು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಆದ್ದರಿಂದ, ಫೆಬ್ರವರಿ ತಿಂಗಳ ಮೊದಲ ದಿನವಾದ ಶನಿವಾರ ಬ್ಯಾಂಕ್ ವ್ಯವಹಾರಗಳು ನಡೆಯುವ ಸಾಧ್ಯತೆ ಕಡಿಮೆ ಇದೆ.

2020ನೇ ಸಾಲಿನ ಬ್ಯಾಂಕ್ ರಜಾ ದಿನಗಳ ಸಂಪೂರ್ಣ ಪಟ್ಟಿ 2020ನೇ ಸಾಲಿನ ಬ್ಯಾಂಕ್ ರಜಾ ದಿನಗಳ ಸಂಪೂರ್ಣ ಪಟ್ಟಿ

Bank Holidays In The Month Of February 2020

ಫೆಬ್ರವರಿ 1ರಂದು ರಜೆ ಎಂದು ಪರಿಗಣಿಸಿದರೆ ಬ್ಯಾಂಕ್ ಸಿಬ್ಬಂದಿಗಳಿಗೆ ಒಟ್ಟು 10 ರಜೆಗಳು ಸಿಕ್ಕಿದಂತೆ ಆಗುತ್ತದೆ. 4 ಭಾನುವಾರ, 2 ಮತ್ತು 4ನೇ ಶನಿವಾರ ಎಂದಿನಂತೆ ಬ್ಯಾಂಕ್ ರಜೆ ಇರುತ್ತದೆ.

ರಜೆ ದಿನಗಳ ಪಟ್ಟಿ

* ಫೆಬ್ರವರಿ 1 : ಬ್ಯಾಂಕ್ ಮುಷ್ಕರ
* ಫೆಬ್ರವರಿ 2 : ಭಾನುವಾರ
* ಫೆಬ್ರವರಿ 8 : 2ನೇ ಶನಿವಾರ
* ಫೆಬ್ರವರಿ 9 : ಗುರು ರವಿದಾಸ್ ಜಯಂತಿ (ಕೆಲವು ರಾಜ್ಯಗಳಿಗೆ ಮಾತ್ರ)
* ಫೆಬ್ರವರಿ 16 : ಭಾನುವಾರ
* ಫೆಬ್ರವರಿ 18 : ದಯಾನಂದ ಸರಸ್ವತಿ ಜಯಂತಿ (ಕೆಲವು ರಾಜ್ಯಗಳು ಮಾತ್ರ)
* ಫೆಬ್ರವರಿ 19 : ಛತ್ರಪತಿ ಶಿವಾಜಿ ಜಯಂತಿ
* ಫೆಬ್ರವರಿ 21 : ಮಹಾ ಶಿವರಾತ್ರಿ
* ಫೆಬ್ರವರಿ 22 : 2ನೇ ಶನಿವಾರ
* ಫೆಬ್ರವರಿ 23 : ಭಾನುವಾರ

English summary
29 days in 2020 February month. Bank employees will get 9 days holiday. Here are the list of bank holidays in the month of February.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X