ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಹಳ್ಳಿ: ಆಟೋ ಮಗು ಪತ್ತೆ- ಸಂಬಂಧಿಕರ ಕೈವಾಡ

By Srinath
|
Google Oneindia Kannada News

Bangalore Uttarahalli missing auto kid found-but-misery-remains
ಬೆಂಗಳೂರು, ಸೆ.23: ಕಳೆದ ವಾರ ಉತ್ತರಹಳ್ಳಿ ವೃತ್ತದ ಶನೇಶ್ವರ ದೇವಾಲಯ ಸಮೀಪ ಆಶ್ಚರ್ಯಕರ ರೀತಿಯಲ್ಲಿ ಆಟೋದಲ್ಲಿ ಮಲಗಿದ್ದ ನಾಲ್ಕು ತಿಂಗಳ ಗಂಡು ಮಗು ದಿಢೀರ್ ನಾಪತ್ತೆಯಾದ ಪ್ರಕರಣ ಸುಖಾಂತ್ಯ ಕಂಡಿದ್ದು ಮುದ್ದುಕಂದಮ್ಮ ಭಾನುವಾರ ಸಂಜೆ ತಾಯಿಯ ಮಡಿಲು ಸೇರಿದೆ.

ನಿಗೂಢವಾಗಿ ಕಣ್ಮರೆಯಾಗಿದ್ದ ಮಗುವನ್ನು ತಾಯಿ ಮಡಿಲು ಸೇರಿಸಲು ಸುಬ್ರಹ್ಮಣ್ಯಪುರ ಪೊಲೀಸರು ಯಶಸ್ವಿ 'ಕಾರ್ಯಾಚರಣೆ' ನಡೆಸಿದ್ದಾರೆ. ಈ ನಾಪತ್ತೆ ಪ್ರಕರಣದ ಹಿಂದಿನ 'ರಹಸ್ಯ' ಬಹಿರಂಗಪಡಿಸಲು ಪೊಲೀಸರು ನಿರಾಕರಿಸಿದ್ದಾರೆ. ಆದರೆ ಮೂಲಗಳ ಪ್ರಕಾರ ಈ ಕುಕೃತ್ಯದ ಹಿಂದೆ ಕಣ್ಮರೆಯಾಗಿದ್ದ ಮಗುವಿನ ಕುಟುಂಬದ ಸದಸ್ಯರ ಪಾತ್ರ ಇರಬಹುದು ಎಂದು ಶಂಕಿಸಲಾಗಿದೆ.

ಜಿಆರ್ ಸುಧೀಂದ್ರ ಹಾಗೂ ಜ್ಯೋತಿ ದಂಪತಿಯ ನಾಲ್ಕು ತಿಂಗಳ ಗಂಡು ಮಗು ಬುಧವಾರ ಬೆಳಗ್ಗೆ ಸುಮಾರು 11 ಗಂಟೆಯಲ್ಲಿ ನಾಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಗುವನ್ನು ಕತ್ರಿಗುಪ್ಪೆಯಲ್ಲಿ ಪತ್ತೆಹಚ್ಚಿದ್ದಾರೆ.

ಆದರೆ ಪೊಲೀಸರು ಮಗು ಪತ್ತೆಯ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಲು ಇಚ್ಛಿಸಿಲ್ಲ. ಇನ್ನು ಪಾಲಕರೂ ಮೌನಕ್ಕೆ ಶರಣಾಗಿದ್ದಾರೆ. ಆದರೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕುಟುಂಬದವರೇ ಮಗುವನ್ನು ಬಚ್ಚಿಟ್ಟು ನಾಪತ್ತೆ ನಾಟಕವಾಡಿದ್ದಾರೆ ಎಂದು ತಿಳಿದುಬಂದಿದೆ.

ನಾಪತ್ತೆ ವೃತ್ತಾಂತ ವರದಿ:

ಚಿಕ್ಕಲಸಂದ್ರದ ಕೋಮಲಾ ಬ್ರಿಗೇಡ್ ಅಪಾರ್ಟ್ ಮೆಂಟ್ ಸಮೀಪ ಮಗುವನ್ನು ಆಟೋದಲ್ಲಿ ಮಲಗಿಸಿ ಎದುರಿಗಿದ್ದ ಔಷಧ ಅಂಗಡಿಗೆ ಮಗುವಿನ ತಾಯಿ ಹೋಗಿಬರುವಷ್ಟರಲ್ಲಿ ಮಗು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದೆ.

ಉತ್ತರಹಳ್ಳಿ ನಿವಾಸಿ ಜಿಆರ್ ಸುಧೀಂದ್ರ ಹಾಗೂ ಜ್ಯೋತಿ ದಂಪತಿಯ 4 ತಿಂಗಳ ಗಂಡುಮಗು ನಾಪತ್ತೆಯಾಗಿರುವುದು. ಅನಾರೋಗ್ಯದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಸುಮಾರು 11 ಗಂಟೆಯಲ್ಲಿ ಮಗನನ್ನು ಕ್ಲಿನಿಕ್ಕಿಗೆ ಚಿಕಿತ್ಸೆಗೆಂದು ಜ್ಯೋತಿ ಕರೆತಂದಿದ್ದರು. ವೈದ್ಯಕೀಯ ತಪಾಸಣೆ ಬಳಿಕ ಆಟೋದಲ್ಲಿ ಅವರು ಮನೆಗೆ ಹಿಂತಿರುಗುತ್ತಿದ್ದರು. ಆ ವೇಳೆ ಸ್ವಲ್ಪ ಅಚಾತುರ್ಯ ನಡೆದಿದೆ. ಮಾರ್ಗ ಮಧ್ಯೆ ಶನೇಶ್ವರ ದೇವಸ್ಥಾನದ ಹತ್ತಿರ ಆಟೋದಲ್ಲಿ ಮಗನನ್ನು ಮಲಗಿಸಿ ಜ್ಯೋತಿ ಔಷಧ ಖರೀದಿಗೆ ತೆರಳಿದ್ದಾರೆ.

ಮರಳಿ ಬಂದಾಗ ಆಟೋದಲ್ಲಿ ಮಲಗಿಸಿದ್ದ ಮಗು ನಾಪತ್ತೆಯಾಗಿತ್ತು ಎಂದು ಜ್ಯೋತಿ ದೂರಿನಲ್ಲಿ ತಿಳಿಸಿದ್ದಾರೆ. ಮಗು ನಾಪತ್ತೆಯಾಗಿರುವ ಕುರಿತು ಆಟೋ ಚಾಲಕನನ್ನು ಪ್ರಶ್ನಿಸಿದಾಗ, ತಾನು ಮೊಬೈಲಿನಲ್ಲಿ ಮಾತನಾಡುತ್ತಿದ್ದೆ. ಮಗು ಕಣ್ಮರೆ ಬಗ್ಗೆ ತನಗೇನು ಗೊತ್ತಿಲ್ಲ ಎಂದು ಉತ್ತರ ನೀಡಿದವನೇ ತಕ್ಷಣ ಅಲ್ಲಿಂದ ಹೊರಟು ಹೋಗಿದ್ದಾನೆ.

ಆತಂಕಗೊಂಡ ಜ್ಯೋತಿ ಮತ್ತು ಆಕೆಯ ತಾಯಿ ಸುತ್ತುಮತ್ತ ಮಗನಿಗೆ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಕೊನೆಗೆ ಮನೆಗೆ ಮರಳಿ ನಡೆದ ಘಟನೆ ಕುರಿತು ತಮ್ಮ ಪತಿಗೆ ಜ್ಯೋತಿ ತಿಳಿಸಿದ್ದಾರೆ. ಮಗುವನ್ನು ಕಳೆದುಕೊಂಡ ದಂಪತಿ, ಸುಬ್ರಹ್ಮಣ್ಯಪುರ ಠಾಣೆಗೆ ಹೋಗಿ ಪುತ್ರ ನಾಪತ್ತೆಯಾಗಿರುವ ಸಂಬಂಧ ದೂರು ನೀಡಿದ್ದಾರೆ.

ಉತ್ತರಹಳ್ಳಿ ಜಂಕ್ಷನ್‌ ಸುತ್ತಮುತ್ತ ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲಿ ಆಳವಡಿಸಿರುವ ಸಿಸಿಟಿವಿ ದೃಶ್ಯಾವಾಳಿಗಳನ್ನು ತಪಾಸಣೆ ಕಾರ್ಯ ಆರಂಭವಾಗಿದ್ದು, ಆಟೋ ಚಾಲಕನ್ನು ಪತ್ತೆ ಹಚ್ಚಿ, ವಿಚಾರಣೆ ನಡೆಸಿದರೆ ಮಾಹಿತಿ ಸಿಗಬಹುದು ಎಂದು ದಕ್ಷಿಣ ವಿಭಾಗದ ಡಿಸಿಪಿ ಎಚ್‌ಎಸ್ ರೇವಣ್ಣ ಆಶಿಸಿದ್ದಾರೆ.

English summary
Bangalore Uttarahalli auto kid found on Sept 22 but misery remains. The baby boy was missing in auto as mother Jyothi went for buying medicines on Sept 18th at 11 AM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X