ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

12 ವರ್ಷದ ಬಾಲೆ ಮಗುವಿಗೆ ಜನ್ಮ ನೀಡಿದಳು!

By Srinath
|
Google Oneindia Kannada News

Bangalore Nelamangala 12-year old girl gives birth to baby boy
ಡಾಬಸ್‌ಪೇಟೆ (ನೆಲಮಂಗಲ), ಸೆಪ್ಟೆಂಬರ್ 23: ಹೊಟ್ಟೆ ನೋವಿನಿಂದ ಬಳಲುತ್ತಿರುವ ಮಗಳನ್ನು ಆಸ್ಪತ್ರೆಗೆ ಕರೆದೊಯ್ದ ಪೋಷಕರಿಗೆ ಆಘಾತವುಂಟಾಗಿದೆ. ಏಕೆಂದರೆ ಆ ಮಗಳು ಮಗುವಿಗೆ ಜನ್ಮ ನೀಡಿದ್ದಾಳೆ. ದುರ್ದೈವ ಅಂದರೆ ಆ ಮಗಳ ವಯಸ್ಸು ಇನ್ನೂ 12 ವರ್ಷವೂ ದಾಟಿಲ್ಲ ಎಂಬುದು ಇಲ್ಲಿನ ಆಘಾತದ ಸುದ್ದಿ.

ತುಮಕೂರು ತಾಲೂಕಿನ ನಂದಿಹಳ್ಳಿ ಗ್ರಾಮದ ಸದರಿ ಬಾಲಕಿ ಹೊಟ್ಟೆನೋವಿನಿಂದ ಬಳಲುತ್ತಿದ್ದಳು. ಇದನ್ನು ಗಮನಿಸಿದ ಪೋಷಕರು ತಕ್ಷಣ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಂದಹಾಗೆ ಇವಳು 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

ವೈದ್ಯರು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುತ್ತಿದ್ದಂತೆ ಆಕೆಗೆ ಡೆಲಿವರಿ ಆಗಿದ್ದು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆಕೆ ಗರ್ಭಿಣಿಯಾಗಿರುವುದು ತಮ್ಮ ಗಮನಕ್ಕೆ ಬಂದಿಲ್ಲ ಎಂದು ಪೋಷಕರು ವೈದ್ಯರ ಬಳಿ ತಿಳಿಸಿದ್ದಾರೆ. ಇನ್ನು, ಬಾಲಕಿಯನ್ನು ವಿಚಾರಿಸಿದಾಗ ತನ್ನ ಮಾವ ನವೀನ (23) ಇದಕ್ಕೆ ಕಾರಣ ಎಂದು ಆಕೆ ತಿಳಿಸಿದ್ದಾಳೆ.

ಈ ಮಧ್ಯೆ, 7ನೇ ತರಗತಿ ಬಾಲಕಿ ಮಗುವಿಗೆ ಜನ್ಮಕೊಟ್ಟ ಪ್ರಕರಣ ಜಟಿಲವಾಗಿದೆ. ಒಂದು ವೇಳೆ ಪ್ರಕರಣಕ್ಕೆ ಕಾರಣನಾದ ಸೋದರ ಮಾವನ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿದರೆ ಮಗು ಮತ್ತು ತಂದೆ ದೂರವಾಗುವುದರ ಜತೆಗೆ ಬಾಲಕಿಯೂ ಆಶ್ರಯ ವಂಚಿತಳಾಗುತ್ತಾಳೆ. ಮತ್ತೊಂದು ಕಡೆ, ಎರಡೂ ಕುಟುಂಬದವರು ಒಪ್ಪಿ ಮದುವೆಗೆ ಮುಂದಾದರೆ ಬಾಲ್ಯ ವಿವಾಹವಾಗುತ್ತದೆ.

ಅಂದಹಾಗೆ, ನಂದಿಹಳ್ಳಿಯ ಲೀಲಾವತಿ- ನರಸಿಂಹಯ್ಯ ದಂಪತಿಯ ಎರಡನೇ ಪುತ್ರಿಯೇ ವಿಚಿತ್ರ/ ದುರ್ಭರ ಪರಿಸ್ಥಿತಿ ಎದುರಿಸುತ್ತಿರುವ ಬಾಲಕಿ. ನಂದಿಹಳ್ಳಿ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಆರೋಪಿ, ಬಾಲಕಿಯ ಸೋದರ ಮಾವ (ತಾಯಿ ತಮ್ಮ) ನವೀನ್‌ ಮೈಸೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ.

English summary
Bangalore Nelamangala 12-year old girl gives birth to baby boy. The 12-year-old schoolgirl has become one of the youngest mothers after giving birth to a healthy boy. A 23 year old youth Naveen also a close relative of the girl is the father of the boy said the girl.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X