ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿಗಳ ಸಮುದಾಯತ್ತ ಸಿಎಂ ಸಿದ್ದರಾಮಯ್ಯ ಸ್ನೇಹ 'ಹಸ್ತ'

By Srinath
|
Google Oneindia Kannada News

ಬೆಂಗಳೂರು, ಫೆ. 17: ನೂರಾರು ವರ್ಷಗಳಿಂದ ಭಕ್ತಿಯ ಪರಾಕಾಷ್ಠೆಯೊಂದಿಗೆ ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿರುವ ಕರಗಕ್ಕೆ ಈ ಬಾರಿ ವಿಶೇಷ ಕೊಡುಗೆ ಪ್ರಾಪ್ತಿಯಾಗಿದೆ. ಜತೆಗೆ ಕರಗವನ್ನು ಹೊರುವ ತಿಗಳರ ಸಮುದಾಯಕ್ಕೂ ಭಾರಿ ಕೊಡುಗೆ ಲಭಿಸುವ ಭರವಸೆ ಸಿಕ್ಕಿದೆ.

ಹೌದು ನಿನ್ನೆ ಬಸವನಗುಡಿಯಲ್ಲಿ ಬೃಹತ್ ಪ್ರಮಾಣದಲ್ಲಿ ನಡೆದ ಕರ್ನಾಟಕ ರಾಜ್ಯ ತಿಗಳ ಕ್ಷತ್ರಿಯ ಜನಾಂಗದ ಜಾಗೃತಿ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಗಳ ಸಮುದಾಯಕ್ಕೆ ಈ ಅಭಯ ನೀಡಿದ್ದಾರೆ. ಲೋಕಸಭಾ ಚುನಾವಣೆ ಒಂದೆರಡು ತಿಂಗಳಲ್ಲಿ ಕಣ್ಣೇದುರಿಗೇ ಇರುವಾಗ ದೊಡ್ಡ ಸಂಖ್ಯೆಯ ತಿಗಳ ಸಮುದಾಯದತ್ತ ಸಿದ್ದರಾಮಯ್ಯ ಸ್ನೇಹ 'ಹಸ್ತ' ಚಾಚಿದ್ದಾರೆ.

Bangalore Karaga Rs 1 cr grant CM Siddaramaiah tells thigala community
ಈ ಬಾರಿ ಲೋಕಸಭೆ ಚುನಾವಣೆ ಸಮಯಲ್ಲಿ ಬೆಂಗಳೂರು ಕರಗ ನಡೆಯಲಿದೆ. ಹಾಗಾಗಿ ಸಿಎಂ ಸಿದ್ದು ಹೆಚ್ಚು ಕಾಳಜಿ ವಹಿಸಿ, ಕರಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದಾರೆ. ಕರಗವನ್ನು ಅದ್ಧೂರಿಯಾಗಿ ಆಚರಿಸುವಂತಾಗಲು ಸರಕಾರದ ವತಿಯಿಂದ 1 ಕೋಟಿ ರೂ ಅನುದಾನ ನೀಡುವುದಾಗಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು. ಇದರೊಂದಿಗೆ ಬೆಂಗಳೂರು ಕರಗಕ್ಕೆ ಈಗಲೇ ಚಾಲನೆ ಸಿಕ್ಕಿದಂತಾಗಿದೆ.

ಜತೆಗೆ, ತಿಗಳ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ನೆರವು ನೀಡುವುದಾಗಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಹಾಗೆಯೇ, ತಿಗಳ ಸಮುದಾಯದ ವತಿಯಿಂದ ವಿದ್ಯಾಸಂಸ್ಥೆ, ವಿದ್ಯಾರ್ಥಿನಿಲಯಗಳನ್ನು ಆರಂಭಿಸಿದರೆ ಸರ್ಕಾರದಿಂದ ಅಗತ್ಯ ನೆರವು ನೀಡಲಾಗುತ್ತದೆ ಎಂದೂ ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಇನ್ನು, ತಿಗಳ ಜಾತಿಯನ್ನು ಮೀಸಲು ಅಧಿನಿಯಮ ಪ್ರವರ್ಗ 2ಎ ನಲ್ಲಿ ಅಡಕವಾಗಿದೆ. ಇದರಿಂದ 114ಕ್ಕಿಂತ ಹೆಚ್ಚು ಸಂಖ್ಯೆಯಲ್ಲಿರುವ ಜಾತಿಗಳ ಮಧ್ಯೆ ಸ್ಪರ್ಧೆ ನಡೆಸಲು ತಿಗಳ ಜಾತಿಯವರಿಗೆ ಸಾಧ್ಯವಾಗುತ್ತಿಲ್ಲ. (thigala.com)

ಈ ಹಿನ್ನೆಲೆಯಲ್ಲಿ ತಿಗಳರನ್ನು ಈಗಿರುವ 2ಎ ಪ್ರವರ್ಗದಿಂದ ತೆಗೆದು ಪ್ರವರ್ಗ 1ಕ್ಕೆ ಸೇರಿಸುವಂತೆ ಆ ಜನಾಂಗದ ಮುಖಂಡರು ಸರಕಾರಕ್ಕೆ ಮನವಿ ಮಾಡಿದ್ದಾರೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಜಾತಿವಾರು ಸಮೀಕ್ಷೆ ನಡೆದಿದ್ದು, ಅದು ಮುಗಿದ ಬಳಿಕ ತಿಗಳ ಜಾತಿಯನ್ನು ಯಾವ ಪ್ರವರ್ಗಕ್ಕೆ ಸೇರಿಸಬೇಕು ಎಂಬುದರ ಬಗ್ಗೆ ತೀರ್ಮಾನಿಸುವುದಾಗಿ ಸಿಎಂ ಸಿದ್ದು ಭರವಸೆ ನೀಡಿದ್ದಾರೆ.

ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ತಿಗಳರು ಸಮಾವೇಶಕ್ಕೆ ಆಗಮಿಸಿದ್ದರು. ಕೇಂದ್ರ ಸಚಿವರಾದ ವೀರಪ್ಪ ಮೊಯ್ಲಿ, ಕೆಎಚ್‌ ಮುನಿಯಪ್ಪ, ಸಚಿವ ದಿನೇಶ್‌ ಗುಂಡೂರಾವ್‌, ಸಂಸದ ಅನಂತ ಕುಮಾರ್‌,

ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಆರ್‌ ಅಶೋಕ, ಬಿಬಿಎಂಪಿ ಸದಸ್ಯ ಗುಣಶೇಖರ್‌, ರಾಜ್ಯ ತಿಗಳ ಕ್ಷತ್ರಿಯ ಜನಾಂಗದ ಅಧ್ಯಕ್ಷ ಎಚ್ ಸುಬ್ಬಣ್ಣ ಅವರುಗಳು ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

English summary
Bangalore Karaga to get Rs 1 cr grant Chief Minister Siddaramaiah tells Thigala community. Bangalore Karaga will be celebrated in the coming months at Sri Dharmarayaswamy Temple in Thigalarpet, Bangalore. A huge rally by Thigala community was conducted yesterday at Basavangudi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X