• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದ ಮತ್ತೊಬ್ಬ ಉದ್ಯಮಿ ಆಮ್ ಆದ್ಮಿ ಆದ್ರು!

By Srinath
|

ಬೆಂಗಳೂರು, ಜ.4- ಗೂಟದ ಕಾರು ಹತ್ತುವುದಿಲ್ಲ; ಐಷಾರಾಮಿ ಬಂಗಲೆಯಲ್ಲಿ ಇರುವುದಿಲ್ಲ ಎಂದು ಹೇಳುತ್ತಾ ಸರಳ ಬಹುಮತ ಸಾಬೀತು ಆಗುತ್ತಿದ್ದಂತೆ ಸರಕಾರಿ ಬಂಗ್ಲೆ, ಕಾರು ಹತ್ತಿದ ಆಮ್‌ ಆದ್ಮಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲಾರನ್ನು ಯಾಕ್ ಸ್ವಾಮಿ ಹೀಗೆ ಮಾಡಿದಿರಿ? ಎಂದು ಕೇಳಿದ್ದಕ್ಕೆ ' ಸರಕಾರಿ ಕಾರಾದರೇನು, ಖಾಸಗಿ ಕಾರು ಆದರೇನು... it doesn't make difference ಎಂದು ಹುಳ್ಳಗೆ ನಕ್ಕಿದ್ದಾರೆ.

ಇದನ್ನು ಕೇಳಿಸಿಕೊಂಡ ಮತದಾರ ಪ್ರಭು ಮುಂದೆ ಚುನಾವಣೆ ಎದುರಾದಾಗ 'ಕಾಂಗ್ರೆಸ್ ಆದರೇನು ಎಎಪಿ ಆದರೇನು... it doesn't make difference' ಎಂದು ಒಂದು ನಿರ್ಧಾರಕ್ಕೆ ಬಂದರೆ ಆಗ ಲೆಕ್ಕ ಚುಕ್ತಾ ಆದೀತು.

ಅದೆಲ್ಲಾ ಒತ್ತಟ್ಟಿಗಿರಲಿ... ಅಧಿಕಾರದ ಕುರ್ಚಿ ಏರಿದ ಮೇಲೆ ಎಲ್ಲರೂ ಒಂದೇ ಊಸುರವಳ್ಳಿ ರಾಜಕಾರಣಿಗಳೇ. ವಿಷಯ ಅದಲ್ಲ. ರಾಷ್ಟ್ರ ರಾಜಕಾರಣದಲ್ಲಿ ನಿಜಕ್ಕೂ ಒಂದಷ್ಟು ಹೊಸ ಹವಾ ಎಬ್ಬಿಸಿರುವ Aam Aadmi Partyಗೆ ಮತ್ತೊಬ್ಬ ವರ್ಚಸ್ವೀ ಉದ್ಯಮಿ ಕ್ಯಾಪ್ಟನ್ ಗೋಪಿನಾಥ್ ಅವರು ಸೇರ್ಪಡೆಯಾಗಿದ್ದಾರೆ.

ವಾರದ ಆರಂಭದದಂದು ಮಾಜಿ ಇನ್ಫೋಸಿಸ್ ವಿ ಬಾಲಕೃಷ್ಣನ್ ಅವರು AAP ಸೇರ್ಪಡೆಯಾಗಿದ್ದರು ಎಂಬುದು ಗಮನಾರ್ಹ.'ಹೌದು, ನಾನು ಆಮ್ ಆದ್ಮಿ ಪಾರ್ಟಿ ಸೇರಿದ್ದೇನೆ. ನಾನೀಗ ಅಧಿಕೃತವಾಗಿ ಎಎಪಿ ಸದಸ್ಯ' ಎಂದು ಗೋಪಿನಾಥ್ ಹೇಳಿದ್ದಾರೆ.

'ನಾನು ಸದಾ ಅಣ್ಣಾ ಚಳುವಳಿ ಬಗ್ಗೆ ಅನುಕಂಪ ಹೊಂದಿದ್ದವನು. ಭ್ರಷ್ಟಾಚಾರ ವಿರುದ್ಧದ ಆ ಹೋರಾಟದಲ್ಲಿ ಅರವಿಂದ ಕೇಜ್ರಿವಾಲಾರು ಸಕ್ರಿಯರಾಗಿದ್ದವರು' ಎಂದು ಕ್ಯಾಪ್ಟನ್ ಗೋಪಿನಾಥ್ ಪ್ರತಿಕ್ರಿಯಿಸಿದ್ದಾರೆ. 'ಕ್ಯಾಪ್ಟನ್ ಗೋಪಿನಾಥ್ ಅವರು ಅಧಿಕೃತವಾಗಿ ಪಕ್ಷದ ಸದಸ್ಯರಾಗಿದ್ದಾರೆ' ಎಂದು ಕರ್ನಾಟಕದ Aam Aadmi Party ಮೂಲಗಳೂ ಖಚಿತಪಡಿಸಿವೆ.

ಚುನಾವಣೆ ಸಂದರ್ಭದಲ್ಲಿ ಹೊಸದಾಗಿ ಪಕ್ಷ ಸೇರುತ್ತಿದ್ದಂತೆ ಚುನಾವಣೆಗೆ ಸ್ಪರ್ಧಿಸಬಯದುತ್ತೇನೆ ಎಂದೇ ಬಹುತೇಕರು ಹೇಳುವುದು. ಆದರೆ ಕ್ಯಾಪ್ಟನ್ ಗೋಪಿನಾಥ್ ಅವರು ಸ್ಪರ್ಧೆಯ ಬಗ್ಗೆ ಹೇಳದೆ ಭ್ರಷ್ಟಾಚಾರ ಅನ್ನುವುದು ದೇಶವನ್ನು ತಿಂದುಹಾಕುತ್ತಿದೆ. ಈ ಭ್ರಷ್ಟ ವ್ಯವಸ್ಥೆಗೆ ಬದಲಾವಣೆ ತರುವ ನಿಟ್ಟಿನಲ್ಲಿ ಅಣ್ಣಾ ಆಶಾದಾಯಕ ಕೆಲಸ ಮಾಡಿದರು. ಮತ್ತು ಇದೀಗ ಕೇಜ್ರಿವಾಲಾರ ಎಎಪಿ ಅದನ್ನು ಸಾಕಾರಗೊಳಿಸುತ್ತಿದೆ. ಹಾಗಾಗಿ, ಮೊದಲು ಪಕ್ಷದಲ್ಲಿ ಸಕ್ರಿಯನಾಗಿ ತೊಡಗಿಸಿಕೊಳ್ಳುತ್ತೇನೆ. ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ.

ಅಂದಹಾಗೆ Air Deccan, Deccan Charters ಮತ್ತು Deccan 360 ಕಂಪನಿಗಳನ್ನು ಹುಟ್ಟುಹಾಕಿದ ಕ್ಯಾಪ್ಟನ್ ಗೋಪಿನಾಥ್ ಅವರಿಗೆ ರಾಜಕೀಯ ಸ್ಪರ್ಧೆ ಹೊಸದೇನೂ ಅಲ್ಲ ಈ ಹಿಂದೆ 2009ರ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ (ಬಹುಶಃ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ) ಸ್ಪರ್ಧಿಸಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bangalore- Air Deccan founder Captain Gopinath joins Aam Aadmi Party. Captain Gopinath, who pioneered the low-cost airline business in the country, has on Friday joined the Aam Aadmi Party (AAP). Gopinath jumped on the bandwagon close on the heels of former Infosys board member V Balakrishnan joining AAP recently
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more