ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನುಪಮಾ ಶೆಣೈ ಉಡುಪಿ ನಿವಾಸಕ್ಕೆ ಪೊಲೀಸರ ಭೇಟಿ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಉಡುಪಿ, ಜೂನ್ 09 : ಡಿವೈಎಸ್‌ಪಿ ಅನುಪಮಾ ಶೆಣೈ ಅವರ ಉಚ್ಚಿಲದಲ್ಲಿರುವ ಮನೆಗೆ ಬಳ್ಳಾರಿ ಪೊಲೀಸರು ಬುಧವಾರ ಸಂಜೆ ಭೇಟಿ ನೀಡಿದ್ದರು. ಈ ವೇಳೆ ಅವರ ತಾಯಿ ನಳಿನಿ ಮಾತ್ರ ಮನೆಯಲ್ಲಿದ್ದರು. ಶೆಣೈ ಅವರ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ಅಲ್ಲಿಂದ ತೆರಳಿದರು.

ಉಡುಪಿ ಜಿಲ್ಲೆಯ ಬಡಾ ಗ್ರಾಮದ ಉಚ್ಚಿಲದ ಜನಪ್ರಿಯ ಮಿಲ್ ಬಳಿ ಅನುಪಮಾ ಶೆಣೈ ಅವರ ಮನೆ ಇದೆ. ಬಳ್ಳಾರಿ ಪೊಲೀಸರು ಮನೆಗೆ ಆಗಮಿಸಿ ಶೆಣೈ ಅವರ ಬಗ್ಗೆ ವಿಚಾರಿಸಿದರು. 'ಆಕೆ ನಮ್ಮ ಸಂಪರ್ಕದಲ್ಲಿ ಇಲ್ಲ' ಎಂದು ಅನುಪಮಾ ಅವರ ತಾಯಿ ನಳಿನಿ ಪೊಲೀಸರಿಗೆ ಮಾಹಿತಿ ನೀಡಿದರು. ಅನುಪಮಾ ಅವರು ಮನೆಯಲ್ಲಿರಲಿಲ್ಲ. [ಅನುಪಮಾ ಶೆಣೈ ಪರಿಚಯ]

radakrishna

ಭಟ್ಕಳದಲ್ಲಿದ್ದ ಅನುಪಮಾ ಶೆಣೈ ಅವರು ಬುಧವಾರ ರಾತ್ರಿ ಅಲ್ಲಿಂದ ಹೊರಟು, ಹುಬ್ಬಳ್ಳಿ ಮಾರ್ಗವಾಗಿ ಗುರುವಾರ ಮುಂಜಾನೆ ಕೂಡ್ಲಿಗಿಗೆ ತಲುಪಿದ್ದಾರೆ. ಕೂಡ್ಲಿಗಿಯ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ಅವರಿದ್ದು, ಇಂದು ಸಂಜೆ ಬಳ್ಳಾರಿ ಎಸ್‌ಪಿ ಅವರನ್ನುಭೇಟಿಯಾಗುವ ಸಾಧ್ಯತೆ ಇದೆ. [ಕೂಡ್ಲಿಗಿ ತಲಪಿದ ಅನುಪಮಾ]

'ಅನುಪಮಾ ಅವರು ಸಂಪರ್ಕಕ್ಕೆ ಸಿಕ್ಕಿದರೆ ರಾಜಿನಾಮೆ ನೀಡಬೇಡಿ' ಎಂದು ಮನವೊಲಿಸುವಂತೆಯೂ ಪೊಲೀಸರು ಪೋಷಕರಿಗೆ ಮನವಿ ಮಾಡಿ ಅಲ್ಲಿಂದ ತೆರಳಿದರು. ಆ ಬಳಿಕ ಪಡುಬಿದ್ರೆ ಪೊಲೀಸರು ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಈ ವೇಳೆಯೂ ತಾಯಿ ಹೊರತುಪಡಿಸಿ ಅನುಪಮಾ ತಂದೆ ರಾಧಾಕೃಷ್ಣ ಮತ್ತು ಸಹೋದರ ಅಚ್ಚುತ ಶೆಣೈ ಅವರು ಮನೆಯಲ್ಲಿ ಇರಲಿಲ್ಲ.['ಒತ್ತಡದಿಂದ ಬೇಸತ್ತೇ ಅನುಪಮಾ ರಾಜೀನಾಮೆ ನೀಡಿದ್ದಾರೆ']

ಕಷ್ಟಪಟ್ಟು ಬೆಳೆಸಿದೆವು : 'ನಾವು ಮಗಳನ್ನು ಕಷ್ಟಪಟ್ಟು ಓದಿಸಿದ್ದೇವೆ. ಹೀಗೆಲ್ಲಾ ಆಗುತ್ತದೆ ಎಂದು ಗೊತ್ತಾಗಿದಿದ್ದರೆ ಕೆಲಸಕ್ಕೆ ಕಳುಹಿಸುತ್ತಿರಲಿಲ್ಲ. ಆಕೆ ರಾಜೀನಾಮೆ ನೀಡುವ ಮೊದಲು ರಾತ್ರಿ ಹೊತ್ತು ಕೆಲವರು ಬಂದು ಬಾಗಿಲು ಬಡಿದು ಹೆದರಿಸುತ್ತಿದ್ದರು. ಇದರಿಂದ ನೊಂದಿದ್ದಾಳೆ. ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ' ಎಂದು ನಳಿನಿ ಹೇಳಿದ್ದಾರೆ.

ಒತ್ತಡದಿಂದ ರಾಜೀನಾಮೆ : ಸಹೋದರಿ ಅನುಪಮಾ ಶೆಣೈ ಒತ್ತಡದಿಂದಾಗಿ ರಾಜೀನಾಮೆ ನೀಡಿದ್ದಾರೆ. ಅವರಿಗೆ ಕಳೆದ ಮೂರ್ನಾಲ್ಕು ತಿಂಗಳಿನಿಂದ ಕಿರುಕುಳ ನೀಡಲಾಗುತ್ತಿತ್ತು. ಈ ಘಟನೆಯಲ್ಲಿ ಸಚಿವ ಪರಮೇಶ್ವರ ನಾಯಕ್ ಅವರ ಕುಮ್ಮಕ್ಕಿದೆ. ರಾಜೀನಾಮೆಯನ್ನು ಅಂಗೀಕರಿಸಬಾರದು' ಎಂದು ಅನುಪಮಾ ಸಹೋದರ ಅಚ್ಯುತ ಶೆಣೈ ಹೇಳಿದ್ದಾರೆ.

'ನಮ್ಮ ಕುಟುಂಬ ಅವಳಿಗೆ ಬೆನ್ನೆಲುಬಾಗಿ ನಿಂತಿದೆ. ಅವಳು ಹೇಗೆ ಕೆಲಸ ಮಾಡುತ್ತಾಳೆ? ಎಂಬುದು ನಮಗೆ ಗೊತ್ತು. ಯಾವುದೇ ಕೆಲಸ ಮಾಡಲು ಪಾರಂಭಿಸಿದರೆ, ಅದನ್ನು ಕೊನೆಗಾಣಿಸಿಯೇ ಬಿಡುವ ಛಲಗಾರ್ತಿ. ಇಲ್ಲಿಯೂ ಆಕೆಗೆ ನ್ಯಾಯ ಸಿಗದಿದ್ದಲ್ಲಿ ಆಕೆ ಹೋರಾಟದ ದಾರಿಯನ್ನು ತುಳಿಯುವುದು ಖಂಡಿತ' ಎಂದು ಅಚ್ಯುತ್ ಶೆಣೈ ತಿಳಿಸಿದ್ದಾರೆ.

English summary
DySP Anupama Shenoy reached Kudligi on Wednesday, June 8, 2016 night. Anupama will meet Ballari Superintendent of police R. Chetan on Thursday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X