ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೊಮ್ಮಾಯಿ ಸಂಪುಟಕ್ಕೆ ರಮೇಶ್ ಸೇರ್ಪಡೆ ಬಗ್ಗೆ ಬಾಲಚಂದ್ರ ಹೇಳಿದ್ದೇನು?

|
Google Oneindia Kannada News

ಬೆಳಗಾವಿ, ಮಾರ್ಚ್ 20: ಯುಗಾದಿ ಹಬ್ಬದ ಬಳಿಕ ಬಸವರಾಜ ಬೊಮ್ಮಾಯಿ ನೇತೃತ್ವದ ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂಬ ವಿಷಯ ಗುಟ್ಟಾಗೇನು ಉಳಿದಿಲ್ಲ. ಬಜೆಟ್ ಅಧಿವೇಶನ ಮುಗಿಸಿಕೊಂಡ ಬಳಿಕ ಬೊಮ್ಮಾಯಿ ದೆಹಲಿ ಪ್ರವಾಸ ಕೈಗೊಳ್ಳುವುದು ನಿಶ್ಚಿತವಾಗಿದೆ. ಬಹುತೇಕ ಮಾರ್ಚ್ 25ರ ಬಳಿಕ ಮುಖ್ಯಮಂತ್ರಿ ದೆಹಲಿಗೆ ಹೋಗುವ ಸಾಧ್ಯತೆಯಿದೆ. ಹೀಗಾಗಿ, ಏಪ್ರಿಲ್ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆ ನಿರೀಕ್ಷೆಯಿದೆ.

ಈ ನಡುವೆ ಸಂಪುಟಕ್ಕೆ ಯಾರೆಲ್ಲ ಸೇರ್ಪಡೆಯಾಗಬಹುದು ಎಂಬ ಕುತೂಹಲ ಆಸಕ್ತರಲ್ಲಿ ಮೂಡಿದೆ. ಮುಖ್ಯವಾಗಿ ಸಚಿವ ಸ್ಥಾನ ಕಳೆದುಕೊಂಡಿದ್ದ ರಮೇಶ್ ಜಾರಕಿಹೊಳಿ ಮತ್ತೆ ಸಂಪುಟ ಸೇರುವರೇ? ಹಿರಿಯ ಸಚಿವರಿಗೆ ಕೊಕ್ ನೀಡಿ ಯುವ ಶಾಸಕರಿಗೆ ಸ್ಥಾನ ಕಲ್ಪಿಸಲಾಗುತ್ತದೆಯೇ? ಎಂಬೆಲ್ಲ ವಿಷಯಗಳು ಚರ್ಚೆಯಲ್ಲಿವೆ. ಇದೇ ಸಂದರ್ಭದಲ್ಲಿ ಬೆಳಗಾವಿಯಲ್ಲಿಂದು ಮಾತನಾಡಿದ ರಮೇಶ್ ಸೋದರ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ''ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿಗೆ ಕ್ಲೀನ್ ಚಿಟ್ ಸಿಕ್ಕಿದೆ, ಹೀಗಾಗಿ, ಬೊಮ್ಮಾಯಿ ಸಂಪುಟಕ್ಕೆ ರಮೇಶ್ ಸೇರ್ಪಡೆ ಸಾಧ್ಯತೆ ಹೆಚ್ಚಿದೆ, ರಮೇಶ್ ಸಚಿವರಾಗಲಿ, ಇನ್ನು ಬೆಳಗಾವಿ ಜಿಲ್ಲೆಗೆ ಎಷ್ಟು ಮಂತ್ರಿಗಿರಿ ಸಿಗಲಿದೆ ಎಂಬುದರ ಬಗ್ಗೆ ನಾನು ಪ್ರತಿಕ್ರಿಯಿಸಲಾರೆ, ಅದು ಹೈಕಮಾಂಡ್ ನಾಯಕರಿಗೆ ಬಿಟ್ಟ ವಿಚಾರ, ಈ ಬಗ್ಗೆ ಸಿಎಂ ಹಾಗೂ ಹಿರಿಯ ನಾಯಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ,'' ಎಂದರು

ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ಶುಭ ಮುಹೂರ್ತ ನಿಗದಿಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ಶುಭ ಮುಹೂರ್ತ ನಿಗದಿ

ಏಪ್ರಿಲ್‌ನಲ್ಲಿ ಸಂಪುಟ ವಿಸ್ತರಣೆ ಆಗಬಹುದು ಎನ್ನುವ ಮಾತುಗಳಿವೆ. ಪಂಚರಾಜ್ಯ ಚುನಾವಣೆ ಬಳಿಕ ಆ ರಾಜ್ಯಗಳಲ್ಲಿ ಹೊಸ ಮುಖ್ಯಮಂತ್ರಿ ಆಯ್ಕೆ ಸಂಬಂಧ ಹೈಕಮಾಂಡ್ ನಾಯಕರು ಬ್ಯುಸಿಯಾಗಿದ್ದಾರೆ, ಆನಂತರ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಯಬಹುದು ಎಂದರು.

Balachandra Jarkiholi Says Ramesh Jarkiholi Will Be Inducted in to Bommai Cabinet Soon

ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ''ಅವರು ಹೋಗ್ತಾರೆ, ಇವರು ಹೋಗ್ತಾರೆ ಅಂತೆಲ್ಲಾ ಎಲ್ಲರೂ ಸುಮ್ಮನೆ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಪಕ್ಷ ಬಿಟ್ಟು ಯಾರೂ ಹೋಗುವುದಿಲ್ಲ. ಎಲ್ಲರೂ ಬಿಜೆಪಿಯಲ್ಲೇ ಇರುತ್ತಾರೆ. 2023ರ ಚುನಾವಣೆಯಲ್ಲಿ 17 ಶಾಸಕರು ಬಿಜೆಪಿ ಟಿಕೆಟ್‌ ಮೇಲೆಯೇ ಸ್ಪರ್ಧಿಸುತ್ತಾರೆ. ವದಂತಿ ಹಬ್ಬಿಸುವವರ ಬಗ್ಗೆ ತಲೆಕೆಡಿಸಿಕೊಳ್ಳೋದು ಬೇಡ,'' ಎಂದರು.

ಹೈಕಮಾಂಡ್ ಸೂಚನೆ ಬಳಿಕ ಸಂಪುಟ ವಿಸ್ತರಣೆ, ಪುನಾರಚನೆ: ಸಿಎಂ ಬಸವರಾಜ ಬೊಮ್ಮಾಯಿಹೈಕಮಾಂಡ್ ಸೂಚನೆ ಬಳಿಕ ಸಂಪುಟ ವಿಸ್ತರಣೆ, ಪುನಾರಚನೆ: ಸಿಎಂ ಬಸವರಾಜ ಬೊಮ್ಮಾಯಿ

ಈ ಬಗ್ಗೆ ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ಸಿಎಂ ಬೊಮ್ಮಾಯಿ, ನಮ್ಮ ಪಕ್ಷವನ್ನು ಬಿಟ್ಟು ಯಾರೂ ಹೊರ ಹೋಗುವುದಿಲ್ಲ. ಬೇರೆ ಪಕ್ಷಗಳಿಂದ ಬರುವವರ ಬಗ್ಗೆ ನೀವೆ ಕಾದು ನೋಡಿ. ಬಿಜೆಪಿ ಕಾರ್ಯಕಾರಣಿ ಸಭೆ ಮಾ.30 ಮತ್ತು 31ರಂದು ನಡೆಯುತ್ತದೆ. ಪ್ರಮುಖ ನಾಯಕರುಗಳ ರಾಜ್ಯ ಪ್ರವಾಸ, ಮುಂದಿನ ಚುನಾವಣೆಗಳಿಗೆ ತಯಾರಿ ಸೇರಿದಂತೆ ಹಲವು ವಿಷಯಗಳನ್ನು ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದಿದ್ದರು.

ಸಂಪುಟ ವಿಸ್ತರಣೆ ಅಪ್ಡೇಟ್:
"ಗುಜರಾತ್ ರಾಜ್ಯ" ಮಾದರಿಯ ಸಂಪುಟ ಪುನರ್ ರಚನೆಯನ್ನು ಪರಿಗಣಿಸುತ್ತಿದೆ ಎಂದು ಮೂಲಗಳು ಹೇಳಿವೆ. 2023ರಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದಕ್ಕಾಗಿ ಬಿಜೆಪಿ ಯೋಜನೆ ಹಾಕಿಕೊಂಡಿದ್ದು, ಸಂಪುಟ ವಿಸ್ತರಣೆಯೂ ಈ ಯೋಜನೆಯ ಭಾಗವಾಗಲಿದೆ.

ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ನಾಲ್ಕು ಸಚಿವ ಸ್ಥಾನಗಳು ಖಾಲಿ ಇವೆ.ಆದರೆ, ಇನ್ನೂ ಎರಡು ಸ್ಥಾನವನ್ನು ತುಂಬುವ ಸಾಧ್ಯತೆಯೂ ಇದೆ. ಬಿಜೆಪಿಯ ಹಿರಿಯ ನಾಯಕರನ್ನು ಸಚಿವ ಸಂಪುಟದಿಂದ ಕೈಬಿಡುವ ಸಾಧ್ಯತೆಯೂ ಇದೆ. ಕೆಲವರು ತಮಗೆ ಅವಕಾಶ ನೀಡುವಂತೆ ಸಂಪುಟದಿಂದ ಹಿರಿಯ ನಾಯಕರನ್ನು ಕೈಬಿಡುವಂತೆ ಮನವಿ ಮಾಡಿದ್ದಾರೆ. ವರದಿಗಳ ಪ್ರಕಾರ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಪುತ್ರ ಬಿವೈ ವಿಜಯೇಂದ್ರಗೆ ಪ್ರಮುಖ ಕ್ಯಾಬಿನೆಟ್ ಸ್ಥಾನವನ್ನು ಕಾಯ್ದಿರಿಸಲಾಗಿದೆ. ಆದರೆ, ಎಲ್ಲವೂ ಸದ್ಯಕ್ಕೆ ರಾಜಕೀಯ ಪಡಸಾಲೆಯ ಗುಸು ಗುಸು ಸುದ್ದಿಯಾಗಿದ್ದು, ಯಾವುದಕ್ಕೂ ಸ್ಪಷ್ಟ ಆಧಾರಗಳಿಲ್ಲ.

Recommended Video

ಭಗವದ್ಗೀತೆಯನ್ನು ಖುರಾನ್ ಮತ್ತು ಬೈಬಲ್ ಗೆ ಕಂಪೇರ್ ಮಾಡೋಕೆ ಆಗಲ್ಲ | Oneindia Kannada

English summary
KMF president Balachandra Jarkiholi said Ramesh Jarkiholi will be inducted in to Bommai Cabinet soon
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X