ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಸದಿಂದ ರಸ : 'ಮುಳುಗಡೆ ನಗರಿ' ಬಾಗಲಕೋಟೆ ಈಗ ಮಾದರಿ ನಗರಸಭೆ

By ನಮ್ಮ ಪ್ರತಿನಿಧಿ
|
Google Oneindia Kannada News

ಇದೇನು ಬಿಡು ಕಸ ಇದರಿಂದೇನು ಪ್ರಯೋಜನ ಅಂತ ನಿರ್ಲಕ್ಷ ಮಾಡೋರು ಸುಮಾರು ಜನ. ಕಸದಿಂದ ರಸ ಮಾಡಬೇಕೆಂದು ಸಲಹೆ. ಸಂದೇಶ, ಜಾಗೃತಿ ಮೂಡಿಸೋರಿಗಂತೂ ಕೊರತೆನೆ ಇಲ್ಲ. ಆದರೆ ಕಸದಿಂದ ರಸ ಮಾಡಬೇಕು ಎಂದು ಸಲಹೆ ನೀಡಿದಂತೆ ಅದನ್ನು ಅನುಸರಿಸೋರು ತುಂಬಾನೆ ಕಮ್ಮಿ. ಆದರೆ ಇಲ್ಲೊಂದು ನಗರಸಭೆ ಈ ಕೆಲಸವನ್ನು ತುಂಬಾನೆ ಅಚ್ಚುಕಟ್ಟಾಗಿ ಮಾಡುತ್ತಿದೆ.

20 ಎಕರೆ ಜಮೀನು ಏಕಕಾಲಕ್ಕೆ ಬಿತ್ತಿದ ಬಲರಾಮರು..!20 ಎಕರೆ ಜಮೀನು ಏಕಕಾಲಕ್ಕೆ ಬಿತ್ತಿದ ಬಲರಾಮರು..!

ಕಸದಿಂದ ರಸ ಮಾಡುತ್ತಾ ನಗರ ಸ್ವಚ್ಚತೆ ಜೊತೆಗೆ ನಗರಸಭೆಗೆ ಹೆಚ್ಚಿನ ಆದಾಯ ತರುತ್ತಿದೆ. ಇದು ಕಸದಿಂದ ರಸ ಪಾಲಿಸಿಯನ್ನು ಸಮರ್ಪಕವಾಗಿ ಪಾಲಿಸಿದ ವಿಶೇಷ ನಗರಸಭೆ ಸ್ಟೋರಿ. ಅಂದ ಹಾಗೆ ಆ ನಗರಸಭೆ ಯಾವುದೂ ಅಲ್ಲ.

ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಧಮ್ಮೂರು ಜಲಪಾತಪ್ರವಾಸಿಗರನ್ನು ಕೈ ಬೀಸಿ ಕರೆಯುವ ಧಮ್ಮೂರು ಜಲಪಾತ

'ಮುಳುಗಡೆ ನಗರಿ' ಅಂತ ಖ್ಯಾತಿ ಹೊಂದಿರೋ ಬಾಗಲಕೋಟೆಯ ನಗರಸಭೆ. ಬಾಗಲಕೋಟೆ ನಗರಸಭೆ ಈಗ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಇದಕ್ಕೆ ಕಾರಣ ಕಸದಿಂದ ರಸ ಎಂಬ ನೀತಿಯನ್ನು ಅಚ್ಚುಕಟ್ಟಾಗಿ ಅಳವಡಿಸಿಕೊಂಡಿರೋದು.

ನಿಜಾಮರ ಕಾಲದ ಬೋನಾಳ್ ಕೆರೆಯ ಸುತ್ತ ಒಂದು ಸುತ್ತು!ನಿಜಾಮರ ಕಾಲದ ಬೋನಾಳ್ ಕೆರೆಯ ಸುತ್ತ ಒಂದು ಸುತ್ತು!

ಹೌದು, ಬಾಗಲಕೋಟೆ ನಗರಸಭೆಯಿಂದ ನಗರದಲ್ಲಿ ಬರುವ ಹಸಿ ಮತ್ತು ಒಣಕಸದಿಂದ 15 ರಿಂದ 20 ಟನ್ ಶುದ್ದವಾದ ಕಾಂಪೋಸ್ಟ್ ಗೊಬ್ಬರ ತಯಾರಿಕೆ ಮಾಡುತ್ತಿದ್ದಾರೆ. ಹಳೇ ಬಾಗಲಕೋಟೆ ಮತ್ತು ನವನಗರದ ಪ್ರತಿನಿತ್ಯದ ಕಸ ಅಂದಾಜು ಸುಮಾರು 45 ರಿಂದ 50 ಟನ್​​ ಸಂಗ್ರಹವಾಗುತ್ತೆ. ಕಸದಿಂದ ರಸ ತಯಾರಿಕೆ ಬಗ್ಗೆ ಇನ್ನಷ್ಟು ಮುಂದೆ ಓದಿ...

ಪ್ರತಿನಿತ್ಯ ಸಂಗ್ರಹವಾಗುವ ಕಸ

ಪ್ರತಿನಿತ್ಯ ಸಂಗ್ರಹವಾಗುವ ಕಸ

ಪ್ರತಿನಿತ್ಯ ಸಂಗ್ರಹವಾಗುವ ಕಸ ಸಂಗ್ರಹ ಘಟಕದಲ್ಲಿ ಗುಡ್ಡದ ರೀತಿಯಲ್ಲಿ ಸಂಗ್ರಹವಾಗುತ್ತಿತ್ತು. ಹೀಗಾಗಿ ಬೆಂಗಳೂರಿಗರಂತೆ ವಿವಾದಕ್ಕೀಡಾಗಬಾರದು ಅಂತ ಯೋಚನೆ ಮಾಡಿದ ನಗರ ಸಭೆ ಅಧಿಕಾರಿಗಳು ಕಸವನ್ನ ಕರಗಿಸೋ ಉಪಾಯವೊಂದನ್ನ ಕಂಡು ಹಿಡಿದ್ರು. ಕಸದಿಂದ ತಯಾರಿಸೋ ಸಾವಯವ ಗೊಬ್ಬರ ತಯಾರಿಕಾ ಘಟಕ ನಿರ್ಮಾಣ.

ಪ್ರತಿ ದಿನ 45 ಸಾವಿರ ಆದಾಯ

ಪ್ರತಿ ದಿನ 45 ಸಾವಿರ ಆದಾಯ

ಈಗ ಇದರಿಂದಾಗಿ ಪ್ರತಿ ದಿನ 45 ಸಾವಿರ ಆದಾಯ ನಗರಸಭೆ ಕೈಸೇರುತ್ತಿದೆ. ಕೇಂದ್ರಸರಕಾರದ ರಸಗೊಬ್ಬರ ಇಲಾಖೆ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು, ಪ್ರತಿ ಟನ್ ಗೆ 1,500 ರೂಪಾಯಿ ಸಬ್ಸಿಡಿ ಸಿಗುತ್ತಿದೆ. ರಾಜ್ಯದಲ್ಲಿಯೇ ಬಾಗಲಕೋಟೆ ನಗರಸಭೆ ಈ ಕಾರ್ಯದಲ್ಲಿ ಯಶಸ್ಸು ಕಂಡಿದ್ದು ವಿಶೇಷ.

ಫಲವತ್ತಾದ ಕಾಂಪೋಸ್ಟ್ ಗೊಬ್ಬರ

ಫಲವತ್ತಾದ ಕಾಂಪೋಸ್ಟ್ ಗೊಬ್ಬರ

ಇನ್ನು ಕಸವನ್ನು ಜೆಸಿಬಿ ಮೂಲಕ ಟ್ರಿಪಲ್ ಡೆಕ್ ವೈಬ್ರೇಟರ್ ಸ್ಕ್ರೀನಿಂಗ ಮಷಿನ್ ಗೆ ಸಾಗಿಸುತ್ತಾರೆ. ಅಲ್ಲಿ ಕಸ ಐದು ಹಂತದಲ್ಲಿ ಸಂಸ್ಕರಣೆಗೊಂಡು ಫಲವತ್ತಾದ ಕಾಂಪೋಸ್ಟ್ ಗೊಬ್ಬರ ತಯಾರಾಗುತ್ತದೆ.

ಬಾಗಲಕೋಟೆ ನಗರಸಭೆ ವಿಶೇಷತೆ

ಬಾಗಲಕೋಟೆ ನಗರಸಭೆ ವಿಶೇಷತೆ

ಗೊಬ್ಬರವನ್ನು ನೇರವಾಗಿ ಟ್ರ್ಯಾಕ್ಟರ್ ಮೂಲಕ ಸಾಗಿಸುವ ವ್ಯವಸ್ಥೆ ಮಾಡಲಾಗಿದೆ.ಐದು ವಿಧದಲ್ಲಿ ಕಲ್ಲು, ಪ್ಲಾಸ್ಟಿಕ್,ಗೊಬ್ಬರ ಎಲ್ಲವನ್ನೂ ಪ್ರತ್ಯೇಕವಾಗಿ ಬೇರ್ಪಡಿಸುವ ತಂತ್ರಜ್ಞಾನ ಈ ಯಂತ್ರಕ್ಕಿದ್ದು ನಗರಸಭೆ ಅಧಿಕಾರಿಗಳು ಕಸದಿಂದ ರಸ ಮಾಡುವಲ್ಲಿ ಯಶಸ್ಸು ಗಳಿಸಿದ್ದಾರೆ.

ಬಾಗಲಕೋಟೆ ನಗರಸಭೆ ವಿಶೇಷತೆ ಏನೆಂದರೆ ನಗರದಲ್ಲಿ ತ್ಯಾಜ್ಯ ಸಂಗ್ರಹವನ್ನು ನೇರವಾಗಿ ಮಾಡಲಾಗುತ್ತದೆ.

ಕಸ ವಿಲೇವಾರಿ ಘಟಕಕ್ಕೆ

ಕಸ ವಿಲೇವಾರಿ ಘಟಕಕ್ಕೆ

ಪ್ರತಿದಿನ ಕಸದ ವಾಹನಗಳಿಗೆ ಸಾರ್ವಜನಿಕರು ನೇರವಾಗಿ ಕಸವನ್ನು ಹಾಕುವ ಸೌಲಭ್ಯ ಕಲ್ಪಿಸಲಾಗಿದೆ. ಜನರೇ ಹಸಿ ಕಸ ಒಣಕಸವನ್ನು ಬೇರ್ಪಡಿಸಿ ವಾಹನಗಳಿಗೆ ಸುರಿಯುತ್ತಾರೆ. ನಂತರ ಸೀದಾ ಕಸ ವಿಲೇವಾರಿ ಘಟಕಕ್ಕೆ ಕಸ ರವಾನೆಯಾಗುತ್ತದೆ. ಅಲ್ಲಿ ಕೆಲ ದಿನಗಳ ಕಾಲ ಕಸವನ್ನು ಕೊಳೆಸಿ ಗೊಬ್ಬರವನ್ನು ತಯಾರು ಮಾಡಲಾಗುತ್ತದೆ.

ಗೊಬ್ಬರವನ್ನು ರೈತರಿಗೆ 2 ರೂಪಾಯಿ ಕೆಜಿಯಂತೆ ಮಾರಾಟ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.

ಪರಿಸರ ಅಭಿಯಂತರರಾದ ಹನುಮಂತ ಕಲಾದಗಿ

ಪರಿಸರ ಅಭಿಯಂತರರಾದ ಹನುಮಂತ ಕಲಾದಗಿ

ನಗರಸಭೆ ಪರಿಸರ ಅಭಿಯಂತರರಾದ ಹನುಮಂತ ಕಲಾದಗಿ ಈ ಘಟಕದ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ಮುನ್ನಡೆಸುತ್ತಿದ್ದಾರೆ. ದಿನಾಲೂ ಘಟಕಕ್ಕೆ ಭೇಟಿ ನೀಡಿ ಕಾರ್ಮಿಕರಿಂದ ಸಮರ್ಪಕವಾಗಿ ಈ ಕಾರ್ಯ ನಡೆಸುತ್ತಿದ್ದಾರೆ. ಈ ಕಾರ್ಯದಲ್ಲಿ ಹನುಮಂತ ಕಲಾದಗಿಯವರ ಇಚ್ಚಾಶಕ್ತಿ ಹೆಚ್ಚಾಗಿದ್ದು ಕಾಂಪೋಸ್ಟ್ ಗೊಬ್ಬರ ತಯಾರಿಕೆ ಯಶಸ್ಸಿಗೆ ಕಾರಣವಾಗಿದೆ. ಇನ್ನು ಇಲ್ಲಿ ಪ್ಲಾಷ್ಟಿಕ್ ಕೂಡ ವೇಸ್ಟ ಮಾಡೋದಿಲ್ಲ ಕಸದಲ್ಲಿ ಬಂದ ಪ್ಲಾಸ್ಟಿಕ್ ಗಳನ್ನು ಸಿಮೆಂಟ್ ಫ್ಯಾಕ್ಟರಿಗೆ ಕಳಿಸುತ್ತಾರೆ.

ಎಲ್ಲ ನಗರಸಭೆಗಳಿಗೂ ಮಾದರಿ

ಎಲ್ಲ ನಗರಸಭೆಗಳಿಗೂ ಮಾದರಿ

ಯಾವುದೇ ಒಂದು ವಸ್ತುವನ್ನು ಇಲ್ಲಿ ನಿರುಪಯುಕ್ತ ಎಂದು ಹೇಳುವ ಹಾಗಿಲ್ಲ. ಬಾಗಲಕೋಟೆ ನಗರಸಭೆಯ ಈ ಕಾರ್ಯ ಸಾರ್ವಜನಿಕರಿಗೆ ತುಂಬಾನೆ ಮೆಚ್ಚುಗೆಯಾಗಿದ್ದು ಎಲ್ಲರೂ ಕೂಡ ಸಹಕಾರ ನೀಡುತ್ತಿದ್ದಾರೆ.ಜೊತೆಗೆ ಇದು ಎಲ್ಲ ನಗರಸಭೆಗಳಿಗೂ ಮಾದರಿ ಎಂದು ಶಹಬ್ಬಾಷ್ ಗಿರಿ ನೀಡುತ್ತಿದ್ದಾರೆ.

ಕಸದಿಂದ ವಿದ್ಯುತ್ ಶಕ್ತಿ

ಕಸದಿಂದ ವಿದ್ಯುತ್ ಶಕ್ತಿ

ಇದಷ್ಟೇ ಅಲ್ಲದೆ ನಗರಸಭೆ ಅಧಿಕಾರಿಗಳು ಕಸದಿಂದ ವಿದ್ಯುತ್ ಶಕ್ತಿ ಕೂಡ ತಯಾರು ಮಾಡಲು ಮುಂದಾಗಿದ್ದಾರೆ. ಈಗಾಗಲೇ ಇದಕ್ಕೆ ಸಿದ್ದತೆ ನಡೆದಿದ್ದು ಇನ್ನು ಕೆಲ ದಿನಗಳಲ್ಲಿ ಕಸದಿಂದ ವಿದ್ಯುತ್ ತಯಾರಿಕೆ ಶುರುವಾಗಲಿದೆ. ಏನೆ ಆಗಲಿ ಕಸದಿಂದ ರಸ ಮಾಡುವಲ್ಲಿ ಯಶಸ್ಸು ಕಂಡ ನಗರಸಭೆ ಇತರೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸ್ಪೂರ್ತಿಯಾಗಿದ್ದು ನಿಜ.

English summary
Bagalkot city municipal corporation successfully adopted solid waste management system to convert garbage in to money making avenues. An Inspiring story!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X