ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1700 ಮೆಗಾ ವ್ಯಾಟ್ ಇಂಧನ ಯೋಜನೆ: ಸರ್ಕಾರದೊಂದಿಗೆ ಅಜ್ಯೂರ್ ಪವರ್‌ ಒಪ್ಪಂದ

|
Google Oneindia Kannada News

ಎಝೆಡ್ಆರ್‌ಇ), ಕರ್ನಾಟಕ ಸರ್ಕಾರದೊಂದಿಗೆ ಮಹತ್ವದ ಆಸಕ್ತಿ ಪತ್ರವೊಂದಕ್ಕೆ (ಎಕ್ಸ್‌ಪ್ರೆಷನ್‌ ಆಫ್‌ ಇಂಟ್ರೆಸ್ಟ್‌-ಇಒಐ) ಸಹಿ ಹಾಕಿದೆ.

ಈ ಒಪ್ಪಂದದಡಿ ಕಂಪನಿ 1700 ಮೆಗಾ ವ್ಯಾಟ್ ಸಾಮರ್ಥ್ಯದ ಸೌರ, ವಾಯು ಹಾಗೂ ಹೈಬ್ರಿಡ್‌ ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಒಳಗೊಂಡಿದೆ. ಒಟ್ಟು ಯೋಜನೆಯ ಹೂಡಿಕೆ ವೆಚ್ಚ 13,300 ಕೋಟಿ ರೂ.ಗಳಾಗಿರಲಿದೆ.

Breaking; ಕಲ್ಲಿದ್ದಲು ಪೂರೈಕೆಗಾಗಿ 42 ಪ್ರಯಾಣಿಕ ರೈಲುಗಳು ರದ್ದುBreaking; ಕಲ್ಲಿದ್ದಲು ಪೂರೈಕೆಗಾಗಿ 42 ಪ್ರಯಾಣಿಕ ರೈಲುಗಳು ರದ್ದು

ವಿಂಡರ್ಗಿ ಇಂಡಿಯಾ 2022ರ ಈವೆಂಟ್‌ನಲ್ಲಿ ಅಜ್ಯೂರ್‌ ಪವರ್‌ ಮತ್ತು ಕರ್ನಾಟಕ ಸರ್ಕಾರದ ನಡುವೆ ಇಒಐಗೆ ಸಹಿ ಹಾಕಲಾಗಿತ್ತು. ರಾಜ್ಯ ಸರ್ಕಾರದ ಪರವಾಗಿ ರಾಜ್ಯ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಎಸ್‌ ಜಿ.ಕುಮಾರ್‌ ನಾಯಕ್‌ ಸಹಿ ಹಾಕಿದರು.

Azure Power Signs a Project with Karnataka Government

ಅಜ್ಯೂರ್‌ ಪವರ್ ಭಾರತದಾದ್ಯಂತ 2900 ಮೆಗಾ ವ್ಯಾಟ್‌ ನವೀಕರಿಸಬಹುದಾದ ಇಂಧನ ಆಸ್ತಿ ಹೊಂದಿದೆ ಮತ್ತು ಕಾರ್ಯಾಚರಣೆ ನಡೆಸುತ್ತಿದೆ ಹಾಗೂ ಕರ್ನಾಟಕದಲ್ಲಿ ಕೂಡ ಗಮನಾರ್ಹ ಉದ್ಯಮ ಹೊಂದಿದೆ.

ಈ ಘೋಷಣೆ ಕುರಿತು ಮಾತನಾಡಿದ ಅಜ್ಯೂರ್‌ ಪವರ್‌ನ ಸಿಎಫ್‌ಓ ಪವನ್‌ ಕುಮಾರ್‌ ಅಗರ್ವಾಲ್‌, "ಕರ್ನಾಟಕ ಸರ್ಕಾರದೊಂದಿಗೆ ಇಒಐಗೆ ಸಹಿ ಹಾಕಲು ಸಂತಸವಾಗುತ್ತಿದೆ. ಶುದ್ಧ ಇಂಧನ ಅಳವಡಿಕೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ ಮತ್ತು ದೇಶದಲ್ಲೇ ಅತಿ ಹೆಚ್ಚು ಅಳವಡಿಸಲ್ಪಟ್ಟ ನವೀಕರಿಸಬಲ್ಲ ಇಂಧನ ಸಾಮರ್ಥ್ಯ ಹೊಂದಿದೆ. ಈ ಇಒಐ, ರಾಜ್ಯದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯ ಗ್ರಿಡ್‌ ಸ್ಕೇಲ್‌ ನವೀಕರಿಸಬಹುದಾದ ಆಸ್ತಿ ಅಭಿವೃದ್ಧಿಪಡಿಸುವ ನಮ್ಮ ಬದ್ಧತೆಗೆ ಬಲ ನೀಡುತ್ತದೆ. ಇದು ಭಾರತದ ಕಾರ್ಬನ್‌ ಮುಕ್ತ ಪರಿಸರ ನಿರ್ಮಿಸುವ ಪಯಣಕ್ಕೆ ಕೊಡುಗೆ ನೀಡುತ್ತದೆ," ಎಂದರು.

English summary
Azure Power Signs a Project with Karnataka Government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X