ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮೆಚ್ಚಿದ ಕೊಡಗಿನ ಪುಷ್ಪಲೋಕ

By ಮೈಸೂರು ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಜನವರಿ,30: ಅದು ಕಾಫಿತೋಟದಲ್ಲಿ ಅರಳಿದ ಪುಷ್ಪಲೋಕ. ವ್ಯಕ್ತಿಯೊಬ್ಬರ ಹವ್ಯಾಸದ ಫಲವಾಗಿ ಸೃಷ್ಟಿಯಾದ ಪುಷ್ಪೋದ್ಯಾನ. ಅದರೊಳಗೆ ಕಾಲಿಟ್ಟರೆ ಹೂಗಳ ರಂಗಿನ ಲೋಕ ಯಾವುದೇ ಪುಷ್ಪೋದ್ಯಾನಕ್ಕಿಂತ ಕಡಿಮೆ ಇಲ್ಲ ಎಂಬುದನ್ನು ಸಾರಿ ಹೇಳುತ್ತದೆ.

ಸುಮಾರು ಐದಾರು ದಶಮಾನಗಳಿಂದ ತನ್ನ ಚೆಲುವನ್ನು ಪ್ರದರ್ಶಿಸುತ್ತಾ ಬಂದಿರುವ ಈ ಸುಂದರ ಉದ್ಯಾನ ನೋಡಲು ಕೊಡಗಿನತ್ತ ಹೆಜ್ಜೆಹಾಕಬೇಕು ಎನಿಸಿದ್ದಲ್ಲಿ ಜನವರಿ 30 ಮತ್ತು 31ರಂದು ಹೋಗಬಹುದು. ಅಂದರೆ ಈ ಎರಡು ದಿನ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.

ಮಡಿಕೇರಿಯಿಂದ ಕುಶಾಲನಗರದ ಕಡೆಗೆ ರಾಜ್ಯ ಹೆದ್ದಾರಿಯಲ್ಲಿ ಎಂಟು ಕಿ.ಮೀ ಸಾಗಿದರೆ ಬೋಯಿಕೇರಿ ಸಿಗುತ್ತದೆ. ಇಲ್ಲಿನ ಬಲ್ಯಾಟ್ರಿ ಎಸ್ಟೇಟ್‍ ನಲ್ಲಿ ಈ ಪುಷ್ಪೋದ್ಯಾನ ನಿರ್ಮಾಣಗೊಂಡಿದೆ. ಇದರ ಹೆಸರು ಯೂಸೂಫ್ ಆಲಿಖಾನ್ ಮೆಮೋರಿಯಲ್ ಗಾರ್ಡನ್ ಷೋ.

ಯೂಸೂಫ್ ಆಲಿಖಾನ್ ಮೆಮೋರಿಯಲ್ ಗಾರ್ಡನ್ ಷೋ ಒಳಗೆ ಕಾಲಿಟ್ಟಿದ್ದೇ ಆದರೆ ನಮಗೊಂದು ವಿಶಿಷ್ಟ ಅನುಭವವಾಗುತ್ತದೆ. ಏಕೆಂದರೆ ಇದೊಂದು ಸಾಧಾರಣ ಉದ್ಯಾನವನವಾಗಿರದೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಖ್ಯಾತಿಯ ವಿಶಿಷ್ಟ ಜಾತಿಯ ಪುಷ್ಪಗಿಡಗಳು ಈ ಉದ್ಯಾನವನದಲ್ಲಿ ಸ್ಥಾನಪಡೆದಿವೆ. ಇಲ್ಲಿ ವಿವಿಧ ಬಗೆಯ ಪುಷ್ಪಗಿಡಗಳು ಅರಳಿ ಕಂಗೊಳಿಸುವುದನ್ನು ನೋಡುವುದೇ ಮನಸ್ಸಿಗೆ ಮುದ ನೀಡುತ್ತದೆ.[ಕಿಲಕಿಲನೆ ನಗೆ ಬೀರುವ ಲಾಲ್ಬಾಗ್ ಪುಷ್ಪಲೋಕ]

ಹಾಗಾದರೆ ನೀವು ಈ ಉದ್ಯಾನ ನೋಡಲು ಹೋಗಬೇಕಾ? ಹೋಗುವುದಕ್ಕಿಂತ ಮೊದಲು ಈ ಉದ್ಯಾನದ ಸೊಬಗನ್ನು ಈ ಕೆಳಗಿನ ಚಿತ್ರಗಳಲ್ಲಿ ನೋಡಿ ಕಣ್ತುಂಬಿಕೊಳ್ಳಿ. ಬಳಿಕ ಇದರ ನಿಜವಾದ ಅಮೋಘ ಸೌಂದರ್ಯವನ್ನು ಸ್ಥಳಕ್ಕೆ ತೆರಳಿ ಕೆಲವು ಗಂಟೆಗಳ ಕಾಲ ಪ್ರಶಾಂತವಾಗಿ ಕಳೆಯಲು ಯಾವುದೇ ಅಡ್ಡಿಯಿಲ್ಲ.

ಯೂಸೂಫ್ ಆಲಿಖಾನ್ ಮೆಮೋರಿಯಲ್ ಗಾರ್ಡನ್ ನಿರ್ಮಾತೃ ಯಾರು?

ಯೂಸೂಫ್ ಆಲಿಖಾನ್ ಮೆಮೋರಿಯಲ್ ಗಾರ್ಡನ್ ನಿರ್ಮಾತೃ ಯಾರು?

ಮಾಜಿ ರಾಜ್ಯಸಭಾ ಸದಸ್ಯರಾಗಿದ್ದ ಎಫ್.ಎಂ.ಖಾನ್ ರವರ ತಂದೆ ಯೂಸೂಫ್ ಆಲಿಖಾನ್ ಅವರ ಹವ್ಯಾಸದ ಫಲವೇ ಈ ಉದ್ಯಾನ. ಹವ್ಯಾಸ ಮನಸ್ಸಿಗೆ ಶಾಂತಿ, ಬದುಕಿನ ಸೌಂದರ್ಯತೆ ಹೆಚ್ಚಿಸುತ್ತದೆ ಎಂಬುದಕ್ಕೆ ಈ ಉದ್ಯಾನವನೇ ಸಾಕ್ಷಿ.

ಹೇಗೆ ನಿರ್ಮಾಣಗೊಂಡಿತು ಈ ಉದ್ಯಾನವನ?

ಹೇಗೆ ನಿರ್ಮಾಣಗೊಂಡಿತು ಈ ಉದ್ಯಾನವನ?

ಯೂಸೂಫ್ ಆಲಿಖಾನ್ ಪುಷ್ಪಪ್ರೇಮಿಗಳಾಗಿದ್ದರು. ಹಾಗಾಗಿ ಅವರು ತಮ್ಮ ಮನೆಯ ಮುಂದಿನ ತೋಟದಲ್ಲಿ ಪುಷ್ಪೋದ್ಯನವನ ನಿರ್ಮಿಸಿ ಅದಕ್ಕೆ ವಿವಿಧ ಬಗೆಯ ಹೂಗಿಡಗಳನ್ನು ಸೇರಿಸುತ್ತಾ ಹೋದರು. ಹಾಗೆ ನಿರ್ಮಾಣಗೊಂಡ ಪುಷ್ಪೋದ್ಯಾನವನಕ್ಕೆ ಅವರ ಮಗ ಎಫ್.ಎಂ.ಖಾನ್ ಜೀವ ತುಂಬಿ ಮುನ್ನಡೆಸುತ್ತಾ ಬರುತ್ತಿದ್ದು ಇದರಿಂದ ಕೊಡಗಿನಲ್ಲಿ ಸುಂದರ ಪುಷ್ಪಲೋಕ ಅರಳಿ ನಿಲ್ಲಲು ಸಾಧ್ಯವಾಗಿದೆ.

ಈ ಉದ್ಯಾನವನದಲ್ಲಿ ಯಾವ ರೀತಿಯ ಗಿಡಗಳಿವೆ?

ಈ ಉದ್ಯಾನವನದಲ್ಲಿ ಯಾವ ರೀತಿಯ ಗಿಡಗಳಿವೆ?

ಕಣ್ಣು ಹಾಯಿಸಿದುದ್ದಕ್ಕೂ ಕಣ್‍ಸೆಳೆಯುವ ಬೇಲಿಗಿಡಗಳು, ಮೇಲೆ ಚಪ್ಪರದಲ್ಲಿ, ಕೆಳಗೆ ನೆಲದಲ್ಲಿ ಅರಳಿ ಕಂಗೊಳಿಸುವ ಲೇಡೀಶ್ ಶಾಕ್ಸ್ ನಂತಹ ಹೂಗಳು, ವಿವಿಧ ಬಗೆಯ ಪುಷ್ಪಗಿಡಗಳು, ಹಲವು ದಶಕಗಳನ್ನು ಸವೆಸಿದ ಕುಬ್ಜ ಬೋನ್ಸಾಯ್ ಗಳು, ಮುಳ್ಳಿನ ಹೊದಿಕೆಯ ಕ್ಯಾಕ್ಟಸ್ ಗಳು, ಮರಗಳಲ್ಲಿ, ಕುಂಡಗಳಲ್ಲಿ ನೇತಾಡುವ ಆರ್ಕಿಡಾಗಳು, ವಿವಿಧ ನಮೂನೆಯ ಎಲೆಗಿಡಗಳು, ಮನತಣಿಸುವ ಗುಲಾಬಿ, ಆಂಥೋರಿಯಂ ಹೀಗೆ ಒಂದೇ ಎರಡೇ ಲೆಕ್ಕಕ್ಕೆ ಸಿಗದಷ್ಟು ಹಲವು ಹೂ ಗಿಡಗಳು ನಮ್ಮೆಡೆಗೆ ತುಂಟ ನಗೆ ಬೀರಿ ವಿಸ್ಮಯಗೊಳಿಸುತ್ತವೆ.

ಬಣ್ಣದ ಬಣ್ಣದ ಡೇರೆ ಪ್ರಪಂಚವಿದೆ?

ಬಣ್ಣದ ಬಣ್ಣದ ಡೇರೆ ಪ್ರಪಂಚವಿದೆ?

ಎರಡು ಅಂಗೈ ಬಿಚ್ಚಿಟ್ಟರೂ ಡೇರೆ ಹೂವಿನ ಅಗಲಕ್ಕೆ ಸಾರಿ ಸಾಟಿಯಾಗದು. ಇದರಲ್ಲಿ ನಾನಾ ಬಣ್ಣಗಳು, ಆಕಾರಗಳು ನಮಗೆ ಸಿಗುತ್ತದೆ. ಈ ಡೇರೆ ಪ್ರಪಂಚವನ್ನೂ ನೀವು ಇಲ್ಲಿ ನೋಡಬಹುದು

ಚೆಂಡೂ ಹೂವಿನ ಲೋಕದಲ್ಲೂ ವಿಹರಿಸಿ

ಚೆಂಡೂ ಹೂವಿನ ಲೋಕದಲ್ಲೂ ವಿಹರಿಸಿ

ಮಲೆನಾಡಿನ, ದೀಪಾವಳಿಗೆ ಎಲ್ಲಾ ಮನೆಯಲ್ಲಿ ಕಂಗೊಳಿಸುವ ಹೂವೇ ಚೆಂಡೂ ಹೂ. ದುಂಡನೇ ಆಕಾರದ ಈ ಹೂವಿನಲ್ಲೂ ಹಳದಿ, ಕೆಂಪೂ ಹೀಗೆ ನಾನಾ ಬಣ್ಣಗಳು ಇದರಲ್ಲಿದೆ. ಇದು ಸಹ ಇಲ್ಲಿದೆ.

ದೇಶವಿದೇಶ ಹೂವುಗಳು ಇಲ್ಲಿವೆ?

ದೇಶವಿದೇಶ ಹೂವುಗಳು ಇಲ್ಲಿವೆ?

ಪುಷ್ಪೋದಾನವನದಲ್ಲಿ ಅದೆಷ್ಟು ಹೂಗಿಡಗಳು ಕಂಗೊಳಿಸುತ್ತವೆಯೆಂದರೆ, ಬಹುವಾರ್ಷಿಕ ಪುಷ್ಪಗಿಡಗಳಿಗೆ ಸೇರುವ ಪಿಂಕ್ಸ್, ಪ್ಲೋಕ್ಸ್, ಜೀನಿಯ, ಸಾಲ್ವಿಯಾ, ಜರ್ಬೆರಾ, ಪಿಟೋನಿಯಾ, ಕರ್ಣಕುಂಡಲ, ಕಾರ್ನೇಸನ್, ಜಿರಾನಿಯಂ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವುಗಳ ಜೊತೆಗೆ ಚಂದದ ಅಲೋಕೇಶಿಯಾ, ಫರ್ನ್, ಫಾಮ್ಸ್, ಕ್ಯಾಕ್ಟಸ್, ಸೆಕ್ಯುಲೆಂಟ್ಸ್, ಡ್ರಸೀನ, ಮರಾಂಟ ಮುಂತಾದ ಎಲೆಗಿಡಗಳೂ ಇಲ್ಲಿ ಕಾಣಸಿಗುತ್ತವೆ.

ಈ ಪುಷ್ಪೋದ್ಯಾನದ ವಿಶೇಷತೆಯೇನು?

ಈ ಪುಷ್ಪೋದ್ಯಾನದ ವಿಶೇಷತೆಯೇನು?

ಈ ಪುಷ್ಪೋದ್ಯಾನವನದಲ್ಲಿ ಕಾಣುವ ಪ್ರಮುಖ ವೈಶಿಷ್ಟ್ಯವೆಂದರೆ, ಸುಮಾರು 60 ವರ್ಷಕ್ಕೂ ವಯಸ್ಸಾದ ಕ್ಯಾಕ್ಟಸ್. ಇದು ಸುಮಾರು 20 ಅಡಿಗಿಂತಲೂ ಹೆಚ್ಚು ಎತ್ತರವಿದ್ದು, ದೊಡ್ಡ ಗಾತ್ರವನ್ನು ಹೊಂದಿದೆ. ಈ ಗಿಡದ ಸುತ್ತಲೂ ವಿವಿಧ ಜಾತಿಯ ಹೂಗಿಡಗಳನ್ನು ನೆಡಲಾಗಿದ್ದು ಅರಳಿ ಕಂಗೊಳಿಸುತ್ತವೆ.

ಮನೆಯ ಸೌಂದರ್ಯ ಹೆಚ್ಚಿಸಿದ ಹೂವಿನ ಸಾಮ್ರಾಜ್ಯ

ಮನೆಯ ಸೌಂದರ್ಯ ಹೆಚ್ಚಿಸಿದ ಹೂವಿನ ಸಾಮ್ರಾಜ್ಯ

ಭವ್ಯ ಮನೆಯ ಜಗುಲಿ, ಮೆಟ್ಟಿಲುಗಳಲ್ಲಿ ಹೂಕುಂಡವನ್ನಿರಿಸಲಾಗಿದ್ದು, ಈ ಹೂಕುಂಡಗಳಲ್ಲಿ ಬಗೆಬಗೆಯ ಪುಷ್ಪಗಿಡಗಳು, ಎಲೆಗಿಡಗಳನ್ನು ನೆಡಲಾಗಿದೆ. ಮರದಲ್ಲಿ ನೇತಾಡುವ ಡಬ್ಬಗಳಲ್ಲಿ ಹಲವು ಬಗೆಯ ಹೂಗಳು ಅರಳಿ ನಿಂತಿವೆ.

ಮನಸ್ಸೆಳೆಯುವ ಆನೆ ಕಿವಿಯಾಕಾರದ ಆಂಥೋರಿಯಂ

ಮನಸ್ಸೆಳೆಯುವ ಆನೆ ಕಿವಿಯಾಕಾರದ ಆಂಥೋರಿಯಂ

ಪುಷ್ಪೋದ್ಯಾನವನದಲ್ಲಿ ಕೆಂಪು ಹಳದಿ ಮಿಶ್ರಿತ ಲೇಡಿಸ್ ಶೂ, ಆನೆ ಕಿವಿಯಾಕಾರದ ಆಂಥೋರಿಯಂ, ಸುವಾಸನೆ ರಹಿತ ಕಾಕ್ಸ್ ಕೂಂಬ್, ಸಿಲೋಸಿಯಾ, ಪಿಜೂನಿಯ, ಸ್ಟಾಕ್, ಸಾಲ್ವಿಯಗಳು, ಮುಂಜಾನೆ ಅರಳಿ ಸಂಜೆ ಮುದುಡುವ ಸ್ಕಾರ್ಚಿಯ, ಚೆಂಡು ಹೂ, ನಾನಾ ಬಗೆಯ, ನಾನಾ ಬಣ್ಣದ ಗುಲಾಬಿಗಳು, ಕಳೆದ ಹಲವು ವರ್ಷಗಳಿಂದ ಬೆಳೆಯಲಾಗದೆ ಕುಬ್ಜವಾಗಿಯೇ ಉಳಿದಿರುವ ಬೋನ್ಸಾಯ್ ಗಳು. ಸೈಕಾಸ್ ಪಾಮ್‍ಗಳು, ಬೇಲಿಗಿಡಗಳು ಮನಸ್ಸೆಳೆಯುತ್ತವೆ.

ಪುಷ್ಪೋದ್ಯಾನವನ ವೀಕ್ಷಿಸುತ್ತಿರುವ ಶಿಲಾ ಬಾಲಕರು

ಪುಷ್ಪೋದ್ಯಾನವನ ವೀಕ್ಷಿಸುತ್ತಿರುವ ಶಿಲಾ ಬಾಲಕರು

ಪುಷ್ಪೋದ್ಯಾನವನದ ನಡುವೆ ಕಾರಂಜಿಯಿದ್ದು, ಇದರ ಸುತ್ತಲೂ ಬಗ್ಗಿ ಕಾರಂಜಿಯನ್ನೇ ನೋಡುತ್ತಿರುವ ಶಿಲಾ ಬಾಲಕರು ಕಂಡು ಬರುತ್ತಾರೆ. ಈ ಕಾರಂಜಿಯ ಸುತ್ತಲೂ ಬಗೆಬಗೆಯ ಹೂವುಗಳು ಅರಳಿ ಕಂಗೊಳಿಸುತ್ತವೆ.

ಯಾರು ಪುಷ್ಪ ಉದ್ಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ?

ಯಾರು ಪುಷ್ಪ ಉದ್ಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ?

ಸ್ವದೇಶಿ, ವಿದೇಶಿ ಪುಷ್ಪಗಿಡಗಳನ್ನು ಹೊಂದಿರುವ ಪುಷ್ಪೋದ್ಯಾನವನಕ್ಕೆ ಈಗಾಗಲೇ ನೂರಾರು ಸಂಖ್ಯೆಯ ಸ್ವದೇಶಿ, ವಿದೇಶಿ ಪ್ರವಾಸಿಗರು ಭೇಟಿ ನೀಡಿ ಹೋಗಿದ್ದಾರೆ. ಅದರಲ್ಲೂ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ, ಐ.ಕೆ.ಗುಜ್ರಾಲ್ ಸೇರಿದಂತೆ ಹಲವಾರು ಗಣ್ಯರು ಇಲ್ಲಿಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರೆ ಈ ಪುಷ್ಪೋದ್ಯಾನವನದ ಮಹತ್ವ ಅರಿವಾಗುತ್ತದೆ.

ಯಾವ ಯಾವ ಸಮಯದಲ್ಲಿ ಪುಷ್ಪೋದ್ಯಾನ ವೀಕ್ಷಿಸಲು ಅವಕಾಶವಿದೆ?

ಯಾವ ಯಾವ ಸಮಯದಲ್ಲಿ ಪುಷ್ಪೋದ್ಯಾನ ವೀಕ್ಷಿಸಲು ಅವಕಾಶವಿದೆ?

ಕಳೆದ ಎರಡು ದಶಕಗಳಿಂದ ವರ್ಷಕ್ಕೊಮ್ಮೆ ಜನವರಿ ತಿಂಗಳಲ್ಲಿ ಈ ಪುಷ್ಪೋದ್ಯಾನ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿರುವ ಎಫ್.ಎಂ.ಖಾನ್ ಕೊಡಗಿನಲ್ಲಿ ಪುಷ್ಪೋದ್ಯಮ ಬೆಳೆಯ ಬೇಕೆಂಬ ಆಶಯವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.

English summary
Yusuf Ali Khan Memorial Garden Show in Balyatri Estate Boikere off Madikere-Kushalanagara road in Kodagu is a unique flower garden. It is a private garden of FM Khan who sees floriculture boom in Karnataka. If you have see this beauty go at January 30 and 31st
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X