• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಕಲಚೇತನರ ವಿಶೇಷ ರಾಜ್ಯ ಪ್ರಶಸ್ತಿ ಪ್ರಕಟ

By Prasad
|

ಬೆಂಗಳೂರು, ನ. 30 : ವಿಕಲಚೇತನರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಕ್ಕಾಗಿ, ಪ್ರತಿ ವರ್ಷ ಡಿಸೆಂಬರ್ 3ನೇ ತಾರೀಖು 'ವಿಶ್ವ ವಿಕಲಚೇತನರ ದಿನಾಚರಣೆ' ಸಂದರ್ಭದಲ್ಲಿ ನೀಡಲಾಗುವ 2013ರ ರಾಜ್ಯ ಪ್ರಶಸ್ತಿಗಾಗಿ ವೈಯಕ್ತಿಕ ಪ್ರಶಸ್ತಿ, ಸಂಸ್ಥೆ ಹಾಗೂ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.

ಡಿ. 3ರಂದು ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಕನ್ನಡ ಮತ್ತ್ತಸಂಸ್ಕೃತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಉಮಾಶ್ರೀ ಹೇಳಿದ್ದಾರೆ.

ಈ ಪ್ರಶಸ್ತಿಗಾಗಿ ಅರ್ಹರನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿಯನ್ನು ರಚಿಸಲಾಗಿದ್ದು, ಈ ಆಯ್ಕೆ ಸಮಿತಿಯು ಬಂದ ಅರ್ಜಿಗಳನ್ನು ಪರಿಶೀಲಿಸಿ ಒಮ್ಮತದಿಂದ ಆಯ್ಕೆ ಮಾಡಿದೆ. ವಿಕಲಚೇತನರ ವೈಯಕ್ತಿಕ ಪ್ರಶಸ್ತಿಗೆ 64 ಅರ್ಜಿಗಳು ಬಂದಿದ್ದವು, ಅವುಗಳಲ್ಲಿ 8 ಜನರನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿ 10,000 ರು. ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ.

ವೈಯಕ್ತಿಕ ಪ್ರಶಸ್ತಿ

1. ಸಿದ್ಧರಾಜು, ಮಹಾಲಕ್ಷ್ಮಿ ಪುರಂ, ಬೆಂಗಳೂರು
2. ಚಿದಂಬರಂ ವಿಷ್ಣು ಜೋಶಿ, ಹೆಬ್ಬಾಳ, ಬೆಂಗಳೂರು
3. ಶೇಖರ ನಾಯಕ ಎಲ್, ಜೆ.ಪಿ. ನಗರ, ಬೆಂಗಳೂರು
4. ಬಾಲಾಜಿ, ವಿನೋಬಾ ರಸ್ತೆ, ಮೈಸೂರು
5. ಸುರೇಶ ನಾಯಕ ಸಿ, ಪುತ್ತೂರು
6. ಶಬಾನಾ ಬಾನು, ದೇವದುರ್ಗ
7. ಮಲ್ಲಿಕಾರ್ಜುನ ಖೇಡ, ವಿಜಾಪೂರ
8. ಭೀಮಾಶಂಕರ, ಗುಲ್ಬರ್ಗಾ

ವಿಕಲಚೇತನರ ಕ್ಷೇತ್ರದಲ್ಲಿ ಸಲ್ಲಿಸಿರುವ ಅಸಾಧಾರಣ ಸೇವೆಗಾಗಿ ವಿಶೇಷ ವೈಯಕ್ತಿಕ ಮರಣೋತ್ತರ ಪ್ರಶಸ್ತಿಯನ್ನು ದಿವಂಗತ ಸಿಂಹರಾಜುರವರಿಗೆ ನೀಡಲಾಗಿದೆ. ಇದೂ ಸಹ ಹತ್ತು ಸಾವಿರ ರು. ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ. ವಿಕಲಚೇತನರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳಿಗೆ ನೀಡುವ ಪ್ರಶಸ್ತಿಗಾಗಿ ಈ ವರ್ಷ 5 ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ. ಇದು 25,000 ರು. ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ.

ಸಂಸ್ಥೆಗಳು

1. ಮಾತೃಶ್ರೀ ಮನೋವಿಕಾಸ ಬುದ್ಧಿಮಾಂಧ್ಯ ಮಕ್ಕಳ ಶಾಲೆ, ಕುಮಾರ ಪಾರ್ಕ್ ಬೆಂಗಳೂರು
2. ಆಕಾಶದೀಪ ಅಂಗವಿಕಲ ಸರ್ವ ಅಭಿವೃದ್ಧಿ ಸೇವಾ ಸಂಸೆ, ಸಾ:ಕಲಕಲ್ಲ, ತಾ: ಹುನಗುಂದ, ಜಿ:ಬಾಗಲಕೋಟೆ
3. ವಿದ್ಯಾರಣ್ಯ(ರಿ), ಬೆಂಗಳೂರು
4. ಶ್ರೀ ವಿನಾಯಕ ಎಜ್ಯುಕೇಶನ್ ಸೊಸೈಟಿ, ದಾವಣಗೆರೆ
5. ಆಲಂಭಾ ಚಾರಿಟೇಬಲ್ ಟ್ರಸ್ಟ್, ಬೆಂಗಳೂರು

ಈ ವರ್ಷ ವಿಕಲಚೇತನ ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿರುವ ವಿಶೇಷ ಶಿಕ್ಷಕ ಪ್ರಶಸ್ತಿಯನ್ನು 5 ಮಂದಿಗೆ ನೀಡಲಾಗಿದೆ. ಈ ಪ್ರಶಸ್ತಿ ಸಹ 10,000 ರು. ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ.

ವಿಶೇಷ ಶಿಕ್ಷಕ ಪ್ರಶಸ್ತಿ

1. ಸುಧಾವತಿ ರಾಘವೇಂದ್ರ ಮಿಟ್ಟಿಮನಿ ಸಹಾಯಕ ಶಿಕ್ಷಕಿ, ಮಹೇಶ್ವರಿ ಅಂಧ ಮಕ್ಕಳ ಶಾಲೆ ಬೆಳಗಾವಿ.
2. ಮೀನಾಕ್ಷಮ್ಮ ಪಾಟೀಲ್, ಮುಖ್ಯೋಪಾಧ್ಯಾಯರು, ಅಂಧ ಮತ್ತು ಕಿವುಡ ಮಕ್ಕಳ ಸರ್ಕಾರಿ ಶಾಲೆ, ಗುಲ್ಬರ್ಗಾ.
3. ರೋಹಿಣಿ, ಮುಖ್ಯೋಪಾಧ್ಯಾಯರು, ಕೃಷ್ಣ ಚೈತನ್ಯ ಬುದ್ಧಿಮಾಂದ್ಯರ ಮಕ್ಕಳ ಶಾಲೆ, ಬೆಂಗಳೂರು.
4. ಗಂಗಾಧರ, ಸಹಾಯಕ ಶಿಕ್ಷಕ ಸರ್ಕಾರ ಕಿವುಡು ಮಕ್ಕಳ ಶಾಲೆ, ಮೈಸೂರು.
5. ಫಿಲೋಮಿನಾ ಜೆಸಿಂತಾ ಎಲ್ವೀರ ಡಿಮೆಲ್ಲೋ ವಿಶೇಷ ಶಿಕ್ಷಕರು, ಸೇಂಟ್ ಆಗ್ನೇಸ್ ವಿಶೇಷ ಶಾಲೆ, ಮಂಗಳೂರು.

ದೈಹಿಕ ಅಂಗವಿಕಲ ಮಕ್ಕಳ ಶಾಲಾ ಶಿಕ್ಷಕರು ಹಾಗೂ ವೃತ್ತಿ ತರಬೇತಿ ಸಂಸ್ಥೆಗಳ ಕ್ಷೇತ್ರದಲ್ಲಿ ಯಾರೂ ಅರ್ಜಿ ಸಲ್ಲಿಸದೇ ಇರುವುದರಿಂದ ಸಮಿತಿಯು ಒಮ್ಮತದಿಂದ ಅಂಧ ಮಕ್ಕಳ ಶಾಲೆಯ ಒಬ್ಬರು ವಿಶೇಷ ಶಿಕ್ಷಕರನ್ನು ಹಾಗೂ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಒಬ್ಬರು ಶಿಕ್ಷಕರನ್ನು ಹೆಚ್ಚುವರಿಯಾಗಿ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಯಿತು.

ಈ ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟನೆಯನ್ನು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ನೆರವೇರಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಶಿವಾಜಿನಗರದ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರ್. ರೋಷನ್‌ ಬೇಗ್ ವಹಿಸಲಿದ್ದಾರೆ. 2014ನೇ ಸಾಲಿನ ಬ್ರೈಲ್ ಕ್ಯಾಲೆಂಡರನ್ನು ಸಂಸದ ಪಿ.ಸಿ.ಮೋಹನ್ ಬಿಡುಗಡೆ ಮಾಡಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಶಕುಂತಲಾ ಶೆಟ್ಟಿ ಹಾಗೂ ಅಂಗವಿಕಲ ವ್ಯಕ್ತಿಗಳ ಅಧಿನಿಯಮ ರಾಜ್ಯ ಆಯುಕ್ತರಾದ ಕೆ.ಎಸ್.ರಾಜಣ್ಣ ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆಂದು ಉಮಾಶ್ರೀ ಹೇಳಿದ್ದಾರೆ.

English summary
Karnataka govt has announced awards to those who have contributed immensely to the development of specially abled people. The award ceremony will be conducted on 3rd December, on World Disability Day at Kantheerava Indoor Stadium, Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X