ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಔರಾದ್ಕರ್ ವರದಿ ಜಾರಿ : ಪೊಲೀಸರ ವೇತನ ಎಷ್ಟು ಹೆಚ್ಚಾಗಲಿದೆ?

|
Google Oneindia Kannada News

Recommended Video

ಔರಾದ್ಕರ್ ವರದಿ ಜಾರಿ | ಪೋಲೀಸರ ವೇತನ ಎಷ್ಟು ಹೆಚ್ಚಾಗಲಿದೆ

ಬೆಂಗಳೂರು, ಜುಲೈ 16 : ಕರ್ನಾಟಕ ಸರ್ಕಾರ ಔರಾದ್ಕರ್ ವರದಿ ಜಾರಿಗೆ ಒಪ್ಪಿಗೆ ನೀಡಿದ್ದು, ಪೊಲೀಸರ ಬಹುದಿನದ ಬೇಡಿಕೆಯನ್ನು ಈಡೇರಿಸಿದೆ. ಸರ್ಕಾರವು ವೇತನ ಪರಿಷ್ಕರಣೆಗೆ ಒಪ್ಪಿಗೆ ನೀಡಿದ್ದು, ಆಗಸ್ಟ್ 1ರಿಂದ ಪರಿಷ್ಕೃತ ವೇತನ ಜಾರಿಗೆ ಬರಲಿದೆ.

2016ರಲ್ಲಿ ಕರ್ನಾಟಕ ಸರ್ಕಾರ ವೇತನ ಶ್ರೇಣಿ ಹಾಗೂ ಭತ್ಯಗಳ ಪರಿಷ್ಕರಣೆ ಸಂಬಂಧ ಔರಾದ್ಕರ್ ವೇತನ ಸಮಿತಿಯನ್ನು ರಚನೆ ಮಾಡಿತ್ತು. 25/6/2019ರಂದು ಸರ್ಕಾರಕ್ಕೆ ಶಿಫಾರಸು ಮಾಡಿ ವರದಿಯನ್ನು ಸಲ್ಲಿಸಿತ್ತು. ಈಗ ಸರ್ಕಾರ ವರದಿ ಜಾರಿಗೆ ಒಪ್ಪಿಗೆ ನೀಡಿದೆ.

ಕರ್ನಾಟಕ ಪೊಲೀಸರಿಗೆ ಶುಭ ಸುದ್ದಿ ನೀಡಿದ ಸರ್ಕಾರಕರ್ನಾಟಕ ಪೊಲೀಸರಿಗೆ ಶುಭ ಸುದ್ದಿ ನೀಡಿದ ಸರ್ಕಾರ

ಸುಮಾರು ವರ್ಷಗಳಿಂದ ವಂಚಿತರಾದ ಪೊಲೀಸ್ ಇಲಾಖೆಯ ಸಿಬ್ಬಂದಿಯವರಿಗೆ ಸಮಾನಾಂತರವಾದ ಇತರೆ ಸರ್ಕಾರಿ ಇಲಾಖೆಯ ಸಿಬ್ಬಂದಿಯವರಿಗೆ ಸರಿ ಸಮಾನವಾಗಿ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಶಿಫಾರಸು ಮಾಡಿದ್ದನ್ನು ಈ ಆದೇಶದ ಮೂಲಕ ಸಾಧಿಸಲಾಗಿದೆ.

ವಿಧಾನಸೌಧದಲ್ಲಿ ವ್ಯಕ್ತಿ ಆತ್ಮಹತ್ಯೆ ಯತ್ನ, ಪೊಲೀಸರ ತಲೆದಂಡವಿಧಾನಸೌಧದಲ್ಲಿ ವ್ಯಕ್ತಿ ಆತ್ಮಹತ್ಯೆ ಯತ್ನ, ಪೊಲೀಸರ ತಲೆದಂಡ

ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಈ ಕುರಿತು ಟ್ವೀಟ್ ಮಾಡಿದ್ದು, "ಪೊಲೀಸರ ಕಾರ್ಯಭಾರ, ಜನರ ರಕ್ಷಣೆಯ ಜವಾಬ್ದಾರಿಯನ್ನು ಗುರುತಿಸಿ ಮೂರು ವರ್ಷಗಳ ಬೇಡಿಕೆಯಾದ ಔರಾದ್ಕರ್ ಸಮಿತಿ ವರದಿಯ ಅನ್ವಯ ಪೊಲೀಸ್ ಪೊಲೀಸರ ವೇತನ ಶ್ರೇಣಿ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ. ಸರ್ಕಾರದ ಈ ನಡೆ ಪೊಲೀಸರಲ್ಲಿ ನವ ಚೈತನ್ಯ ತುಂಬಲಿದೆ ಎಂದು ನಂಬಿದ್ದೇನೆ" ಎಂದು ಹೇಳಿದ್ದಾರೆ.

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ : 203 ಹುದ್ದೆಗಳಿಗೆ ಅರ್ಜಿ ಹಾಕಿಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ : 203 ಹುದ್ದೆಗಳಿಗೆ ಅರ್ಜಿ ಹಾಕಿ

ವೇತನ ಎಷ್ಟು ಹೆಚ್ಚಾಗಲಿದೆ?

ವೇತನ ಎಷ್ಟು ಹೆಚ್ಚಾಗಲಿದೆ?

* ಪೊಲೀಸ್ ಕಾನ್ಸ್‌ಟೇಬಲ್ - 23,500 - 47,650
* ಪೊಲೀಸ್ ಹೆಡ್ ಕಾನ್ಸ್‌ಟೇಬಲ್ - 27,650 - 52,650 (ಶಿಫಾರಸು ಮಾಡಿರುವಂತೆ ಶೇ 100ರಷ್ಟು ಅನುಷ್ಠಾನಗೊಳಿಸಲಾಗಿದೆ.

ಯಾರಿಗೆ ಎಷ್ಟು ವೇತನ?

ಯಾರಿಗೆ ಎಷ್ಟು ವೇತನ?

* ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ - 30, 350 - 58,250 (ವೇತನ ಶ್ರೇಣಿಯ 2ಹಂತ ಹೆಚ್ಚಿಸಲು ಶಿಫಾರಸು ಮಾಡಲಾಗಿದ್ದು, 1 ಹಂತ ನೀಡಲಾಗಿದೆ)

* ಪೊಲೀಸ್ ಸಬ್ - ಇನ್ಸ್‌ಪೆಕ್ಟರ್ - 37, 900 - 70, 850 (ಸಿ ವೃಂದದ ಗರಿಷ್ಠ ಹಂತವಾಗಿರುವುದರಿಂದ ಯಾವುದೇ ಬದಲಾವಣೆ ಇರುವುದಿಲ್ಲ)

ವೇತನ ಏರಿಕೆಯ ವಿವರ

ವೇತನ ಏರಿಕೆಯ ವಿವರ

* ಪೊಲೀಸ್ ಇನ್ಸ್‌ಪೆಕ್ಟರ್ 43,100 - 83, 900 (ವೇತನ ಶ್ರೇಣಿಯ 3ನೇ ಹಂತ ಹೆಚ್ಚಿಸಲು ಶಿಫಾರಸು ಮಾಡಲಾಗಿತ್ತು. 2 ಹಂತ ನೀಡಲಾಗಿದೆ)

* ಉಪ ಪೊಲೀಸ್ ಅಧೀಕ್ಷಕರು (ವೇತನ ಶ್ರೇಣಿಯ 1 ಹಂತ ಹೆಚ್ಚಿಸಲು ಶಿಫಾರಸು ಮಾಡಲಾಗಿತ್ತು. ಯಾವುದೇ ಪರಿಷ್ಕರಣೆಯಾಗಿರುವುದಿಲ್ಲ)

ಐಪಿಎಸ್‌ ಅಧಿಕಾರಿ ಹೊರತುಪಡಿಸಿ

ಐಪಿಎಸ್‌ ಅಧಿಕಾರಿ ಹೊರತುಪಡಿಸಿ

* ಸೂಪರಿಟೆಂಡೆಂಟ್ ಆಫ್ ಪೊಲೀಸ್ (ನಾನ್ ಐಪಿಎಸ್) 70,850 -1,07,100 (ವೇತನ ಶ್ರೇಣಿ 2 ಹಂತ ಹೆಚ್ಚಿಸಲು ಶಿಫಾರಸು ಮಾಡಲಾಗಿದ್ದು, 1 ಹಂತ ನೀಡಲಾಗಿದೆ).

English summary
Karnataka government approved to implement Auradkar Committee report. Here are salary increase details of the police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X