ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಹಣದ ಆಮಿಷದ ಆಡಿಯೋ ಸುಳ್ಳೇ ಸುಳ್ಳು: ಕಾಂಗ್ರೆಸ್ಸಿಗೆ ತೀವ್ರ ಮುಜುಗರ

|
Google Oneindia Kannada News

Recommended Video

ಕರ್ನಾಟಕ ಕಾಂಗ್ರೆಸ್ ರಿಲೀಸ್ ಮಾಡಿರುವ ಬಿಜೆಪಿ ಆಡಿಯೋ ಟೇಪ್ ಗಳು ಫೇಕ್? | Oneindia Kannada

ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಕಾಂಗ್ರೆಸ್ ಕಾರ್ಯತಂತ್ರ ಫಲಿಸಿದರೂ, ಬಿಜೆಪಿ ಮುಖಂಡರು ಹಣದ ಆಮಿಷವೊಡ್ಡುತ್ತಿದ್ದಾರೆ ಎನ್ನುವ ಕಾಂಗ್ರೆಸ್ ಮುಖಂಡ ವಿ ಎಸ್ ಉಗ್ರಪ್ಪ ಅವರ ಆರೋಪ ಸುಳ್ಳೆಂದು ಸಾಬೀತಾಗಿದೆ.

ಬಹುಮತ ಸಾಬೀತು ಪಡಿಸುವ ದಿನವಾದ ಶನಿವಾರ (ಮೇ 19) ಬಿಜೆಪಿ ಮುಖಂಡರು ನಮ್ಮ ಶಾಸಕರಿಗೆ ಹಣದ ಆಮಿಷವೊಡ್ಡುತ್ತಿದ್ದಾರೆಂದು, ಆಡಿಯೋ ಬಿಡುಗಡೆ ಮಾಡಿ ಉಗ್ರಪ್ಪ 'ಉಗ್ರ ಪ್ರತಾಪ' ತೋರಿದ್ದರು. ಆದರೆ, ಸುಳ್ಳೆಂದು ಕೆಲವೇ ಗಂಟೆಯಲ್ಲಿ ರುಜುವಾತಾಗಿ, ಕಾಂಗ್ರೆಸ್ ಮುಜುಗರ ಎದುರಿಸಬೇಕಾಗಿ ಬಂದಿದೆ.

ರೆಡ್ಡಿ 'ಕುದುರೆ ವ್ಯಾಪಾರ'ದ ಆಡಿಯೋ ಬಿಡುಗಡೆ ಮಾಡಿದ ಉಗ್ರಪ್ಪರೆಡ್ಡಿ 'ಕುದುರೆ ವ್ಯಾಪಾರ'ದ ಆಡಿಯೋ ಬಿಡುಗಡೆ ಮಾಡಿದ ಉಗ್ರಪ್ಪ

ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ಕಾಂಗ್ರೆಸ್ ಶಾಸಕ ಶಿವರಾಂ ಹೆಬ್ಬಾರ್ ಅವರ ಪತ್ನಿಯನ್ನು ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಮತ್ತು ಪುಟ್ಟಸ್ವಾಮಿ ಸಂಪರ್ಕಿಸಿ ಹದಿನೈದು ಕೋಟಿ ಆಮಿಷವೊಡ್ಡಿದ್ದಾರೆ ಎನ್ನುವ ಧ್ವನಿಸುರುಳಿಯನ್ನು ಬಿಡುಗಡೆಗೊಳಿಸಲಾಗಿತ್ತು.

ಹೆಬ್ಬಾರ್ ಅವರ ಪತ್ನಿ ವನಜಾಕ್ಷಿ ಹೆಬ್ಬಾರ್ ಅವರಿಗೆ, ವಿಜಯೇಂದ್ರ ಫೋನ್ ಮಾಡಿ, ಹದಿನೈದು ಕೋಟಿ ರೂಪಾಯಿ, ಮಂತ್ರಿ ಸ್ಥಾನದ ಆಮಿಷ ಮತ್ತು ಪುತ್ರನ ಮೇಲಿರುವ ಅಕ್ರಮ ಗಣಿಗಾರಿಕೆ ಆರೋಪವನ್ನು ರದ್ದು ಪಡಿಸುವ ಆಮಿಷವೊಡ್ಡಿದ್ದಾರೆಂದು ಉಗ್ರಪ್ಪ ಆರೋಪಿಸಿದ್ದರು.

ಆಪರೇಷನ್ ಕಮಲಕ್ಕೆ ಯಡಿಯೂರಪ್ಪರಿಂದಲೇ ಯತ್ನ!ಆಪರೇಷನ್ ಕಮಲಕ್ಕೆ ಯಡಿಯೂರಪ್ಪರಿಂದಲೇ ಯತ್ನ!

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಹೆಬ್ಬಾರ್, ಸದನದಲ್ಲಿ ನಾನು ಬ್ಯೂಸಿಯಾಗಿದ್ದರಿಂದ ಈ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಾಗಿರಲಿಲ್ಲ. ಉಗ್ರಪ್ಪನವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು, ಇದಕ್ಕೆ ನನ್ನ ಧಿಕ್ಕಾರವಿದೆ ಎಂದು ಕಿಡಿಕಾರಿದ್ದಾರೆ. ಈ ಬಗ್ಗೆ ಶಿವರಾಂ ಹೆಬ್ಬಾರ್, ಫೇಸ್ ಬುಕ್ ನಲ್ಲಿ ನೋವು ತೋಡಿಕೊಂಡಿದ್ದು, ಅದನ್ನು ಇಲ್ಲಿ ಯಥವತ್ತಾಗಿ ಪ್ರಕಟಿಸುತ್ತಿದ್ದೇವೆ...

ನನ್ನ ಹೆಂಡತಿಯ ಧ್ವನಿಯೂ ಅಲ್ಲ, ಹೆಂಡತಿಗೆ ಯಾರ ಪೋನ್ ಕರೆ ಬಂದೂ ಇಲ್ಲ

ನನ್ನ ಹೆಂಡತಿಯ ಧ್ವನಿಯೂ ಅಲ್ಲ, ಹೆಂಡತಿಗೆ ಯಾರ ಪೋನ್ ಕರೆ ಬಂದೂ ಇಲ್ಲ

ಮಾನ್ಯರೇ, ಇವತ್ತು ನ್ಯೂಸ್ ಚಾನಲ್ ಗಳಲ್ಲಿ ನನ್ನ ಪತ್ನಿಯೊಂದಿಗೆ ಬಿಜೆಪಿಯವರು ನಡೆಸಿದ್ದಾರೆ ಎನ್ನುವ ಟೇಪ್ ಬಿಡುಗಡೆ ವಿಷಯ, ಸದನದಲ್ಲಿದ್ದ ನನಗೆ ತಡವಾಗಿ ಮಾಹಿತಿ ಬಂತು. ಇದು ನನ್ನ ಹೆಂಡತಿಯ ಧ್ವನಿಯೂ ಅಲ್ಲ ಮತ್ತು ನನ್ನ ಹೆಂಡತಿಗೆ ಯಾರ ಪೋನ್ ಕರೆ ಬಂದೂ ಇಲ್ಲ. ರಾಜಕೀಯ ಕಾರಣಕ್ಕಾಗಿ ಈ ರೀತಿ ಸುಳ್ಳು ಟೇಪ್ ಗಳನ್ನು ಯಾರೇ ಬಿಡುಗಡೆ ಮಾಡಿದರೂ ಅದಕ್ಕೆ ನನ್ನ ದಿಕ್ಕಾರ.

ಫೇಸ್ ಬುಕ್ ನಲ್ಲಿ ಶಾಸಕ ಹೆಬ್ಬಾರ್ ಬರೆದುಕೊಂಡಿದ್ದು

ಫೇಸ್ ಬುಕ್ ನಲ್ಲಿ ಶಾಸಕ ಹೆಬ್ಬಾರ್ ಬರೆದುಕೊಂಡಿದ್ದು

ಈ ಆಡಿಯೋ ಟೇಪ್ ಫೇಕ್.... ಇದನ್ನು ಖಂಡಿಸುತ್ತೇನೆ. ನನ್ನ ಕ್ಷೇತ್ರದ ಜನರು ಮತ್ತೊಮ್ಮೆ ಸೇವೆ ಮಾಡಲು ನನಗೆ ಅವಕಾಶ ಕೊಟ್ಟಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು. ನನ್ನ ಜನಪರ ಕೆಲಸಗಳು ಮುಂದುವರಿಯಲಿದೆ". ಇದು ಶಿವರಾಂ ಹೆಬ್ಬಾರ್ ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವುದು. ಹೆಬ್ಬಾರ್ ಅವರ ಸ್ಟೇಟಸ್ ಪರ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.

ಶಿವರಾಂ ಹೆಬ್ಬಾರ್ ಅವರ ಆಡಿಯೋ ಟೇಪ್ ಕೂಡಾ ಒಂದು

ಶಿವರಾಂ ಹೆಬ್ಬಾರ್ ಅವರ ಆಡಿಯೋ ಟೇಪ್ ಕೂಡಾ ಒಂದು

ಬಹುಮತ ಸಾಬೀತು ಪಡಿಸುವ ದಿನ ಸಾಲು ಸಾಲು ಆಡಿಯೋ ಟೇಪ್ ಗಳು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದವು. ಅದರಲ್ಲಿ ಶಿವರಾಂ ಹೆಬ್ಬಾರ್ ಅವರ ಆಡಿಯೋ ಟೇಪ್ ಕೂಡಾ ಒಂದು. ಇದಕ್ಕೂ ಮೊದಲು ಕೌರವ ಬಿ ಸಿ ಪಾಟೀಲ್ ಅವರು ಮುರಳೀಧರ್ ರಾವ್, ಶ್ರೀರಾಮುಲು ಜೊತೆ ಮಾತುಕತೆ ನಡೆಸುವ ಆಡಿಯೋದ ತುಣುಕುಗಳೂ ಪ್ರಸಾರವಾಗಿತ್ತು.

ಬಿ ಸಿ ಪಾಟೀಲ್ ಮತ್ತು ಯಡಿಯೂರಪ್ಪ ಸಂಭಾಷಣೆ

ಬಿ ಸಿ ಪಾಟೀಲ್ ಮತ್ತು ಯಡಿಯೂರಪ್ಪ ಸಂಭಾಷಣೆ

ಬಿ ಸಿ ಪಾಟೀಲ್ ಮತ್ತು ಯಡಿಯೂರಪ್ಪನವರು ಸಂಭಾಷಣೆ ನಡೆಸುವ, ಹಣ ಮತ್ತು ಸಚಿವ ಸ್ಥಾನಮಾನದ ಆಮಿಷವೊಡ್ಡುವ ಆಡಿಯೋ ಕೂಡಾ ಒಂದರಮೇಲೊಂದು ಬಿತ್ತರವಾಗುತ್ತಲೇ ಇದ್ದವು. ಇದಕ್ಕೆ ಬಿಜೆಪಿ, ಸ್ಪಷ್ಟನೆ ನೀಡುತ್ತಲೇ ಇತ್ತು. ಆಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಾ ಸಾಗಿತ್ತು. ಒಂದು ಹಂತದಲ್ಲಿ ಇದು ಬಿಜೆಪಿ ಇಮೇಜಿಗೆ ಧಕ್ಕೆ ತರುವ ರೀತಿಯಲ್ಲಿ ಸಾಗುತ್ತಿತ್ತು.

ಕಾಂಗ್ರೆಸ್ ಕಚೇರಿಯಲ್ಲಿ ಮಿಮಿಕ್ರಿ ಕಲಾವಿದರಿಗೆ ಬೇಡಿಕೆ

ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ ಮಾಜಿ ಸಿಎಂ ಮತ್ತು ಕೇಂದ್ರ ಸಚಿವ ಸದಾನಂದ ಗೌಡ, ಪಕ್ಷಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಕಾಂಗ್ರೆಸ್ ಇವುಗಳನ್ನು ಸೃಷ್ಟಿಸುತ್ತಿದೆ. ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಿಮಿಕ್ರಿ ಕಲಾವಿದರಿಗೆ ಬೇಡಿಕೆ ಇದೆ ಎಂದು ವ್ಯಂಗ್ಯವಾಡಿದ್ದರು. ಕಾಂಗ್ರೆಸ್‌ನ ಡರ್ಟಿ ಟ್ರಿಕ್ ವಿಭಾಗಕ್ಕೆ ಹೊಸ ಬಾಸ್ ಸಿಕ್ಕಿದ್ದಾರೆ. ಅವರೆಲ್ಲರಿಗೂ ಸೋಲು ಅನುಭವಿಸುವುದು ತಿಳಿದಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಲು ಮಿಮಿಕ್ರಿ ಆಡಿಯೊಗಳನ್ನು ತಯಾರಿಸಲಾಗಿದೆ ಎಂದು ಸದಾನಂದಗೌಡ ತಿರುಗೇಟು ನೀಡಿದ್ದರು.

English summary
Senior Congress leader V S Ugrappa alleges and released the audio tape where Yeddyurappa son offering money and cabinet birth to Yellapur Congress MLA Shivaram Hebbar. MLA Hebbar clarifies, this audio tape is fake, baseless and no truth in this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X