ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿ ಅಪರಾಧ ಮಾಡಿದ್ದಾರೆ, ಬಿಎಸ್‌ವೈ ಕೊಟ್ಟ 4 ಕಾರಣ

|
Google Oneindia Kannada News

Recommended Video

ಕುಮಾರಸ್ವಾಮಿ ಅಪರಾಧ ಮಾಡಿದ್ದಾರೆ, ಬಿಎಸ್‌ವೈ ಕೊಟ್ಟ 4 ಕಾರಣ..! | Oneindia Kannada

ಬೆಂಗಳೂರು, ಫೆಬ್ರವರಿ 12 : 'ಆಡಿಯೋ ಬಿಡುಗಡೆ ಮಾಡುವ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದಂಡನಾರ್ಹ ಅಪರಾಧ ಎಸಗಿದ್ದಾರೆ' ಎಂದು ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಆರೋಪಿಸಿದರು.

ವಿಧಾನಸಭೆಯಲ್ಲಿ ಮಂಗಳವಾರವೂ ಆಪರೇಷನ್ ಕಮಲದ ಆಡಿಯೋ ಬಗ್ಗೆ ಸುಧೀರ್ಘ ಚರ್ಚೆ ನಡೆಯಿತು. ಬಿ.ಎಸ್.ಯಡಿಯೂರಪ್ಪ ಅವರು ಕಲಾಪದಲ್ಲಿ ಮಾತನಾಡಿದರು. ಆಡಿಯೋ ಬಗ್ಗೆ ಎಸ್‌ಐಟಿ ತನಿಖೆ ಬೇಡ ಎಂದು ಪುನರುಚ್ಚರಿಸಿದರು.

ಆಪರೇಷನ್ ಆಡಿಯೋ : ಸದನದಲ್ಲಿ ಕುಮಾರಸ್ವಾಮಿ ಹೇಳಿದ್ದೇನು?ಆಪರೇಷನ್ ಆಡಿಯೋ : ಸದನದಲ್ಲಿ ಕುಮಾರಸ್ವಾಮಿ ಹೇಳಿದ್ದೇನು?

'ಸಿಎಂ ಆಡಿಯೋ ಬಿಡುಗಡೆ ಮಾಡಿರುವುದು ದಂಡನಾರ್ಹ ಅಪರಾಧ. ಮುಖ್ಯಮಂತ್ರಿಗಳು ಕುರ್ಚಿ ಉಳಿಸಿಕೊಳ್ಳಲು ಆಡಿಯೋ ದುರುಪಯೋಗ ಮಾಡಿಕೊಂಡರು. ರಾಜಕೀಯ ನಿವೃತ್ತಿಗೆ ಸಿದ್ಧ ಎಂದು ಹೇಳಿದ್ದೆ. ಆ ಮಾತಿಗೂ ನಾನು ಈಗಲೂ ಬದ್ಧ' ಎಂದು ಯಡಿಯೂರಪ್ಪ ಹೇಳಿದರು.

ಆಡಿಯೋ ಟೇಪ್ : ಆಪರೇಷನ್ ಕಮಲಕ್ಕೆ ಬಿತ್ತು ತಾತ್ಕಾಲಿಕ ತಡೆ!ಆಡಿಯೋ ಟೇಪ್ : ಆಪರೇಷನ್ ಕಮಲಕ್ಕೆ ಬಿತ್ತು ತಾತ್ಕಾಲಿಕ ತಡೆ!

'ಯಾವ ನೈತಿಕತೆ ಇದೆ ನಿಮಗೆ. ಎಂಎಲ್‌ಗೆ 25 ಕೋಟಿ, ರಾಜ್ಯಸಭಾ ಸದಸ್ಯ ಸ್ಥಾನಕ್ಕೆ 50 ಕೋಟಿ ಕೇಳಿದ್ದೀರಿ. ಇದು ಶೋಭೆ ತರುತ್ತದೆಯೇ?' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರು.....

ತಪ್ಪಾಗಿದೆ ಒಪ್ಪಿಕೊಂಡಿದ್ದೇವೆ; ಪ್ರಕರಣ ಕೈಬಿಡಿ: ಶರಣಾದ ಬಿಜೆಪಿತಪ್ಪಾಗಿದೆ ಒಪ್ಪಿಕೊಂಡಿದ್ದೇವೆ; ಪ್ರಕರಣ ಕೈಬಿಡಿ: ಶರಣಾದ ಬಿಜೆಪಿ

ತಪ್ಪು - 1

ತಪ್ಪು - 1

ಕಲಾಪದಲ್ಲಿ ಮಾತನಾಡಿದ ಯಡಿಯೂರಪ್ಪ ಅವರು 'ಸಿಎಂ ಆಡಿಯೋ ಬಿಡುಗಡೆ ಮಾಡಿರುವುದು ದಂಡನಾರ್ಹ ಅಪರಾಧ. ನಕಲಿ ಆಡಿಯೋ ಬಿಡುಗಡೆ ಮಾಡಿದ್ದು ತಪ್ಪು' ಎಂದು ಹೇಳಿದರು.

ತಪ್ಪು - 2

ತಪ್ಪು - 2

'ರಾಜಕೀಯ ನಿವೃತ್ತಿಗೂ ಸಿದ್ಧ ಎಂದು ಹೇಳಿದ್ದೆ. ಆ ಮಾತಿಗೆ ನಾನು ಈಗಲೂ ಬದ್ಧ. ಆಡಿಯೋ ಬಿಡುಗಡೆ ಮಾಡಿದ್ದು, ಸುಳ್ಳು ಹೇಳಿದ್ದು ತಪ್ಪು' ಎಂದು ಯಡಿಯೂರಪ್ಪ ಹೇಳಿದರು.

ತಪ್ಪು - 3

ತಪ್ಪು - 3

30 ರಿಂದ 32 ನಿಮಿಷ ಆಡಿಯೋವನ್ನು 2 ನಿಮಿಷಕ್ಕೆ ಕಟ್ ಪೇಸ್ಟ್ ಮಾಡಿ ಷಡ್ಯಂತ್ರ ಮಾಡಿ ಮಾಧ್ಯಮಗಳಲ್ಲಿ ಬಿತ್ತರಿಸಲು ನೀಡಿದ್ದಾರೆ. ಮೋಸ ಮಾಡುವ ಉದ್ದೇಶದಿಂದ ಆಡಿಯೋ ಬಿಡುಗಡೆ ಮಾಡಿದ್ದು ತಪ್ಪು' ಎಂದರು.

ತಪ್ಪು - 4

ತಪ್ಪು - 4

'ಕುಮಾರಸ್ವಾಮಿ ಅವರನ್ನು ಸಿಎಂ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ರಾಜ್ಯಕ್ಕೆ ಗೊತ್ತು. ಅವರು ಮುಂಬೈಗೆ ಹೋಗಿದ್ದಾರೆ. ಅದಕ್ಕೆ ಯಡಿಯೂರಪ್ಪ ಕಾರಣ ಅಲ್ಲ. ನಕಲಿ ಎಂದು ಗೊತ್ತಿದ್ದು ಆಡಿಯೋ ಬಿಡುಗಡೆ ಮಾಡಿದ್ದು ತಪ್ಪು' ಎಂದು ಯಡಿಯೂರಪ್ಪ ಹೇಳಿದರು.

English summary
Karnataka opposition leader B.S.Yeddyurappa speech in assembly session on audio tape row on operation kamala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X