ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೃಂಗೇರಿಯಲ್ಲಿ ಅತಿರುದ್ರಯಾಗ ನಿಲ್ಲಿಸಲ್ಲ :ದೇವೇಗೌಡರ ಕುಟುಂಬ

By Mahesh
|
Google Oneindia Kannada News

Recommended Video

ಶೃಂಗೇರಿಯಲ್ಲಿ ಎಚ್ ಡಿ ದೇವೇಗೌಡ ಕುಟುಂಬ | Oneindia Kannada

ಶೃಂಗೇರಿ(ಚಿಕ್ಕಮಗಳೂರು), ಜನವರಿ 04 : ಇಲ್ಲಿನ ಶ್ರೀಶಾರದಾ ಪೀಠದ ಶ್ರೀಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಕುಟುಂಬದವರು ಕೈಗೊಂಡಿರುವ ಅತಿರುದ್ರ ಮಹಾಯಾಗದ ಎರಡನೇ ದಿನಕ್ಕೆ ಅಪಶಕುನ ಎದುರಾಗಿದೆ. ದೇವೇಗೌಡರ ಅತ್ತೆ ಕಾಳಮ್ಮ ಅವರು ವಿಧಿವಶವಾಗಿದ್ದಾರೆ. ಆದರೆ, ಸೂತಕದ ನಡುವೆಯೂ ಯಾಗ ನಡೆಸಲಾಗುವುದು ಎಂದು ಕುಟುಂಬದ ಆಪ್ತರು ಹೇಳಿದ್ದಾರೆ.

ಶೃಂಗೇರಿಯಲ್ಲಿ ದೇವೇಗೌಡರಿಂದ ಅತಿರುದ್ರ ಯಾಗ, ಯಾವ ಕಾರಣಕ್ಕೆ?ಶೃಂಗೇರಿಯಲ್ಲಿ ದೇವೇಗೌಡರಿಂದ ಅತಿರುದ್ರ ಯಾಗ, ಯಾವ ಕಾರಣಕ್ಕೆ?

ಹೊಳೆನರಸೀಪುರ ತಾಲ್ಲೂಕು ಮುತ್ತಿಗೆ ಹಿರಿಯಳ್ಳಿಯಲ್ಲಿ ಗುರುವಾರ ನಡೆದ ಕಾಳಮ್ಮ ಅವರ ಅಂತ್ಯಕ್ರಿಯೆ ದೇವೇಗೌಡ, ಚೆನ್ನಮ್ಮ ದೇವೇಗೌಡ ಅವರುಗಳು ಭಾಗಿಯಾಗಿದ್ದರು. ಸಾವಿನ ನೋವು ಕಳೆದುಕೊಂಡ ಬಳಿಕ ಶುದ್ಧಿ ಮಾಡಿಕೊಂಡು ದೇವೇಗೌಡ ದಂಪತಿ, ಶೃಂಗೇರಿಗೆ ಮತ್ತೆ ಆಗಮಿಸಲಿದ್ದಾರೆ.

ಯಾವ ಹೋಮದಿಂದ ಏನು ಫಲ? ಶಾಸ್ತ್ರೋಕ್ತವಾಗಿ ಮಾಡುವುದು ಹೇಗೆ?ಯಾವ ಹೋಮದಿಂದ ಏನು ಫಲ? ಶಾಸ್ತ್ರೋಕ್ತವಾಗಿ ಮಾಡುವುದು ಹೇಗೆ?

ಜಗದ್ಗುರುಗಳಾದ ಶ್ರೀಭಾರತೀ ತೀರ್ಥ ಸ್ವಾಮೀಜಿ ಮತ್ತು ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ಯಾಗದ ಸಂಕಲ್ಪವನ್ನು ಬುಧವಾರದಂದು ನೆರವೇರಿತು. ದೇವೇಗೌಡ ಹಾಗೂ ಚನ್ನಮ್ಮ ಅವರು ಉಭಯ ಶ್ರೀಗಳಿಗೆ ಫಲತಾಂಬೂಲ ಸಮರ್ಪಿಸಿ ಆಶೀರ್ವಾದ ಪಡೆದ ಬಳಿಕ ಅತಿರುದ್ರ ಮಹಾಯಾಗಕ್ಕೆ ಚಾಲನೆ ನೀಡಲಾಯಿತು. ಸಾವಿನ ಸುದ್ದಿ ಕಿವಿಗೆ ಬೀಳುವುದಕ್ಕೂ ಮುನ್ನ ಈ ಯಾಗದ ಸಂಕಲ್ಪವಾಗಿದ್ದರಿಂದ ಯಾಗ ಮುಂದುವರೆಸಬಹುದು. ಯಾವುದೇ ದೋಷ ತಟ್ಟುವುದಿಲ್ಲ ಎಂದು ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ತೋರಣಗಣಪತಿಗೆ ನಮಿಸಿದ ದೇವೇಗೌಡ ದಂಪತಿ

ತೋರಣಗಣಪತಿಗೆ ನಮಿಸಿದ ದೇವೇಗೌಡ ದಂಪತಿ

ದೇವೇಗೌಡ ದಂಪತಿ ಹಾಗೂ ಶಾಸಕ ಎಚ್.ಡಿ.ರೇವಣ್ಣ ಅವರು ಶ್ರೀಶಾರದಾ ಪೀಠಂನಲ್ಲಿರುವ ತೋರಣಗಣಪತಿ, ಶಾರದಾಂಬ, ಆದಿ ಶಂಕರಾಚಾರ್ಯ ದೇವಾಲಯಗಳಿಗೆ ಭೇಟಿ ನೀಡಿದರು. ನಂತರ ಯಾಗ ಮಂಟಪದಲ್ಲಿ ನಾಡಿನ ಏಳಿಗೆಗಾಗಿ, ಪಕ್ಷ ಹಾಗೂ ಕುಟುಂಬದ ಹಿತಕ್ಕಾಗಿ ಸಂಕಲ್ಪ ಕೈಗೊಂಡರು. ಇಲ್ಲಿರುವ ಸಾಂದರ್ಭಿಕ ಚಿತ್ರ.

ವಿಧಾನಪರಿಷತ್ ಸದಸ್ಯ ಟಿ.ಶರವಣ

ವಿಧಾನಪರಿಷತ್ ಸದಸ್ಯ ಟಿ.ಶರವಣ

ಧನುರ್ಮಾಸ ಅತ್ಯಂತ ಶ್ರೇಷ್ಠವಾದದ್ದು. ದೇವೇಗೌಡ, ಕುಮಾರಸ್ವಾಮಿ ಅವರ ಆರೋಗ್ಯ ಸುಧಾರಣೆ ಹಾಗೂ ಅವರ ರಾಜಕೀಯ ಶ್ರೇಯಸ್ಸಿಗಾಗಿ ಯಾಗ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಜನರ ಹಿತವನ್ನೂ ಬಯಸಲಾಗಿದೆ. 2018ರ ಚುನಾವಣೆಯಲ್ಲಿ ಹೋರಾಡಲು ತಾಯಿ ಜಗನ್ಮಾತೆ ಹಾಗೂ ಜಗದ್ಗುರುಗಳ ಆಶೀರ್ವಾದ ಬೇಕಿದೆ ಎಂದರು.

ಟಿ.ಎ.ಶರವಣ ಸಂದರ್ಶನ : ಎಚ್ಡಿಕೆ ಸಿಎಂ ಆಗುವುದನ್ನು ಯಾರೂ ತಪ್ಪಿಸಲಾರರುಟಿ.ಎ.ಶರವಣ ಸಂದರ್ಶನ : ಎಚ್ಡಿಕೆ ಸಿಎಂ ಆಗುವುದನ್ನು ಯಾರೂ ತಪ್ಪಿಸಲಾರರು

ಸಂಕ್ರಾತಿಯಂದು ಪೂರ್ಣಾಹುತಿ

ಸಂಕ್ರಾತಿಯಂದು ಪೂರ್ಣಾಹುತಿ

ಜನವರಿ14ರ ಮಕರ ಸಂಕ್ರಾತಿಯ ಶುಭ ದಿನದಂದು ಈ ಯಾಗದ ಪೂರ್ಣಾಹುತಿ ನೆರವೇರಲಿದ್ದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸಲಿದ್ದಾರೆ. ಅಲ್ಲಿ ತನಕ 121 ಋತ್ವಿಜರು 11 ದಿನಗಳ ಕಾಲ 11 ಬಾರಿ ಶ್ರೀರುದ್ರ ಮಂತ್ರ ಪಠಿಸಲಿದ್ದಾರೆ. ಒಟ್ಟಾರೆ, 14,641 ಬಾರಿ ಶ್ರೀ ರುದ್ರ ಮಂತ್ರ ಪಠಿಸಲಾಗುತ್ತದೆ.

250 ಋತ್ವಿಜರ ನೇತೃತ್ವದಲ್ಲಿ ಈ ಯಾಗ

250 ಋತ್ವಿಜರ ನೇತೃತ್ವದಲ್ಲಿ ಈ ಯಾಗ

ಪ್ರತಿದಿನ ಬೆಳಗ್ಗೆ 7ರಿಂದ 9 ಗಂಟೆ ತನಕ ಮಠೆದ ಆವರಣದಲ್ಲಿರುವ ಯಾಗ ಮಂಟಪದಲ್ಲಿ ಗಣಪತಿ ಹೋಮದಿಂದ ಅತಿ ರುದ್ರ ಮಹಾಯಾಗ ಆರಂಭಗೊಂಡಿದೆ. ಪುನಃ ಸಂಜೆ 6ರಿಂದ 8ಗಂಟೆಯ ತನಕ ಮಠದ ಪರಂಪರೆಯಂತೆ ಹೋಮ ನಡೆಲಿದೆ. ಸುಮಾರು 250 ಋತ್ವಿಜರ ನೇತೃತ್ವದಲ್ಲಿ ಈ ಯಾಗ ನಡೆಯುತ್ತಿದೆ. ಚಿತ್ರದಲ್ಲಿ :ಶ್ರೀವಿಧುಶೇಖರ ಭಾರತೀ ಸ್ವಾಮೀಜಿ.

English summary
Ati Rudra Maha Yagam can not be interrupted and it will continue till Makara Sankranti day said HD Deve Gowda's family sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X