ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೋಗಲಕ್ಷಣವಿಲ್ಲದ ಸೋಂಕಿತರ ಡಿಸ್‌ಚಾರ್ಜ್‌: ಸರ್ಕಾರದ ಹೊಸ ಆದೇಶ

|
Google Oneindia Kannada News

ಬೆಂಗಳೂರು, ಜೂ. 24: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈಗಲೇ ಆಸ್ಪತ್ರೆಗಳು ತುಂಬುತ್ತಿವೆ. ಹೀಗಾಗಿ ಸೋಂಕು ದೃಢಪಟ್ಟಿದ್ದರೂ ಯಾವುದೇ ರೋಗಲಕ್ಷಣಗಳಿಲ್ಲದ ಸೋಂಕಿತರ ಬಿಡುಗಡೆಗೆ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ.

Recommended Video

World No.1 Tennis player Novak DJokovic Tests Positive for Coronavirus | Oneindia Kannada

ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಸೋಂಕಿತರಿಗೆ ಚಕಿತ್ಸೆ ಕೊಡುವುದು ಸರ್ಕಾರಿ ಆಸ್ಪತ್ರೆಗಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಚಿಕಿತ್ಸೆ ಬಳಿಕ ಬಿಡುಗಡೆಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಈ ಹಿಂದೆ ಕೊರೊನಾ ವೈರಸ್ ಸೋಂಕು ದೃಢಪಟ್ಟ ಬಳಿಕ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಮಾಡುವ ಮೊದಲು ಎರಡು ಬಾರಿ ಸೋಂಕು ನೆಗಟಿವ್ ಬರಬೇಕಿತ್ತು. ಆದರೆ ಇದೀಗ ಮಾರ್ಗಸೂಚಿ ಬದಲಿಸಿರುವ ಸರ್ಕಾರ ಸತತ 10 ದಿನಗಳ ಕಾಲ ಯಾವುದೇ ರೋಗಲಕ್ಷಣಗಳನ್ನು (asymptomatic) ತೋರಿಸದ ರೋಗಿಗಳನ್ನು ಮತ್ತೆ ಸ್ವಾಬ್ ಪರೀಕ್ಷೆ ಮಾಡದೇ ಬಿಡುಗಡೆ ಮಾಡಬಹುದು ಎಂದು ಸೂಚಿಸಲಾಗಿದೆ.

 Asymptomatic COVID-19 patients in Karnataka to be discharged without confirmatory test

ಬೆಂಗಳೂರಿನಲ್ಲಿ ಸರ್ಕಾರ ಗುರುತಿಸಿರುವ 66 ಫೀವರ್ ಕ್ಲಿನಿಕ್ ಪಟ್ಟಿ ಬೆಂಗಳೂರಿನಲ್ಲಿ ಸರ್ಕಾರ ಗುರುತಿಸಿರುವ 66 ಫೀವರ್ ಕ್ಲಿನಿಕ್ ಪಟ್ಟಿ

ಜೊತೆಗೆ ರೋಗ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾದವರು ಸತತ 13 ದಿನಗಳ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡ ಬಳಿಕ ಪರೀಕ್ಷಾ ವರದಿಗೆ ಕಾಯದೆ ಬಿಡುಗಡೆ ಮಾಡಬಹುದು. ಆದರೆ 14 ದಿನಗಳ ಬಳಿಕವೂ ಕೊರೊನಾ ವೈರಸ್‌ ಲಕ್ಷಣಗಳನ್ನು ತೋರಿಸುವ ರೋಗಿಗಳನ್ನು ಸಂಪೂರ್ಣ ಗುಣಮುಖರಾದ ಬಳಿಕವೇ ಬಿಡುಗಡೆ ಮಾಡಬೇಕೆಂದು ಸೂಚಿಸಲಾಗಿದೆ.

English summary
The number of coronavirus cases increasing day by day in the state. Hospitals are filling up right now. Thus, the state government has issued a new directive for the discharge of the infected persons without any symptoms despite confirmation of the infection
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X