ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ವರ್ಷವೇ ಆನ್‌ಲೈನ್‌ನಲ್ಲಿ ಅಸೋಸಿಯೇಟ್ ಡಿಗ್ರಿ ಕೊರ್ಸ್‌ ಆರಂಭ

|
Google Oneindia Kannada News

ಬೆಂಗಳೂರು ಆಗಸ್ಟ್ 17: ಪ್ರತಿಷ್ಠಿತ ಶ್ರೀ ಜಯಚಾಮರಾಜೇಂದ್ರ ಸರ್ಕಾರಿ ಪಾಲಿಟೆಕ್ನಿಕ್ (ಎಸ್‌ಜೆಪಿ) ಮತ್ತು ಅಮೆರಿಕದ ಅಥೆನ್ಸ್ ಸ್ಟೇಟ್ ಯೂನಿವರ್ಸಿಟಿ ಮಧ್ಯೆ ಒಡಂಬಡಿಕೆ ಆಧಾರದಲ್ಲಿ 'ಅಸೋಸಿಯೇಟ್ ಡಿಗ್ರಿ ಕೋರ್ಸ್' ಆರಂಭಿಸುವ ಕುರಿತು ಬುಧವಾರ ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವಥ್ ನಾರಾಯಣ್ ಪೂರ್ವಭಾವಿ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಶ್ವಥ್ ನಾರಾಯಣ್, ಮಾಡಿಕೊಂಡ ಒಪ್ಪಂದಂತೆ ಸೈಬರ್ ಸೆಕ್ಯೂರಿಟಿ, ಇಂಗ್ಲಿಷ್ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ಕೋರ್ಸುಗಳ ಅಡಿ ಅಸೋಸಿಯೇಟ್ ಡಿಗ್ರಿ ಕೋರ್ಸುಗಳಲ್ಲಿ ಸಂಯೋಜಿತ ಅಸೋಸಿಯೇಟ್ ಡಿಗ್ರಿ ಆರಂಭಿಸುವ ಚಿಂತನೆ ಇದೆ. ಅಥೆನ್ಸ್ ವಿವಿ ಜತೆಗೆ ಡಲ್ಲಾಸ್ ಕಮ್ಯುನಿಟಿ ಕಾಲೇಜಿನ ಜತೆಗೂ ಒಡಂಬಡಿಕೆ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆದಿವೆ ಎಂದು ಅವರು ಹೇಳಿದರು.

ಬೆಂಗಳೂರು ಸಹಿತ ಬೆಸ್ಕಾಂ ವ್ಯಾಪ್ತಿಯಲ್ಲಿ ಎರಡು ದಿನ ವಿದ್ಯುತ್‌ ಕಡಿತ: ಎಲ್ಲೆಲ್ಲಿ ವ್ಯತ್ಯಯ? ಬೆಂಗಳೂರು ಸಹಿತ ಬೆಸ್ಕಾಂ ವ್ಯಾಪ್ತಿಯಲ್ಲಿ ಎರಡು ದಿನ ವಿದ್ಯುತ್‌ ಕಡಿತ: ಎಲ್ಲೆಲ್ಲಿ ವ್ಯತ್ಯಯ?

ಎಲ್ಲವು ಅಂದುಕೊಂಡಂತೆ ಆದರೆ ಡಲ್ಲಾಸ್ ಕಮ್ಯುನಿಟಿ ಕಾಲೇಜಿನ ವಿದ್ಯಾರ್ಥಿಗಳು ನಮ್ಮಲ್ಲಿಗೆ ಬಂದು ಅಧ್ಯಯನ ಮಾಡಲು ಅವಕಾಶ ನೀಡಲಾಗುವುದು. ಅಥೆನ್ಸ್ ವಿವಿ ಈಗಾಗಲೇ ಕುವೆಂಪು ವಿವಿ ಮತ್ತು ಶ್ರೀ ಕೃಷ್ಣದೇವರಾಯ ವಿವಿ ಜತೆ ಒಪ್ಪಂದ ಮಾಡಿಕೊಂಡಿರುವುದಾಗಿ ಅವರು ತಿಳಿಸಿದರು.

Associate degree course started online this year

ಆನ್‌ಲೈನ್‌ ಮೂಲಕ ಕೋರ್ಸ್ ಆರಂಭ

ಸೈಬರ್ ಸೆಕ್ಯೂರಿಟಿ ಪ್ರೋಗ್ರಾಮ್ ಕಾರ್ಯಕ್ರಮದಡಿಯಲ್ಲಿ ಎಸ್‌ಜೆಪಿ 24 ವಿದ್ಯಾರ್ಥಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಈ ವರ್ಷ ಆನ್‌ಲೈನ್‌ ಮೂಲಕ ಅಮೆರಿಕದ 8 ಕೋರ್ಸ್ ಆರಂಭಿಸಲಾಗುತ್ತಿದೆ. 2023-24ರ ಶೈಕ್ಷಣಿಕ ವರ್ಷದಲ್ಲಿ ಈ ವಿದ್ಯಾರ್ಥಿಗಳು ಅಥೆನ್ಸ್ ವಿಶ್ವವಿದ್ಯಾಲಯಕ್ಕೆ ತೆರಳಿ ವ್ಯಾಸಂಗ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಥೆನ್ಸ್ ವಿಶ್ವವಿದ್ಯಾಲಯವು ರಾಜ್ಯದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಗುಣಮಟ್ಟದ ಇಂಗ್ಲೀಷ್ ಕಲಿಸಲು ಉತ್ಸುಕವಾಗಿದೆ. ಅದಕ್ಕಾಗಿ ತರಬೇತಿ ಕೇಂದ್ರವೊಂದನ್ನು ಸ್ಥಾಪನೆ ಮಾಡಲು ಅಥೆನ್ಸ ವಿಶ್ವವಿದ್ಯಾಲಯ ಆಸಕ್ತಿ ತೋರಿದೆ. ಕೌಶಲ್ಯ ಅಭಿವೃದ್ಧಿ ವಿಷಯದಲ್ಲಿ ಅಮೆರಿಕದ ಈ ಸಂಸ್ಥೆ

ಕೋರ್ಸ್, ಒಪ್ಪಂದ ಬಗ್ಗೆ ವಿಚಾರ ವಿನಿಮಯ

ಮಂಗಳವಾರ ಕರ್ನಾಟಕಕ್ಕೆ ಆಗಮಿಸಿರುವ ಅಮೆರಿಕದ ಅಧಿಕಾರಿಗಳ ನಿಯೋಗವು ಹತ್ತು ದಿನ ರಾಜ್ಯದಲ್ಲಿ ಇರಲಿದೆ. ಗುರುವಾರ ಶ್ರೀ ಜಯಚಾಮರಾಜೇಂದ್ರ ಸರ್ಕಾರಿ ಪಾಲಿಟೆಕ್ನಿಕ್ (ಎಸ್‌ಜೆಪಿ)ಗೆ ಭೇಟಿ ನೀಡಿ ಒಪ್ಪಂದ, ಕೋರ್ಸ್ ಇನ್ನಿತರ ಅಂಶಗಳ ಜತೆಗೆ ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ. ನಂತರ ಆಗಸ್ಟ್ 22ರಂದು ಕೃಷ್ಣದೇವರಾಯ ವಿಶ್ವವಿದ್ಯಾಲಯ ಕುಲಪತಿ ಜೊತೆ ಚರ್ಚೆ, ಆ.23ರಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ. ತಿಮ್ಮೇಗೌಡ ಅವರೊಂದಿಗೆ ಚರ್ಚೆಗಳು ನಡೆಯಲಿವೆ ಎಂದು ಅಶ್ವಥ್ ನಾರಾಯಣ್ ವಿವರಿಸಿದರು.

Associate degree course started online this year

ಅಮೆರಿಕದ ನಿಯೋಗವು ಆ.21ರ ಭಾನುವಾರ ವಿಶ್ವವಿಖ್ಯಾತ ಹಂಪಿ ಪ್ರವಾಸಿ ತಾಣಕ್ಕೆ ತೆರಳಿ ಅಲ್ಲಿನ ಐತಿಹಾಸಿಕ ಸ್ಥಳ ವೀಕ್ಷಿಸಲಿದೆ. ಸಭೆಯಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್, ನಿರ್ದೇಶಕ ಅಪ್ಪಾಜಿ ಗೌಡ, ಹೆಚ್ಚುವರಿ ನಿರ್ದೇಶಕ ಅಶೋಕ್ ಬಿ. ರೇವಣಕರ್, ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರು, ಜಂಟಿ ನಿರ್ದೇಶಕರು, ಸಲಹೆಗಾರರು ಹಾಗೂ ಅಥೆನ್ಸ್‌ ಸ್ಟೇಟ್ ಯೂನಿವರ್ಸಿಟಿ ಮುಖ್ಯಸ್ಥ ಫಿಲಿಫ್ ಕೆ.ವೇ. ಉಪಸ್ಥಿತರಿದ್ದರು.

English summary
Associate degree course started online this year. start Associate Degree Course before Prelims Meeting
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X