ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮೀರ್, ರೇಣುಕಾ, ಇಬ್ರಾಹಿಂ, ಎಚ್ ಡಿ ರೇವಣ್ಣಗೆ ಲೋಕಾಯುಕ್ತ ನೋಟಿಸ್

|
Google Oneindia Kannada News

ಬೆಂಗಳೂರು, ಸೆ. 01: ಲೋಕಾಯುಕ್ತ ಸಂಸ್ಥೆ 2018-19ನೇ ಸಾಲಿನಲ್ಲಿ ಆಸ್ತಿ ವಿವರ ಸಲ್ಲಿಸದ ಜನಪ್ರನಿಧಿಗಳ ಹೆಸರುಗಳನ್ನು ಕರ್ನಾಟಕ ಲೋಕಾಯುಕ್ತ ಪಿ ವಿಶ್ವನಾಥ ಶೆಟ್ಟಿ ಅವರು ಪ್ರಕಟಿಸಿದ್ದಾರೆ.
ಆಸ್ತಿ ವಿವರ ಸಲ್ಲಿಸದ ಶಾಸಕರ ಹೆಸರುಗಳನ್ನು ಲೋಕಾಯುಕ್ತ ಸಂಸ್ಥೆ ಪಟ್ಟಿ ಮಾಡಿದೆ. 43 ಶಾಸಕರು ಹಾಗೂ 21 ಎಂಎಲ್ಸಿಗಳು ತಮ್ಮ ಆಸ್ತಿ ವಿವರಗಳನ್ನು ಘೋಷಿಸಿಲ್ಲ ಎಂದು ಲೋಕಾಯುಕ್ತ ಸಂಸ್ಥೆ ಪ್ರಕಟಣೆ ತಿಳಿಸಿದೆ.

ಜನಪ್ರತಿನಿಧಿಗಳು ತಮ್ಮ ಆಸ್ತಿ ವಿವರಗಳನ್ನು ಲೋಕಾಯುಕ್ತ ಸಂಸ್ಥೆ ಹಾಗೂ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾಗಿರುವುದು ಅವರ ಕರ್ತವ್ಯ. ಪ್ರಧಾನಿ ಮೋದಿ ಅವರು ತಾವು ಸೇರಿದ್ದಾರೆ ತಮ್ಮ ಸಂಪುಟದ ಸಚಿವರು ಆಸ್ತಿ ವಿವರವನ್ನು ಆನ್ ಲೈನ್ ನಲ್ಲಿ ಪ್ರಕಟಿಸಲು ಕಾರಣರಾಗಿದ್ದರು.

ಕರ್ನಾಟಕ ಲೋಕಾಯುಕ್ತ ಕಾಯ್ದೆ 7(1), 22ರ ಪ್ರಕಾರ ಕಾರ್ಪೊರೇಟರ್ ಹಾಗೂ ಕೌನ್ಸಿಲರ್ ಗಳನ್ನು ಕೂಡಾ ಸಾರ್ವಜನಿಕ ನೌಕರರು ಎಂದು ಪರಿಗಣಿಸಲಾಗಿದೆ. ಹೀಗಾಗಿ, ಜೂನ್ 30ರೊಳಗೆ ಆಸ್ತಿ ವಿವರ ಸಲ್ಲಿಸಬೇಕಾದ ನಿಯಮ ಬಿಬಿಎಂಪಿ ಕಾರ್ಪೊರೇಟರ್ ಗಳಿಗೂ ಅನ್ವಯವಾಗಲಿದೆ. ಕರ್ನಾಟಕ ಪೌರಾಡಳಿತ ಕಾಯ್ದೆ ಸೆಕ್ಷನ್ 19ರಂತೆ ಎಲ್ಲಾ ವಾರ್ಡ್ ಗಳ ಕಾರ್ಪೊರೇಟರ್ ಗಳು ಮೇಯರ್ ಗೆ ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಬೇಕು ಎಂಬ ನಿಯಮವೂ ಇದೆ.

ಕರ್ನಾಟಕ ಲೋಕಾಯುಕ್ತ ಸಂಸ್ಥೆ

ಕರ್ನಾಟಕ ಲೋಕಾಯುಕ್ತ ಸಂಸ್ಥೆ

ಚುನಾವಣೆ ಸಂದರ್ಭದಲ್ಲಿ ಅಫಿಡವಿಟ್ ನೀಡುವ ಅಭ್ಯರ್ಥಿಗಳು, ವಾರ್ಷಿಕ ಆದಾಯ ಮೊತ್ತವನ್ನು ಲೋಕಾಯುಕ್ತ ಸಂಸ್ಥೆಗೆ ತಿಳಿಸುವುದರಲ್ಲಿ ಅನೇಕ ಬಾರಿ ವಿಳಂಬ ಮಾಡುತ್ತಾರೆ. ಇನ್ನು ಕೆಲವರು ವಿವರಗಳನ್ನು ನೀಡುವುದೇ ಇಲ್ಲ, ಇಂಥ ಎಂಎಲ್ಎ, ಎಂಎಲ್ಸಿಗಳ ವಿವರಗಳನ್ನು ಕರ್ನಾಟಕ ಲೋಕಾಯುಕ್ತ ಸಂಸ್ಥೆ ಪ್ರಕಟಿಸಿದೆ.

ನಿಯಮ ಉಲ್ಲಂಘಿಸುವವರ ಸಂಖ್ಯೆ ಹೆಚ್ಚಳ

ನಿಯಮ ಉಲ್ಲಂಘಿಸುವವರ ಸಂಖ್ಯೆ ಹೆಚ್ಚಳ

ಪ್ರತಿ ವರ್ಷ ಜೂನ್ 30ರೊಳಗೆ ಜನಪ್ರತಿನಿಧಿಗಳು ತಮ್ಮ ಹಾಗೂ ಕುಟುಂಬಸ್ಥರ ಆಸ್ತಿ ವಿವರಗಳನ್ನು ಸಲ್ಲಿಸಬೇಕು ಎಂಬ ನಿಯಮವಿದೆ. ಆದರೆ, ಪ್ರತಿ ವರ್ಷ ಈ ನಿಯಮ ಉಲ್ಲಂಘಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂಥ ಜನಪ್ರತಿನಿಧಿಗಳಿಗೆ ಲೋಕಾಯುಕ್ತ ಸಂಸ್ಥೆ ನೋಟಿಸ್ ಕಳಿಸಿದ್ದು, 10 ದಿನಗಳೊಳಗೆ ಪ್ರತಿಕ್ರಿಯಿಸುವಂತೆ ಸೂಚಿಸಿದೆ.

2017-18ನೇ ಸಾಲಿನಲ್ಲಿ 11 ಮಂದಿ ತಮ್ಮ ಆಸ್ತಿ ವಿವರ ಸಲ್ಲಿಸಿಲ್ಲ

2017-18ನೇ ಸಾಲಿನಲ್ಲಿ 11 ಮಂದಿ ತಮ್ಮ ಆಸ್ತಿ ವಿವರ ಸಲ್ಲಿಸಿಲ್ಲ

"2017-18ನೇ ಸಾಲಿನಲ್ಲಿ 11 ಮಂದಿ ತಮ್ಮ ಆಸ್ತಿ ವಿವರನ್ನು ಸಲ್ಲಿಕೆ ಮಾಡಿಲ್ಲ. ಈ ರೀತಿ ಆಸ್ತಿ ವಿವರ ನೀಡದ ಜನಪ್ರತಿನಿಧಿಗಳ ಹೆಸರುಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸಲಾಗಿತ್ತು. ಈಗ 2018-19ನೇ ಸಾಲಿನಲ್ಲಿ ಆಸ್ತಿ ಘೋಷಿಸದ ಜನಪ್ರತಿನಿಧಿಗಳ ಹೆಸರುಗಳನ್ನು ಪ್ರಕಟಿಸಲಾಗಿದೆ" ಎಂದು ಲೋಕಾಯುಕ್ತ ಸಂಸ್ಥೆ ರಿಜಿಸ್ಟ್ರಾರ್ ನಂಜುಡಸ್ವಾಮಿ ಹೇಳಿದ್ದಾರೆ.

ನೋಟಿಸ್ ಪಡೆದ ಜನಪ್ರತಿನಿಧಿಗಳು

ನೋಟಿಸ್ ಪಡೆದ ಜನಪ್ರತಿನಿಧಿಗಳು

ಶಾಸಕರಾದ ಜಮೀರ್ ಅಹ್ಮದ್, ಎಚ್ ಡಿ ರೇವಣ್ಣ, ಸಿ ಪುಟ್ಟರಂಗ ಶೆಟ್ಟಿ, ಹರೀಶ್ ಪೂಂಜಾ, ಕೆ. ವೈ ನಂಜೇಗೌಡ, ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್, ಸಿದ್ದು ಸವದಿ, ಎಂಪಿ ರೇಣುಕಾಚಾರ್ಯ,ಸೋಮೇಗೌಡ ಬಿ ಪಾಟೀಲ ಸೇರಿ 43 ಶಾಸಕರು, ಸಿಎಂ ಇಬ್ರಾಹಿಂ, ಯು.ಬಿ ವೆಂಕಟೇಶ್, ಡಾ. ತೇಜಸ್ವಿನಿ ಗೌಡ, ಅರವಿಂದ್ ಕುಮಾರ್ ಅರಳಿ, ಟಿ.ಎ ಶರವಣ, ನಜೀರ್ ಅಹ್ಮದ್, ಕೆ.ಪಿ ನಂಜುಂಡಿ, ಡಿ. ಯು ಮಲ್ಲಿಕಾರ್ಜುನ, ಸುನೀಲ್ ಗೌಡ, ನಜೀರ್ ಅಹ್ಮದ್, ಬಸನಗೌಡ ಪಾಟೀಲ್, ಎಂ ನಾರಾಯಣ ಸ್ವಾಮಿ ಸೇರಿದಂತೆ 21 ಮಂದಿ ಎಂಎಲ್ಸಿಗಳು ಈ ಪಟ್ಟಿಯಲ್ಲಿದ್ದಾರೆ. ಈ ಶಾಸಕರು ತಮ್ಮ ಹಾಗೂ ತಮ್ಮ ಕುಟುಂಬಸ್ಥರ ಆಸ್ತಿ ವಿವರಗಳನ್ನು ಸಲ್ಲಿಸಿಲ್ಲ ಎಂದು ಲೋಕಾಯುಕ್ತ ಸಂಸ್ಥೆ ಹೇಳಿದೆ.

English summary
Karnataka Lokayukta P Vishwanath Shetty has issued Notice to 43 MLAs and 21 MLCs who failed to submit Assets details. The list includes HD Revanna, Renukacharya, CM Ibrahim,and so on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X