• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಧಾನಸಭೆಯಲ್ಲಿ ಶಾಸಕರು ಸಾಮಾಜಿಕ ಅಂತರ ಕಾಯ್ದುಕೊಂಡಿದ್ದು ಹೇಗೆ?

|

ಬೆಂಗಳೂರು, ಸೆ. 21: ಐತಿಹಾಸಿಕ ವಿಧಾನ ಮಂಡಲ ಅಧಿವೇಶನ ಆರಂಭವಾಗಿದೆ. ಐತಿಹಾಸಿಕ ಯಾಕೆಂದರೆ ಇದೇ ಮೊದಲ ಬಾರಿ ಸಾಂಕ್ರಾಮಿಕ ರೋಗ ಹರಡುವ ಭೀತಿಯಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಅಧಿವೇಶನ ನಡೆಸಲಾಗುತ್ತಿದೆ. ಜೊತೆಗೆ ಕೊರೊನಾ ಆತಂಕದಿಂದ 10 ದಿನಗಳ ಅಧಿವೇಶನವನ್ನು ಮೂರೇ ದಿನಗಳಿಗೆ ಮೊಟಕುಗೊಳಿಸಲು ಸರ್ಕಾರ ಮುಂದಾಗಿದೆ.

ಕೋವಿಡ್ ಆತಂಕದಿಂದಾಗಿ ವಿಧಾನ ಮಂಡಲ ಅಧಿವೇಶನ ವಿಶೇಷವಾಗಿ ನಡೆಯುತ್ತಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸದಸ್ಯರ ಆಸನಗಳ ಮಧ್ಯೆ ಪಾರದರ್ಶಕ ಗ್ಲಾಸ್ ಅಳವಡಿಕೆ ಮಾಡಲಾಗಿದೆ. ಜೊತೆಗೆ ವಿಧಾನಸಭೆಯ ಸದಸ್ಯರು ಮಾಸ್ಕ್‌, ಫೇಸ್ ಶಿಲ್ಡ್‌ ಧರಿಸಿ ವಿಧಾನಸಭೆ ಕಲಾಪದಲ್ಲಿ ಭಾಗವಹಿಸಿದ್ದಾರೆ. ವಂದೇ ಮಾತರಂ ಗೀತೆಯ ಮೂಲಕ ವಿಧಾನಸಭೆ ಕಲಾಪ ಆರಂಭವಾಯಿತು.

ಮೂರೇ ದಿನಕ್ಕೆ ವಿಧಾನ ಮಂಡಲ ಮಳೆಗಾಲದ ಅಧಿವೇಶನ ಮೊಟಕು?

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸದಸ್ಯರ ಆಸನಗಳಲ್ಲಿ ಬದಲಾವಣೆ ಮಾಡಲಾಗಿದೆ. ಹೀಗಾಗಿ ಶಾಸಕರು ತಮ್ಮ ಆಸನಗಳ ಹುಡುಕಾಟ ಮಾಡಬೇಕಾಯ್ತು. ಕೊನೆಗೆ ಬಹಳಷ್ಟು ಶಾಸಕರು ದಲಾಯತ್‌(ಸದನದಲ್ಲಿನ ಸಹಾಯಕರು)ಗಳ ಮೂಲಕ ತಮ್ಮತಮ್ಮ ಆಸನ ಹುಡುಕಿಕೊಂಡು ಆಸೀನರಾದರು.

ಸಚಿವರು, ಶಾಸಕರಿಗೂ ಕೋವಿಡ್ ನೆಗಟಿವ್ ಪರೀಕ್ಷಾ ವರದಿ ಕಡ್ಡಾಯ

   8 ಜನ ರಾಜ್ಯಸಭಾ ಸದಸ್ಯರು ಅಮಾನತು !! | Oneindia Kannada

   ಕೊರೊನಾ ವೈರಸ್ ಆತಂಕದಿಂದ ವಿಧಾನಸಭೆಯಲ್ಲಿ ಸದಸ್ಯರ ಹಾಜರಾತಿ ಕಡಿಮೆಯಿತ್ತು. ಕಾಂಗ್ರೆಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷದಿಂದ 48 ಶಾಸಕರು, ಜೆಡಿಎಸ್ ಪಕ್ಷದ 16 ಶಾಸಕರು ಹಾಗೂ ಬಿಜೆಪಿಯಿಂದ 12 ಸಚಿವರು, 44 ಶಾಸಕರು ಮಾತ್ರ ಕಲಾಪದಲ್ಲಿ ಭಾಗವಹಿಸಿದ್ದಾರೆ. ವಿಧಾನಸಭೆಯ ಪ್ರೆಸ್‌ ಗ್ಯಾಲರಿಯಲ್ಲಿ ಪ್ರತಿಪಕ್ಷ ನಾಯಕರ ಆಪ್ತ ಕಾರ್ಯದರ್ಶಿಗೆ ಹಾಗೂ ಉಪಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಅಧಿಕಾರಿಗಳ ಗ್ಯಾಲರಿಯಲ್ಲಿ ಇಲಾಖಾ ಪ್ರಧಾನ ಕಾರ್ಯದರ್ಶಿಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಮಾಧ್ಯಮ ಪ್ರತಿನಿಧಿಗಳಿಗೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ.

   English summary
   The Historical assembly session has begun. This is the first time a session has been started with maintaining social distance in fear of spreading the coronavirus. Members of the assembly are wearing a mask and face shield.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X