ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನಲ್ಲಿ ಏಷ್ಯನ್ ಪೇ೦ಟ್ಸ್ ಘಟಕ ನಿರ್ಮಾಣ ಸನ್ನಿಹಿತ

By Madhusoodhan
|
Google Oneindia Kannada News

ಬೆಂಗಳೂರು, ಜೂನ್, 27: ಕರ್ನಾಟಕ ಮತ್ತು ಆ೦ಧ್ರಪ್ರದೇಶದಲ್ಲಿ ಏಷ್ಯನ್ ಪೇ೦ಟ್ಸ್ 4000 ಕೋಟಿ ರೂ. ಹೂಡಿಕೆ ಮಾಡಲಿದೆ. ಮೈಸೂರಿನಲ್ಲಿ 2,300 ಕೋಟಿ ರೂ. ವೆಚ್ಚದಲ್ಲಿ 6 ಲಕ್ಷ ಕಿಲೋ ಲೀಟರ್ ಸಾಮರ್ಥ್ಯದ ಘಟಕ ಆರಂಭ ಮಾಡಲಿದೆ.

ಮುಂದಿನ ದಿನಗಳನ್ನು ಲೆಕ್ಕದಲ್ಲಿ ಇಟ್ಟುಕೊಂಡು ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಆ೦ಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ 1,750 ಕೋಟಿ ರೂ. ವೆಚ್ಚದಲ್ಲಿ 4 ಲಕ್ಷ ಕಿಲೋ ಲೀಟರ್ ಸಾಮರ್ಥ್ಯದ ಘಟಕ ಆರಂಭ ಮಾಡಲಿದ್ದೇವೆ ಎಂದು ಏಷ್ಯನ್ ಪೇ೦ಟ್ಸ್ ಅಧ್ಯಕ್ಷ ಅಶ್ವಿನ್ ಚೌಕ್ಸಿ ಹೇಳಿದ್ದಾರೆ.[ಎಫ್ ಡಿಐ ಹೂಡಿಕೆ : ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರ]

mysuru

ಯೋಜನೆಯನ್ನು ಹ೦ತ ಹ೦ತವಾಗಿ ಪೂರ್ಣ ಮಾಡಲಾಗುವುದು. ಎರಡು ರಾಜ್ಯಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮುಗಿದಿದೆ. ಏಷ್ಯನ್ ಪೇ೦ಟ್ಸ್ ನ ಉತ್ತರ ಪ್ರದೇಶ ಮತ್ತು ಗುಜರಾತ್ ಘಟಕಗಳಿಗೂ ಹೆಚ್ಚುವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.[ಮೈಸೂರಲ್ಲಿ ರಾಜಕುಮಾರ ಮದುವೆ ಸಂಭ್ರಮ]

ಮೈಸೂರಿನಲ್ಲಿ ಘಟಕ ಆರಂಭವಾದರೆ ಅಪಾರ ಪ್ರಮಾಣದ ಉದ್ಯೋಗ ಕರ್ನಾಟಕದ ಜನರಿಗೆ ಲಭ್ಯವಾಗುವುದರಲ್ಲಿ ಅನುಮಾನವಿಲ್ಲ. ಹಿಂದಿನ ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ಏಷ್ಯನ್ ಪೇಂಟ್ಸ್ ಅಂದಿನ ಅಧ್ಯಕ್ಷ ಜಲಜ್ ದಾನಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಇಮ್ಮಾವು ಗ್ರಾಮದ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿ ಘಟಕ ಸ್ಥಾಪನೆಗೆ ಸರ್ಕಾರ ಮತ್ತು ಕಂಪನಿ ನಡುವೆ ಮಾತುಕತೆ ನಡೆದಿತ್ತು

English summary
Asian Paints Ltd is investing around Rs 4,000 crore on setting up two manufacturing plants in Karnataka and Andhra Pradesh, although it has cautioned that demand conditions in the current fiscal "still remain uncertain" on account of the global economic situation. Tthe firm will invest about Rs 2,300 crore to set up manufacturing facility with a maximum capacity of 6,00,000 KL in Mysuru, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X