ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ರೇವಣ್ಣ ನಂಬರ್‌ ಗೇಮ್‌ ಟ್ವೀಟ್‌ ಮಾಡಿದ ಅಶ್ವಥ್ ನಾರಾಯಣ

|
Google Oneindia Kannada News

ಬೆಂಗಳೂರು, ಏಪ್ರಿಲ್ 27; ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಮತ್ತು ಮಾಜಿ ಸಚಿವ, ಎಚ್. ಡಿ. ರೇವಣ್ಣ ನಡುವಿನ ಮಾತಿನ ಸಮರ ಮುಂದುವರೆದಿದೆ.

ಬುಧವಾರ ಅಶ್ವಥ್ ನಾರಾಯಣ ಟ್ವೀಟ್ ಮಾಡಿ, ' ಎಚ್. ಡಿ. ರೇವಣ್ಣ ಮತ್ತು ಅವರ ಕುಟುಂಬದವರು ನಂಬರ್‌ ಗೇಮ್‌ನಲ್ಲಿ ಪಳಗಿದ್ದಾರೆ' ಎಂದು ಲೇವಡಿ ಮಾಡಿದ್ದಾರೆ.

 ಭವಾನಿ ರೇವಣ್ಣ ಎಂಎಲ್‍ಎ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ; ಎಚ್.ಡಿ. ರೇವಣ್ಣ ಭವಾನಿ ರೇವಣ್ಣ ಎಂಎಲ್‍ಎ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ; ಎಚ್.ಡಿ. ರೇವಣ್ಣ

'ಜೆಡಿಎಸ್‌ನಲ್ಲಿ ಅವರದೇ ಕುಟುಂಬದ 3 ಶಾಸಕರು, 1 ಸಂಸದರು, 1 ವಿಧಾನ ಪರಿಷತ್ ಸದಸ್ಯರು, 1 ರಾಜ್ಯಸಭಾ ಸದಸ್ಯರು ಇದ್ದಾರೆ. ಈ ನಂಬರ್‌ನಿಂದ ಅವರ ಕುಟುಂಬದ ಉದ್ಧಾರವಾಯಿತೇ ವಿನಃ ರಾಜ್ಯಕ್ಕೆ ಲಾಭವಾಗಿಲ್ಲ' ಎಂದು ಟೀಕಿಸಿದ್ದಾರೆ.

ಐಟಿ ನೋಟಿಸ್; ಅಧಿಕಾರಿಗಳನ್ನು ಕಬ್ಬಿನ ಗದ್ದೆಗೆ ಆಹ್ವಾನಿಸಿದ ಎಚ್.ಡಿ. ರೇವಣ್ಣ ಐಟಿ ನೋಟಿಸ್; ಅಧಿಕಾರಿಗಳನ್ನು ಕಬ್ಬಿನ ಗದ್ದೆಗೆ ಆಹ್ವಾನಿಸಿದ ಎಚ್.ಡಿ. ರೇವಣ್ಣ

Ashwath Narayan Tweet Against HD Revanna

'ನಮಗೆ ನಂಬರ್‌ ಗೇಮ್‌ನಲ್ಲಿ ನಂಬಿಕೆ ಇಲ್ಲ. ಶಿಕ್ಷಣ, ಉದ್ಯೋಗ, ಮೂಲ ಸೌಕರ್ಯ ಪೂರೈಸುವ ವಿಷಯದಲ್ಲಿ ರಾಜಕೀಯ ಮಾಡುವ ಅಗತ್ಯವೂ ಇಲ್ಲ. ಶಿಕ್ಷಣದಲ್ಲಿ ಆಮೂಲಾಗ್ರ ಸುಧಾರಣೆ ತರುವ ಜತೆ ಇರುವ ಶೈಕ್ಷಣಿಕ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸುವ ಹಾಗೂ ಉದ್ಯೋಗಾವಕಾಶ ಸೃಷ್ಟಿಸಲು ನಮ್ಮ ಸರ್ಕಾರ ಕೈಗೊಳ್ಳುತ್ತಿರುವ ಕ್ರಮದ ಬಗ್ಗೆ ಏಕೆ ಮಾತನಾಡುತ್ತಿಲ್ಲ?' ಎಂದು ಸಚಿವರು ಪ್ರಶ್ನಿಸಿದ್ದಾರೆ.

 ಹಾಸನ: ಜನತಾ ಜಲಧಾರೆಯಲ್ಲಿ ಎಚ್‌ಡಿಕೆ ಕಣ್ಣೀರಧಾರೆ ಹಾಸನ: ಜನತಾ ಜಲಧಾರೆಯಲ್ಲಿ ಎಚ್‌ಡಿಕೆ ಕಣ್ಣೀರಧಾರೆ

'ಅಧಿಕಾರ ಸಿಕ್ಕಾಗ ತಮ್ಮ ಕುಟುಂಬದವರು ಸ್ಪರ್ಧಿಸುವ ಕ್ಷೇತ್ರದ ಸಿಎಂ-ಸೂಪರ್‌ ಸಿಎಂಗಳಂತೆ ನಡೆದುಕೊಂಡ ಸ್ವಯಂ ಘೋಷಿತ ಮಣ್ಣಿನ ಮಕ್ಕಳಿಂದು ರಾಜ್ಯದ ಸಮಗ್ರ ಅಭಿವೃದ್ಧಿಗೆ ದುಡಿಯುತ್ತಿರುವ ನಮ್ಮ ಪಕ್ಷವನ್ನು ದೂಷಿಸುತ್ತಿದ್ದಾರೆ. ಶಿಕ್ಷಣ, ಕೃಷಿ ಬಗ್ಗೆ ಅಷ್ಟು ಕಾಳಜಿ ಇರುವ ರೇವಣ್ಣ ಅವರಿಗೆ ಅಂದು ಲೋಕೋಪಯೋಗಿ ಇಲಾಖೆಯೇ ಬೇಕಾಗಿದ್ದೇಕೆ?' ಎಂದು ಕೇಳಿದರು.

ಹಾಸನದಲ್ಲಿ ಮಾತನಾಡಿದ್ದ ಡಾ. ಅಶ್ವಥ್ ನಾರಾಯಣ, "ರೇವಣ್ಣ ಅವರಿಗೆ ಶಿಕ್ಷಣ ಅಂದರೆ ಏನೂ ಅಂತ ಗೊತ್ತಿಲ್ಲ. ನಾಲ್ಕು ಬಿಲ್ಡಿಂಗ್ ಕಟ್ಟೋದನ್ನೇ ಶಿಕ್ಷಣ ಅಂದುಕೊಂಡಿದ್ದಾರೆ. ದೇವೇಗೌಡರನ್ನು ಕಂಡರೆ ಎಲ್ಲರಿಗೂ ಅಪಾರ ಗೌರವ ಇದೆ. ಮಾಜಿ ಸಿಎಂ ಕುಮಾರಸ್ವಾಮಿ, ರೇವಣ್ಣ ಇಬ್ಬರಿಗೂ ಯಾವ ರೀತಿ ಕೆಲಸ ಮಾಡಬೇಕು ಮತ್ತು ಸುಧಾರಣೆ ಮಾಡಬೇಕು ಎಂಬ ಕಲ್ಪನೆ ಇಲ್ಲ' ಎಂದು ಹೇಳಿದ್ದರು.

ಜೆಡಿಎಸ್ ಪಕ್ಷದ ಟ್ವೀಟರ್‌ ಖಾತೆಯಿಂದ ಸಚಿವರಿಗೆ ತಿರುಗೇಟು ನೀಡಿ ಟ್ವೀಟ್ ಮಾಡಲಾಗಿತ್ತು. 'ಮಾನ್ಯ ಅಶ್ವಥ್ ನಾರಾಯಣ ಅವರೇ, ಶಿಕ್ಷಣ ನೀಡೋದು ಎಂದರೆ ಸರ್ಕಾರಿ ಕಾಲೇಜು ಮುಚ್ಚಿ ತಮ್ಮ ಹಾಗೇ ಖಾಸಗಿ ಕಾಲೇಜು ತೆರೆದು ಬಡವರಿಂದ ಲಕ್ಷ ಲಕ್ಷ ದೋಚೋದು ಎಂದುಕೊಂಡಿದ್ದೀರಾ?' ಎಂದು ಕೇಳಿದ್ದರು.

"ಎಚ್. ಡಿ. ರೇವಣ್ಣನವರ ಸ್ವಕ್ಷೇತ್ರ ಹೊಳೆನರಸೀಪುರದಲ್ಲಿ 8 ಪ್ರಥಮ ದರ್ಜೆ, 6 ಸ್ನಾತಕೋತ್ತರ, 3 ಪಾಲಿಟೆಕ್ನಿಕ್‌, 1 ಎಂಜಿನಿಯರಿಂಗ್‌, 5 ಐಟಿಐ ಸರ್ಕಾರಿ ಕಾಲೇಜುಗಳಿವೆ. ಅಷ್ಟೇ ಅಲ್ಲದೇ ಹಾಸನದಲ್ಲಿರುವ ಸರ್ಕಾರಿ ಮೆಡಿಕಲ್, ಕಾನೂನು ಮತ್ತು ಇಂಜಿನಿಯರಿಂಗ್ ಕಾಲೇಜು ಕೂಡ ರೇವಣ್ಣನವರ ಕೊಡುಗೆ ಇದು ರೇವಣ್ಣವರು ಬಡವರ ಹಾಗೂ ಗ್ರಾಮೀಣ ಜನತೆಯ ಶಿಕ್ಷಣಕ್ಕೆ ನೀಡಿರೋ ಮಹತ್ವ' ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿತ್ತು.

English summary
Higher education minister Ashwath Narayan tweet against JD(S) leader and former minister H. D. Revanna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X