ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳಲಿರುವ ಅಶೋಕ್ ಖೇಣಿ?

|
Google Oneindia Kannada News

Recommended Video

ಅಶೋಕ್ ಖೇಣಿ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ | Oneindia Kannada

ಬೀದರ್, ಮಾರ್ಚ್ 05: ಇನ್ನೆರಡು ತಿಂಗಳೊಳಗೆ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ರಾಜಕೀಯ ಕ್ಷೇತ್ರದಲ್ಲಿ ದಿನೇ ದಿನೇ ಅಚ್ಚರಿಯ ಬೆಳವಣಿಗೆಗಳು ನಡೆಯತೊಡಗಿವೆ. ಅದರದೇ ಒಂದು ಭಾಗವಾಗಿ ಬೀದರ್ ಶಾಸಕ, ನೈಸ್ ಕಂಪೆನಿ(Nandi Infrastructure Corridor Enterprises) ಮುಖ್ಯಸ್ಥ ಅಶೋಕ್ ಖೇಣಿ ಇಂದು(ಮಾ.05) ಕಾಂಗ್ರೆಸ್ ಸೇರಲಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಖೇಣಿ ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳಲಿದ್ದಾರೆ. ಆದರೆ ಖೇಣಿ ಸೇರ್ಪಡೆಯ ಕುರಿತು ಹಲವು ಕಾಂಗ್ರೆಸ್ಸಿಗರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಕೆಲವು ಮೂಲಗಳು ತಿಳಿಸಿವೆ.

ಖೇಣಿಯವರೇ ಸ್ಥಾಪಿಸಿದ್ದ ಕರ್ನಾಟಕ ಮಕ್ಕಳ ಪಕ್ಷ ಕಾಂಗ್ರೆಸ್ ನೊಂದಿಗೆ ವಿಲೀನವಾಗಲಿದೆ. 2013 ರ ವಿಧಾನಸಭೆ ಚುನಾವಣೆಗೂ ಮುನ್ನ ಸ್ಥಾಪಿಸಲಾಗಿದ್ದ ಈ ಪಕ್ಷದಿಂದ ಬೀದರ್ ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಶೋಕ್ ಖೇಣಿ, ಗೆಲುವು ಸಾಧಿಸುವ ಮೂಲಕ ಶಾಸಕರಾಗಿ ಆಯ್ಕೆಯಾಗಿದ್ದರು.

ಕಾಂಗ್ರೆಸ್ ಸಂಚಾಲಕರಾಗಿ ಬ್ರಿಜೇಶ್ ಕಾಳಪ್ಪ ನೇಮಕಕಾಂಗ್ರೆಸ್ ಸಂಚಾಲಕರಾಗಿ ಬ್ರಿಜೇಶ್ ಕಾಳಪ್ಪ ನೇಮಕ

ಆದರೆ ಇದೀಗ ಇವರು ಕಾಂಗ್ರೆಸ್ ಸೇರ್ಪಡೆಯಾದರೆ ಬೀದರ್ ದಕ್ಷಿಣ ಕ್ಷೇತ್ರದಿಂದ ಟಿಕೇಟ್ ಸಿಗುವುದು ಅನುಮಾನ. ಮಾಜಿ ಮುಖ್ಯಮಂತ್ರಿ ದಿ. ಧರಂ ಸಿಂಗ್ ಅವರ ಅಳಿಯ ಚಂದ್ರ ಸಿಂಗ್ ಅವರು ಈ ಕ್ಷೇತ್ರದಿಂದ ಕಾಂಗ್ರೆಸ್ ಟಿಕೇಟ್ ಬಯಸುತ್ತಿರುವುದರಿಂದ ಖೇಣಿ ಹಾದಿ ಸುಲಭವಿಲ್ಲ.

Ashok Kheny will be joining congress party today
English summary
As Karnataka will be facing assembly elections 2018 in few months, many leaders are busy in finding their existence in different parties. Bidar MLA Ashok Kheny, who is the Managing Director of Nandi Infrastructure Corridor Enterprises (NICE) will be joining Congress today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X