• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಕೈ' ಹಿಡಿದ ಖೇಣಿ, ಕಾಂಗ್ರೆಸ್ ಕಾಲೆಳೆದ ಟ್ವಿಟ್ಟಿಗರು!

|

ಬೆಂಗಳೂರು, ಮಾರ್ಚ್ 06 : ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ಕಾಂಗ್ರೆಸ್ ಸೇರಿದ್ದಾರೆ. ರಾಜಕೀಯ ವಲಯದಲ್ಲಿ ಮತ್ತು ರಾಜ್ಯಾದ್ಯಂತ ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ 'ನೈಸ್' ಆದ ಚರ್ಚೆ ಸಾಗಿದೆ.

ಅಶೋಕ್ ಖೇಣಿ ಸೇರ್ಪಡೆ ಬಳಿಕ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಕಾಂಗ್ರೆಸ್ ವಿರುದ್ಧ ಟೀಕಾಪ್ರಕಾರ ನಡೆಸುತ್ತಿವೆ. ಸಾಮಾಜಿಕಜಾಲತಾಣ ಟ್ವಿಟರ್‌ನಲ್ಲಿ #CongressNICEDeal ಹೆಸರಿನಲ್ಲಿ ಹಲವು ಟ್ವೀಟ್‌ಗಳನ್ನು ಮಾಡಲಾಗಿದೆ.

ಕಾಂಗ್ರೆಸ್ ಸೇರಿದ ನೈಸ್ ಮುಖ್ಯಸ್ಥ ಅಶೋಕ್ ಖೇಣಿ

'ನಾವು ನೈಸ್ ಸಂಸ್ಥೆಯನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿಲ್ಲ. ಅದಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ. ಎಲ್ಲರ ಒಪ್ಪಿಗೆ ಪಡೆದು ಅಶೋಕ್ ಖೇಣಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ' ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಡಿಬೇಟ್ : ಅಶೋಕ್ ಖೇಣಿ ಕಾಂಗ್ರೆಸ್‌ ಸೇರಿದ್ದು ಸರಿಯೇ?

'ಖೇಣಿಯಂತಹ ಲೂಟಿಕೋರರನ್ನು ಪಕ್ಷಕ್ಕೆ ಸೇರಿಸಿಕೊಂಡಾಗಲೇ ಕಾಂಗ್ರೆಸ್ ನೈತಿಕತೆ ಬಯಲಾಗಿದೆ. ಖೇಣಿ ತಪ್ಪು ಮಾಡಿದ್ದಾರೆ ಎಂದು ಸದನ ಸಮಿತಿ ವರದಿಯಲ್ಲಿ ಹೇಳಲಾಗಿದೆ. ಆದರೆ, ಈಗ ಅದೇ ವ್ಯಕ್ತಿಯನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ' ಎಂದು ಆರ್.ಅಶೋಕ್ ಲೇವಡಿ ಮಾಡಿದ್ದಾರೆ.

ಸೀದಾ ರುಪಯ್ಯ ರಸ್ತೆ

ನೈಸ್ ರಸ್ತೆ ಹೆಸರನ್ನು ಸೀದಾ ರುಪಯ್ಯ ರಸ್ತೆ ಎಂದು ಬದಲಾವಣೆ ಮಾಡಬಹುದು ಎಂದು ವ್ಯಂಗ್ಯವಾಡಲಾಗಿದೆ.

ಬಿ.ಎಸ್.ಯಡಿಯೂರಪ್ಪ

ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಅಶೋಕ್ ಖೇಣಿ ಕಾಂಗ್ರೆಸ್ ಸೇರಿದ್ದು ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಸಿದ್ದರಾಮಯ್ಯ ಕೊಡುಗೆ ಎಂದು ಟೀಕಿಸಿದ್ದಾರೆ.

ಇದು ಯಾವ ರಾಜಕೀಯ?

ಕರ್ನಾಟಕವನ್ನು ನೈಸ್ ಯೋಜನೆ ಹೆಸರಿನಲ್ಲಿ ಲೂಟಿ ಮಾಡಿದ ಖೇಣಿಯನ್ನು ಕಾಂಗ್ರೆಸ್ ಸೇರಿಸಿಕೊಂಡಿದ್ದು ಯಾವ ರೀತಿಯ ರಾಜಕಾರಣ ಎಂದು ಪ್ರಶ್ನಿಸಲಾಗಿದೆ.

ಇದರಲ್ಲಿ ಆಶ್ಚರ್ಯವಿಲ್ಲ

ಅಶೋಕ್ ಖೇಣಿ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ್ದು ಆಶ್ಚರ್ಯ ತಂದಿಲ್ಲ. ಚುನಾವಣೆ ಖರ್ಚಿಗಾಗಿ ಕಾಂಗ್ರೆಸ್ ಮತ್ತಷ್ಟು ಹಣದ ಬ್ಯಾಗ್‌ಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಿದೆ.

'ನೈಸ್' ಡೀಲ್ ಕಾಂಗ್ರೆಸ್

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಾಂಗ್ರೆಸ್ ಇಂದು ಕಳೆದುಕೊಂಡಿದೆ.

Politics of purchase

ಅಶೋಕ್ ಖೇಣಿ ಕಾಂಗ್ರೆಸ್ ಸೇರಿದ್ದು Politics of purchase ಎಂದು ವ್ಯಂಗ್ಯ ಮಾಡಲಾಗಿದೆ

ನೈಸ್ ರೋಡ್ ಟೋಲ್ ರದ್ದು ಮಾಡಿ

ಅಶೋಕ್ ಖೇಣಿಯನ್ನು ಪಕ್ಷಕ್ಕೆ ಸೇರಿಸಿಕೊಂಡ ಮೇಲೆ ನೈಸ್ ರೋಡ್‌ ಟೋಲ್‌ ಶುಲ್ಕವನ್ನು ರದ್ದು ಮಾಡಿ

ಮುಂದೆ ಜನಾರ್ದನ ರೆಡ್ಡಿ ಬರ್ತಾರೆ!

ಸಿದ್ದರಾಮಯ್ಯ ಅವರೇ ನಿಮ್ಮ ಪಕ್ಷಕ್ಕೆ ಆನಂದ್ ಸಿಂಗ್, ಅಶೋಕ್ ಖೇಣಿ ಆಯ್ತು ಮುಂದೆ ಜನಾರ್ದನ ರೆಡ್ಡಿಯೂ ಬರ್ತಾರಾ?

ಬಿಜೆಪಿ ಕಾಂಗ್ರೆಸ್‌ ಪಕ್ಷ ಬೆಂಬಲಿಸಬೇಕು

ಅಶೋಕ್ ಖೇಣಿಯನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಿದ್ದಕ್ಕೆ ಬಿಜೆಪಿ ಬೆಂಬ ನೀಡಿಬೇಕು

10 ಪರ್ಸೆಂಟ್ ಸರ್ಕಾರ

ಸಿದ್ದರಾಮಯ್ಯ ಅವರದ್ದು ಈಗ 10 ಪರ್ಸೆಂಟ್ ಸರ್ಕಾರವಾಯಿತು.

English summary
Bidar South MLA and Managing Director of Nandi Infrastructure Corridor Enterprises (NICE) Ashok Kheny joined Congress on Monday, March 5, 2018. Twitter war against Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X