ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆ ಹಾನಿ: ಪ್ರಧಾನಿ ಮೋದಿ ಎದುರು 5 ಬೇಡಿಕೆಗಳನ್ನು ಇಟ್ಟ ಕರ್ನಾಟಕ

|
Google Oneindia Kannada News

ಬೆಂಗಳೂರು, ಆಗಸ್ಟ್.10: ದೇಶದಲ್ಲಿ ಪ್ರವಾಹ ಪರಿಸ್ಥಿತಿಯ ಕುರಿತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೋ ಸಂವಾದ ನಡೆಸಿದರು. ಈ ವೇಳೆ ರಾಜ್ಯದ ವತಿಯಿಂದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಭಾಗವಹಿಸಿ ರಾಜ್ಯದ ಪ್ರವಾಹ ಸ್ಥಿತಿ ಬಗ್ಗೆ ಮಾಹಿತಿ ನೀಡಿದರು.

Recommended Video

SSLC Results : Chikkaballapura ರಾಜ್ಯಕ್ಕೆ ಫರ್ಸ್ಟ್ | Oneindia Kannada

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೊತೆಗಿನ ವಿಡಿಯೋ ಸಂವಾದದ ಬಳಿಕ ವಿಧಾನಸೌಧದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್.ಅಶೋಕ್ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ರೈತರ ಪರ ಸರ್ಕಾರವನ್ನು ತಿವಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿರೈತರ ಪರ ಸರ್ಕಾರವನ್ನು ತಿವಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ

ಕರ್ನಾಟಕದಲ್ಲಿ ಸೃಷ್ಟಿಯಾಗಿರುವ ಪ್ರವಾಹ ಪರಿಸ್ಥಿತಿಗೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ಒದಗಿಸುವಂತೆ ಉಭಯ ಸಚಿವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕೃಷ್ಣಾ ಜಲಾಯನ ಭಾಗ ಹಾಗೂ ಕರಾವಳಿ ಭಾಗದ ಅಧ್ಯಯನಕ್ಕಾಗಿ ಶೀಘ್ರವೇ ರಾಜ್ಯಕ್ಕೆ ಕೇಂದ್ರದ ಅಧ್ಯಯನ ತಂಡವನ್ನು ಕಳುಹಿಸಿಕೊಡಬೇಕು. ಬೆಳೆನಾಶ, ಭೂಕುಸಿತ, ಮನೆ ಹಾನಿ, ಪ್ರಾಣ ಹಾನಿ ಬಗ್ಗೆ ಅಧ್ಯಯನ ನಡೆಸಿ ಸೂಕ್ತ ವರದಿ ಸಿದ್ಧಗೊಳ್ಳಬೇಕಾದಲ್ಲಿ ಅಧ್ಯಯನ ತಂಡವನ್ನು ಕಳುಹಿಸಿಕೊಡಬೇಕಾದ ಅಗತ್ಯವಿದೆ ಎಂದು ಸಚಿವರು ಮನವಿ ಮಾಡಿಕೊಂಡಿದ್ದಾರೆ. ಮಲೆನಾಡು, ಕರಾವಳಿ, ಕೃಷ್ಣ ಮತ್ತು ಕಾವೇರಿ ಕೊಳ್ಳಗಳ ಪ್ರದೇಶಗಳ ನೆರೆ ಅಧ್ಯಯನಕ್ಕೆ ಕೇಂದ್ರದ ಅಧಿಕಾರಿಗಳ ಎರಡು ತಂಡ ಬರಲಿವೆ.

ಕರ್ನಾಟಕ ಮಾತ್ರವಲ್ಲದೇ ಅಸ್ಸಾಂ, ಕೇರಳ ರಾಜ್ಯಗಳ ಜೊತೆಗೂ ಪ್ರಧಾನಮಂತ್ರಿಯವರು ಚರ್ಚೆ ನಡೆಸಿದ್ದಾರೆ. ಕಳೆದ ಜೂನ್ ಮತ್ತು ಜುಲೈ ತಿಂಗಳಲ್ಲಾದ ಮಳೆಯಿಂದ ಜುಲೈ ತಿಂಗಳಾಂತ್ಯದವರೆಗೂ ವಾಡಿಕೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಈಗಾಗಲೇ ವಾಡಿಕೆಗಿಂತ 18ರಷ್ಟು ಹೆಚ್ಚಿನ ಮಳೆಯಾಗಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಪರಿಹಾರದ ಬಗ್ಗೆ ಆಲೋಚಿಸುವಂತೆ ಸಚಿವರು ಪ್ರಧಾನಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕೇಂದ್ರದ ತಂಡವನ್ನು ರಾಜ್ಯಕ್ಕೆ ಕಳುಹಿಸಲು ಮನವಿ

ಕೇಂದ್ರದ ತಂಡವನ್ನು ರಾಜ್ಯಕ್ಕೆ ಕಳುಹಿಸಲು ಮನವಿ

ಕೃಷ್ಣಾ ಜಲಾಯನ ಭಾಗ ಹಾಗೂ ಕರಾವಳಿ ಭಾಗದ ಅಧ್ಯಯನಕ್ಕಾಗಿ ಶೀಘ್ರವೇ ರಾಜ್ಯಕ್ಕೆ ಕೇಂದ್ರದ ಅಧ್ಯಯನ ತಂಡವನ್ನು ಕಳುಹಿಸಿಕೊಡಬೇಕು. ಬೆಳೆನಾಶ, ಭೂಕುಸಿತ, ಮನೆ ಹಾನಿ, ಪ್ರಾಣ ಹಾನಿ ಬಗ್ಗೆ ಅಧ್ಯಯನ ನಡೆಸಿ ಸೂಕ್ತ ವರದಿ ಸಿದ್ಧಗೊಳ್ಳಬೇಕಾದಲ್ಲಿ ಅಧ್ಯಯನ ತಂಡವನ್ನು ಕಳುಹಿಸಿಕೊಡಬೇಕಾದ ಅಗತ್ಯವಿದೆ ಎಂದು ಸಚಿವರು ಮನವಿ ಮಾಡಿಕೊಂಡಿದ್ದಾರೆ. ಮಲೆನಾಡು, ಕರಾವಳಿ, ಕೃಷ್ಣ ಮತ್ತು ಕಾವೇರಿ ಕೊಳ್ಳಗಳ ಪ್ರದೇಶಗಳ ನೆರೆ ಅಧ್ಯಯನಕ್ಕೆ ಕೇಂದ್ರದ ಅಧಿಕಾರಿಗಳ ಎರಡು ತಂಡ ಬರಲಿವೆ.

ಎರಡು ತಿಂಗಳಿನಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆ

ಎರಡು ತಿಂಗಳಿನಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆ

ಕರ್ನಾಟಕ ಮಾತ್ರವಲ್ಲದೇ ಅಸ್ಸಾಂ, ಕೇರಳ ರಾಜ್ಯಗಳ ಜೊತೆಗೂ ಪ್ರಧಾನಮಂತ್ರಿಯವರು ಚರ್ಚೆ ನಡೆಸಿದ್ದಾರೆ. ಕಳೆದ ಜೂನ್ ಮತ್ತು ಜುಲೈ ತಿಂಗಳಲ್ಲಾದ ಮಳೆಯಿಂದ ಜುಲೈ ತಿಂಗಳಾಂತ್ಯದವರೆಗೂ ವಾಡಿಕೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಕೆಲವೇ ಪ್ರದೇಶಗಳಲ್ಲಿ ಮಳೆ, ನದಿಗಳು ಕೆಲವು ಕಡೆ ತುಂಬಿ‌ ಹರಿದಿವೆ. ಪುನರ್ವಸತಿ, ರಕ್ಷಣಾ ಕಾರ್ಯದ ಬಗ್ಗೆ ಚರ್ಚಿಸಲಾಯಿತು. ನಾವು ರಾಜ್ಯದ ಸ್ಥಿತಿಯನ್ನು ಗಮನಕ್ಕೆ ತಂದಿದ್ದೇವೆ. ವಿಪರೀತ ಗಾಳಿ, ಪ್ರವಾಹ ಬಗ್ಗೆ ಮಾಹಿತಿ ನೀಡಿದ್ದೇವೆ. ಈಗಾಗಲೇ ವಾಡಿಕೆಗಿಂತ 18ರಷ್ಟು ಹೆಚ್ಚಿನ ಮಳೆಯಾಗಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಪರಿಹಾರದ ಬಗ್ಗೆ ಆಲೋಚಿಸುವಂತೆ ಸಚಿವರು ಪ್ರಧಾನಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂದರು.

ರಾಜ್ಯದಲ್ಲಿ ಪ್ರವಾಹಕ್ಕೆ ಹಾನಿಯಾಗಿರುವ ಬಗ್ಗೆ ಮಾಹಿತಿ

ರಾಜ್ಯದಲ್ಲಿ ಪ್ರವಾಹಕ್ಕೆ ಹಾನಿಯಾಗಿರುವ ಬಗ್ಗೆ ಮಾಹಿತಿ

ಕರ್ನಾಟಕದಲ್ಲಿ ಎರಡು ಥರದ ಗಾಳಿ ಬೀಸಿದ್ದು, ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯಿಂದ ನದಿಗಳು ತುಂಬಿವೆ. 56 ತಾಲೂಕುಗಳಲ್ಲಿ ಹಾನಿಯಾಗಿದ್ದು, 885 ಗ್ರಾಮಗಳು ಪ್ರವಾಹ ಪೀಡಿತವವಾಗಿವೆ. 3,500 ಕಿ.ಮೀ ರಸ್ತೆ ಹಾಳಾಗಿದ್ದು, 85 ಸಾವಿರ ಎಕರೆ ಬೆಳೆ ಹಾನಿಯಾಗಿದೆ. 3 ಸಾವಿರ ಮನೆಗಳು, 250 ಸೇತುವೆಗಳು ಹಾನಿಯಾಗಿದೆ. 392 ಕಟ್ಟಡಗಳು ಮಳೆಗೆ ಹಾನಿಯಾಗಿದ್ದು, ಕೇಂದ್ರದ 4 ರಕ್ಷಣಾ ಹೆಲಿಕಾಪ್ಟರ್ ಮೀಸಲಿರಿಸಿದೆ. ರಾಜ್ಯದಲ್ಲಿ ಈಗಾಗಲೆ 4 NDRF ತಂಡಗಳಿವೆ. 4 ಸಾವಿರ ಕೋಟಿ ನಷ್ಟದ ಅಂದಾಜು ಮಾಡಲಾಗಿದೆ. ರಾಜ್ಯ ಕೈಗೊಂಡ ಕ್ರಮಗಳ ಬಗ್ಗೆಯೂ ಪ್ರಧಾನಿ ಗಮನಕ್ಕೆ ತಂದಿದ್ದೇವೆ ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಕೃಷ್ಣಾ ಮತ್ತು ಕಾವೇರಿ ಕೊಳ್ಳದಲ್ಲಿ ಭಾರಿ ಪ್ರವಾಹದ ಆತಕಂ

ಕೃಷ್ಣಾ ಮತ್ತು ಕಾವೇರಿ ಕೊಳ್ಳದಲ್ಲಿ ಭಾರಿ ಪ್ರವಾಹದ ಆತಕಂ

ರಾಜ್ಯದಲ್ಲಿ ಕೃಷ್ಣಾ, ಕಾವೇರಿ ಕೊಳ್ಳಗಳಲ್ಲಿ ಭಾರೀ ಪ್ರವಾಹ ಭೀತಿ ಎದುರಾಗಿದ್ದು, ಮಹಾರಾಷ್ಟ್ರದ ಜೊತೆ ಒಂದು ಸುತ್ತಿನ ಸಭೆ ನಡೆಸಲಾಗಿದೆ. ಸಚಿವ ರಮೇಶ್ ಜಾರಕಿಹೊಳಿ ಸಭೆ ಮಾಡಿದ್ದಾರೆ. ಎಲ್ಲ ಡ್ಯಾಂಗಳ ಎಂಜಿನಿಯರ್ ಗಳ ಸಂಪರ್ಕದಲ್ಲಿದ್ದೇವೆ. ನದಿ ಅಂಚಿನ ಗ್ರಾಮಗಳಲ್ಲಿ ನಷ್ಟ ಕಮ್ಮಿ ಮಾಡುವುದನ್ನೆ ಹೆಚ್ಚಿನ ಆಧ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಪ್ರವಾಹ ಕಡಿಮೆ ಮಾಡಲು ಅಹ್ಮದಾಬಾದ್ ಸಂಸ್ಥೆ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಮೊದಲೇ ಪ್ರವಾಹ ಮಾಹಿತಿ ಪಡೆದು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಪಂಚಾಯತ್ ವಿಪತ್ತು ನಿರ್ವಹಣಾ‌ ಘಟಕಗಳ ಸ್ಥಾಪಿಸಲು ಉದ್ದೇಶಿಸಲಾಗಿದೆ. ಅಂತರ್ ರಾಜ್ಯ ನದಿಗಳ ಜಲಾನಯನ ಪ್ರದೇಶಗಳಲ್ಲಿ ಸಂಯೋಜಿತ ಪ್ರವಾಹ ಮುನ್ಸೂಚನೆ ವ್ಯವಸ್ಥೆ ರೂಪಿಸಲು ಮನವಿ ಮಾಡಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

English summary
Ashok And Bommai Joint Press Meet After Interaction With Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X