ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 17ರಂದು ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ

|
Google Oneindia Kannada News

ಬೆಂಗಳೂರು, ಮೇ 7: ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆ ಈಡೇರಿಸುವಂತೆ ಮೇ. 17 ರಂದು ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ರಾಜ್ಯಮಟ್ಟದ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯಾಧ್ಯಕ್ಷ ಕೆ.ಸೋಮಶೇಖರ ಯಾದಗಿರಿ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಒಟ್ಟು 42,000 ಮತ್ತು ಕಲಬುರಗಿ ಜಿಲ್ಲೆಯಲ್ಲಿ ಸುಮಾರು 2,000 ಆಶಾ ಕಾರ್ಯಕರ್ತೆಯರಿದ್ದಾರೆ. ಸರಕಾರದಿಂದ ಸೂಕ್ತ ಪ್ರೋತ್ಸಾಹಧನ ನೀಡುತ್ತಿಲ್ಲ. ಆರೋಗ್ಯ ಸೌಲಭ್ಯಗಳು, ಆರೋಗ್ಯ ಸಮೀಕ್ಷೆಯಿಂದ ಒಂದೇ ಒಂದು ಮನೆಯೂ ವಂಚಿತವಾಗದಂತೆ ನೋಡಿಕೊಳ್ಳುತ್ತಾರೆ, ಆದರೆ ಅವರು ಮಾಡುತ್ತಿರುವ ತಿಂಗಳಿಗೆ 5000 ರು ಮಾತ್ರ ಕಡಿಮೆ ಸಂಬಳ ನೀಡಲಾಗುತ್ತಿದೆ.

ತಮ್ಮ ತಮ್ಮ ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ಆಶಾ ಕಾರ್ಯಕರ್ತೆಯು ತನಗೆ ನಿಯೋಜಿಸಲಾದ ಗ್ರಾಮಗಳಲ್ಲಿ ಪ್ರತೀ ಮನೆಗೆ ಭೇಟಿ ನೀಡುತ್ತಾರೆ, ಸಾಮಾನ್ಯವಾಗಿ ಈ ಕೆಲಸದಲ್ಲಿ ದಿನಕ್ಕೆ ಕಡ್ಡಾಯ ಸಮಯಕ್ಕಿಂತ ಹೆಚ್ಚು ಸಮಯ ಕೆಲಸ ಮಾಡುತ್ತಾರೆ ಆದರೂ ಅವರಿಗೆ ಸರ್ಕಾರದಿಂದ ಕಡಿಮೆ ಸಂಬಳ ಕೊಡುತ್ತಾರೆ ಇದರಿಂದ ಅವರ ಕುಟುಂಬ ನಿರ್ವಹಣೆಗೂ ಸಹ ಸಾಲುವುದಿಲ್ಲ.

Asha workers to stage statewide protest on May17

ಮೇ,17 ರಂದು ನಡೆಯಲಿರುವ ರಾಜ್ಯಮಟ್ಟದ ಪ್ರತಿಭಟನೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಭಾಗವಹಿಸಲಿದ್ದಾರೆ. ನಗರದ ಸಂಗೊಳ್ಳಿರಾಯಣ್ನ ರೈಲ್ವೇ ನಿಲ್ದಾಣದಿಂದ ಫ್ರೀಡಂಪಾರ್ಕ್ ವರೆಗೂ ರ್‍ಯಾಲಿ ಮೂಲಕ ತಲುಪಲಿದ್ದಾರೆ. ಈ ಪ್ರತಿಭಟನೆ ಮೂಲಕ ಆಶಾ ಕಾರ್ಯಕರ್ತೆಯರ ಕೆಲಸಕ್ಕೆ ಅನುಗುಣವಾಗಿ ತಾವು ಶ್ರಮಪಡುತ್ತಿರುವುದಕ್ಕೆ ವಿವಿಧ ಬೇಡಿಕೆಗಳನ್ನ ಸರ್ಕಾರ ಮುಂದಿಡಲಿದ್ದೇವೆ ಎಂದು ತಿಳಿಸಿದರು.

Asha workers to stage statewide protest on May17

ಅಖಿಲ ಭಾರತ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (AIUTUC)ಗೆ ಸಂಯೋಜಿತವಾಗಿರುವ ಕರ್ನಾಟಕ ರಾಜ್ಯ ಆಶಾ ವರ್ಕರ್ಸ್ ಅಸೋಸಿಯೇಷನ್ ರಾಜ್ಯದಲ್ಲಿ ಎಲ್ಲಾ ಗ್ರಾಮಗಳಲ್ಲಿ ಒಟ್ಟು 42,000 ಸಾವಿರ ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ. ಈ ಹಿಂದೆಯೂ ಸಹ ಸರ್ಕಾರಕ್ಕೆ ವಿವಿಧ ಬೇಡಿಕೆಗಳನ್ನ ಇಟ್ಟಿದ್ದು, ಸರ್ಕಾರ ಅದನ್ನ ಅಮರ್ಪಕವಾಗಿ ಜಾರಿಗೆ ತರಲು ಹಿಂದೇಟು ಹಾಕುತ್ತಿರುವ ಹಿನ್ನೆಲೆ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಕೆ.ಸೋಮಶೇಖರ ಯಾದಗಿರಿಯಲ್ಲಿ ಹೇಳಿದರು.

Recommended Video

KL Rahul ಪಂದ್ಯ ಗೆದ್ದರೂ ಬೇಜಾರಾಗಿದ್ದೇಕೆ | Oneindia kannada

English summary
Asha workers to stage State level protests on May17. The protest was held at Freedom Park in Bengaluru, Union President K Somashekhar said
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X