ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಮಲತಾ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಬಿಟ್ಟಿದೆಯೇ ಬಿಜೆಪಿ!?

|
Google Oneindia Kannada News

Recommended Video

ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಟ್ವೀಟ್‍ನಲ್ಲಿ ಏನಿತ್ತು? | Oneindia Kannada

ಬೆಂಗಳೂರು, ಜೂನ್ 06: ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಇತಿಹಾಸದಲ್ಲಿ ನೆನಪಿಟ್ಟುಕೊಳ್ಳುವಂತೆ ಹೋರಾಡಿ ಗೆಲುವು ಸಾಧಿಸಿದ್ದಾರೆ ಸುಮಲತಾ. ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದ ಮೊದಲ ಮಹಿಳಾ ಸಂಸದೆ ಅವರು.

ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಸುಮಲತಾ ಅವರಿಗೆ ಬಿಜೆಪಿ ಪಕ್ಷ ಬೆಂಬಲ ನೀಡಿತ್ತು. ಈಗ ಅವರನ್ನು ಅಧಿಕೃತವಾಗಿ ಪಕ್ಷಕ್ಕೆ ಸೆಳೆಯುವ ಕೆಲಸ ನಡೆಯುತ್ತಿದೆ ಎನ್ನಲಾಗುತ್ತಿದೆ. ಆದರೆ ಅದಕ್ಕೂ ಮುನ್ನವೇ ಅವರನ್ನು ಪರೋಕ್ಷವಾಗಿ ಪಕ್ಷಕ್ಕೆ ಎಳೆದುಕೊಂಡು ಬಿಟ್ಟಿದೆ ಬಿಜೆಪಿ!

ಪ್ರಜಾಪ್ರಭುತ್ವದ ದೇವಾಲಯ ಪ್ರವೇಶಿಸಿದ ಮಂಡ್ಯ ಸಂಸದೆ ಸುಮಲತಾ ಪ್ರಜಾಪ್ರಭುತ್ವದ ದೇವಾಲಯ ಪ್ರವೇಶಿಸಿದ ಮಂಡ್ಯ ಸಂಸದೆ ಸುಮಲತಾ

ಸುಮಲತಾ ಅವರು ಈ ವರೆಗೆ ಅಧಿಕೃತವಾಗಿ ಯಾವ ಪಕ್ಷವನ್ನೂ ಸೇರಿಲ್ಲ ಆದರೆ, ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರ ರಾವ್ ಅವರು ಮಾಡಿರುವ ಟ್ವೀಟ್‌ಗಳನ್ನು ನೋಡಿದರೆ ಸುಮಲತಾ ಅವರು ಬಿಜೆಪಿ ಸೇರ್ಪಡೆ ಆಗಿ ಬಿಟ್ಟಿದ್ದಾರೆಯೇ ಎಂಬ ಅನುಮಾನ ಮೂಡುತ್ತದೆ.

ಸುಮಲತಾ ರನ್ನು ಲೆಕ್ಕಕ್ಕೆ ಸೇರಿಸಿಕೊಂಡ ಬಿಜೆಪಿ

ಲೋಕಸಭೆ ಚುನಾವಣೆ ಕರ್ನಾಟಕದ ಫಲಿತಾಂಶದ ಬಗ್ಗೆ ಟ್ವೀಟ್ ಮಾಡಿರುವ ಮುರಳಿಧರ ರಾವ್ ಅವರು, ಬಿಜೆಪಿಯು ಈ ಲೋಕಸಭೆ ಚುನಾವಣೆಯಲ್ಲಿ 25+1 ಸ್ಥಾನವನ್ನು ಗಳಿಸಿದೆ ಎಂದು ಹೇಳಿದ್ದಾರೆ. ಎಂದರೆ ಸುಮಲತಾ ಅವರು ಗೆದ್ದಿರುವ ಸ್ಥಾನವನ್ನೂ ಅವರು ಬಿಜೆಪಿ ಖಾತೆಗೆ ಸೇರಿಸಿಕೊಂಡು ಬಿಟ್ಟಿದ್ದಾರೆ.

ಮತ್ತೆ ಮಂಡ್ಯದಲ್ಲಿ ಜೋಡೆತ್ತುಗಳ ಅಬ್ಬರ: ನಿಜಕ್ಕೂ ಸುಮಲತಾ ಪ್ಲಾನ್ ಏನು?ಮತ್ತೆ ಮಂಡ್ಯದಲ್ಲಿ ಜೋಡೆತ್ತುಗಳ ಅಬ್ಬರ: ನಿಜಕ್ಕೂ ಸುಮಲತಾ ಪ್ಲಾನ್ ಏನು?

ಕುತೂಹಲ ಕೆರಳಿಸಿದೆ ಮುರಳಿಧರ ರಾವ್ ಟ್ವೀಟ್

ಕುತೂಹಲ ಕೆರಳಿಸಿದೆ ಮುರಳಿಧರ ರಾವ್ ಟ್ವೀಟ್

ಯಾರೋ ಸಾಮಾನ್ಯ ಕಾರ್ಯಕರ್ತರು, ಕೆಳ ಹಂತದ ಮುಖಂಡರು ಹೀಗೆ ಹೇಳಿದ್ದರೆ ಅದರಲ್ಲಿ ವಿಶೇಷವೇನೂ ಇರಲಿಲ್ಲ ಆದರೆ, ರಾಜ್ಯ ಬಿಜೆಪಿಯ ಉಸ್ತುವಾರಿ ಅವರೇ ಪಕ್ಷೇತರ ಅಭ್ಯರ್ಥಿಯನ್ನು ಬಿಜೆಪಿ ಸಂಸದರ ಜೊತೆ ಗುರುತಿಸಿರುವುದು ಕುತೂಹಲ ಕೆರಳಿಸಿದೆ.

ಸದಾನಂದಗೌಡರು ಚುನಾವಣೆ ಸಮಯದಲ್ಲಿ ಹೇಳಿದ್ದರು

ಸದಾನಂದಗೌಡರು ಚುನಾವಣೆ ಸಮಯದಲ್ಲಿ ಹೇಳಿದ್ದರು

ಚುನಾವಣೆ ಸಮಯದಲ್ಲಿ ಸದಾನಂದಗೌಡ ಅವರು ಕನ್ನಡ ಪತ್ರಿಕೆಯೊಂದಿಗೆ ನೀಡಿದ್ದ ವಿಶೇಷ ಸಂದರ್ಶನದಲ್ಲಿ 'ಸುಮಲತಾ ಅವರು ಚುನಾವಣೆ ಫಲಿತಾಂಶದ ನಂತರ ಬಿಜೆಪಿ ಸೇರುವುದು ಖಾಯಂ' ಎಂದಿದ್ದರು. ಇದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಏಕಾಂಗಿಯಾಗಿ ಹೋರಾಡಿದ್ದರೆ ಕಾಂಗ್ರೆಸ್ 10 ಸ್ಥಾನ ಗೆಲ್ಲುತ್ತಿತ್ತು: ಸುಮಲತಾ ಏಕಾಂಗಿಯಾಗಿ ಹೋರಾಡಿದ್ದರೆ ಕಾಂಗ್ರೆಸ್ 10 ಸ್ಥಾನ ಗೆಲ್ಲುತ್ತಿತ್ತು: ಸುಮಲತಾ

ಸುಮಲತಾ ಅವರು ಯಾವುದೇ ಪಕ್ಷ ಸೇರಿಲ್ಲ

ಸುಮಲತಾ ಅವರು ಯಾವುದೇ ಪಕ್ಷ ಸೇರಿಲ್ಲ

ಆದರೆ ಸುಮಲತಾ ಅವರು ಈ ವರೆಗೆ ಯಾವುದೇ ಪಕ್ಷವನ್ನು ಸೇರುವುದರ ಬಗ್ಗೆ ಅಧಿಕೃತವಾದ ಘೋಷಣೆ ಮಾಡಿಲ್ಲ. ಅವರಿಗೆ ಬಿಜೆಪಿ ಬೆಂಬಲ ನೀಡಿತ್ತು, ಕಾಂಗ್ರೆಸ್ ಪಕ್ಷ ಬೆಂಬಲ ನೀಡದಿದ್ದರೂ ಪಕ್ಷದ ಸ್ಥಳೀಯ ಮುಖಂಡರೂ, ಮಾಜಿ ಶಾಸಕರುಗಳು ಸಹ ಬೆಂಬಲ ನೀಡಿದ್ದರು, ಪ್ರಚಾರ ಮಾಡಿದ್ದರು. ತಾವು ಯಾವುದೇ ನಿರ್ಧಾರವನ್ನು ಜನರನ್ನು ಕೇಳಿಯೇ ತೆಗೆದುಕೊಳ್ಳುತ್ತೇನೆ ಎಂದು ಸುಮಲತಾ ಅವರು ಚುನಾವಣೆ ಪ್ರಚಾರದ ಸಮಯದಲ್ಲಿ ಹೇಳಿದ್ದರು.

English summary
As per Karnataka BJP in charge Muralidhar Rao Mandya independent MP Sumalatha is also a BJP MP. he tweeted that BJP won 25+1 total 26 seats in Karnataka lok sabha elections 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X