ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್‌ವೈ ಆಪ್ತ ಅರವಿಂದ ಲಿಂಬಾವಳಿಗೆ ಮುಚ್ಚಿದ ಸಂಪುಟದ ಬಾಗಿಲು?

|
Google Oneindia Kannada News

ಬೆಂಗಳೂರು, ಆಗಸ್ಟ್ 29: ಡಿಸಿಎಂ ಸ್ಥಾನದ ಆಕಾಂಕ್ಷಿ ಎನಿಸಿಕೊಂಡಿದ್ದ ಬಿಜೆಪಿ ಪ್ರಮುಖ ಮುಖಂಡ ಅರವಿಂದ ಲಿಂಬಾವಳಿಗೆ ಈಗ ಸಚಿವ ಸ್ಥಾನವೂ ಇಲ್ಲದಾಗಿದೆ.

ಸಂಪುಟ ವಿಸ್ತರಣೆ ಬಳಿಕ ಸಚಿವ ಸ್ಥಾನ ಸಿಗದೇ ಇದ್ದುದ್ದಕ್ಕೆ ತೀವ್ರ ಅಸಮಾಧಾನ ಹೊರಹಾಕಿದ್ದ ಅರವಿಂದ ಲಿಂಬಾವಳಿ, ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಚಿವ ಸ್ಥಾನಕ್ಕಾಗಿ ಹಠ ಹಿಡಿದಿದ್ದರು. ಆ ನಂತರ ಲಿಂಬಾವಳಿಗೆ ಸಚಿವ ಸ್ಥಾನ ನೀಡುವ ಸೂಚನೆಯೂ ದೊರೆತಿತ್ತು, ಆದರೀಗ ಅದು ಮತ್ತೆ ಹುಸಿಯಾಗಿದೆ.

ಸಂಪುಟ ವಿಸ್ತರಣೆ: ಯಾವ ಜಿಲ್ಲೆಗಳಿಗೆ ಸಚಿವ ಸ್ಥಾನ, ಯಾವುದಕ್ಕೆ ಇಲ್ಲ?ಸಂಪುಟ ವಿಸ್ತರಣೆ: ಯಾವ ಜಿಲ್ಲೆಗಳಿಗೆ ಸಚಿವ ಸ್ಥಾನ, ಯಾವುದಕ್ಕೆ ಇಲ್ಲ?

ಅರವಿಂದ ಲಿಂಬಾವಳಿಯವರನ್ನು ಹೈಕಮಾಂಡ್ ದೆಹಲಿಗೆ ಕರೆಸಿಕೊಂಡು ಸಮಾಧಾನಪಡಿಸಲು ಯತ್ನಿಸಿತ್ತು, ಆದರೆ ಅಲ್ಲಿಯೂ ಅರವಿಂದ ಲಿಂಬಾವಳಿ, ಸಚಿವ ಸ್ಥಾನಕ್ಕಾಗಿ ಹಠ ಹಿಡಿದರು.

ಅರವಿಂದ ಲಿಂಬಾವಳಿಯ ಮುನಿಸಿನ ಪರಿಣಾಮವಾಗಿಯೇ ಅವರಿಗೆ ಮತ್ತು ಮತ್ತೊಬ್ಬ ಅತೃಪ್ತ ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ನೀಡುವ ನಿರ್ಣಯವನ್ನು ಮಾಡಲಾಗಿತ್ತು. ಆದರೆ ಮತ್ತೆ ನಿರ್ಣಯದಲ್ಲಿ ಬದಲಾವಣೆ ಆಗಿದ್ದು, ಅರವಿಂದ ಲಿಂಬಾವಳಿ ಅವರಿಗೆ ಸಂಪುಟದ ಬಾಗಿಲು ಬಹುತೇಕ ಮುಚ್ಚಿದಂತೆಯೇ ಆಗಿದೆ.

Recommended Video

ಮೋದಿ ಬಗ್ಗೆ ಕೇಜ್ರಿವಾಲ್ ಹೇಳಿದ ಮಾತು ಕೇಳಿ ಎಲ್ಲರೂ ಶಾಕ್..? | arvind kejriwal
ಬೆಂಗಳೂರಿಗೆ ಈಗಾಗಲೇ ನಾಲ್ಕು ಸಚಿವ ಸ್ಥಾನ

ಬೆಂಗಳೂರಿಗೆ ಈಗಾಗಲೇ ನಾಲ್ಕು ಸಚಿವ ಸ್ಥಾನ

ಅರವಿಂದ ಲಿಂಬಾವಳಿ ಅವರಿಗೆ ಸಚಿವ ಸ್ಥಾನ ಕೈತಪ್ಪುವಲ್ಲಿ ಬಿ.ಎಲ್.ಸಂತೋಶ್ ಅವರೇ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಈಗಾಗಲೇ ನಾಲ್ಕು ಸಚಿವ ಸ್ಥಾನವನ್ನು ಬೆಂಗಳೂರಿಗೆ ನೀಡಿದ್ದದಾಗಿದೆ. ಹಾಗಿದ್ದ ಮೇಲೆ ಇನ್ನೂ ಒಂದು ಸಚಿವ ಸ್ಥಾನವೇಕೆ ಎಂಬುದು ಹೈಕಮಾಂಡ್ ಪ್ರಶ್ನೆ ಮಾಡುತ್ತಿದೆ. ಪ್ರಶ್ನೆಯ ಹಿಂದೆ ಬಿ.ಎಲ್.ಸಂತೋಶ್ ಇದ್ದಾರೆ.

ಉತ್ತಮ ಹುದ್ದೆ ಸಿಗುವ ಸಾಧ್ಯತೆ ಇತ್ತು

ಉತ್ತಮ ಹುದ್ದೆ ಸಿಗುವ ಸಾಧ್ಯತೆ ಇತ್ತು

ಮೈತ್ರಿ ಸರ್ಕಾರ ಉರುಳುವ ಮುನ್ನಾ ಕೆಲವು ದಿನಗಳ ಮುಂಚೆಯವರೆಗೂ ಅರವಿಂದ ಲಿಂಬಾವಳಿ ಅವರಿಗೆ ಮಹತ್ವದ ಹುದ್ದೆ ಸಿಗುತ್ತದೆ ಎಂದೇ ಹೇಳಲಾಗಿತ್ತು. ಮೈತ್ರಿ ಸರ್ಕಾರ ಉರುಳುವುದಕ್ಕೆ ಕೆಲವೇ ದಿನಗಳ ಮುಂಚೆ ಬಿಡುಗಡೆಯಾಗಿದ್ದ ಅರವಿಂದ ಲಿಂಬಾವಳಿಯವರದ್ದು ಎನ್ನಲಾದ ಖಾಸಗಿ ವಿಡಿಯೋ ಸಹ ಲಿಂಬಾವಳಿ ಅವರ ಹಿನ್ನಡೆಗೆ ಕಾರಣ ಎನ್ನಲಾಗುತ್ತಿದೆ.

6 ಬಾರಿ ಶಾಸಕರಾದರೂ ಸಚಿವರಾಗುವ ಭಾಗ್ಯವಿಲ್ಲ! ಅಂಗಾರ ಹೇಳಿದ್ದೇನು?6 ಬಾರಿ ಶಾಸಕರಾದರೂ ಸಚಿವರಾಗುವ ಭಾಗ್ಯವಿಲ್ಲ! ಅಂಗಾರ ಹೇಳಿದ್ದೇನು?

ಸ್ವಪಕ್ಷದವರಿಂದಲೇ ವಿಡಿಯೋ ಬಿಡುಗಡೆ?

ಸ್ವಪಕ್ಷದವರಿಂದಲೇ ವಿಡಿಯೋ ಬಿಡುಗಡೆ?

ಲಿಂಬಾವಳಿ ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನ ತಪ್ಪಿಸಲೆಂದು ಸ್ವಪಕ್ಷದವರೇ ವಿಡಿಯೋ ಬಿಡುಗಡೆ ಮಾಡಿಸಿದ್ದರು ಎನ್ನಲಾಗಿದೆ. ಆ ವಿಡಿಯೋ ಬಗ್ಗೆ ವಿಧಾನಸಭೆಯಲ್ಲಿ ಭಾವುಕರಾಗಿ ಮಾತನಾಡಿದ್ದ ಲಿಂಬಾವಳಿ, ಆ ವಿಡಿಯೋ ವೈರಲ್ ಮಾಡಿದವರು ಸ್ವಪಕ್ಷದವರೂ ಆಗಿರಬಹುದು ಎಂದಿದ್ದರು.

ಯಡಿಯೂರಪ್ಪ ಆಪ್ತರಾಗಿದ್ದ ಅರವಿಂದ ಲಿಂಬಾವಳಿ

ಯಡಿಯೂರಪ್ಪ ಆಪ್ತರಾಗಿದ್ದ ಅರವಿಂದ ಲಿಂಬಾವಳಿ

ಯಡಿಯೂರಪ್ಪ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ, ಬಿಜೆಪಿಯ ದೊಡ್ಡ ಮಟ್ಟದ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ಅರವಿಂದ ಲಿಂಬಾವಳಿ ಅವರಿಗೆ ಬಹುತೇಕ ಸಂಪುಟದ ಬಾಗಿಲು ಮುಚ್ಚಿದಂತೆಯೇ ಆಗಿದೆ.

ಚುನಾವಣೆ ಸೋತರೂ ಸಚಿವರಾದ ಲಕ್ಷ್ಮಣ ಸವದಿ ಪರಿಚಯಚುನಾವಣೆ ಸೋತರೂ ಸಚಿವರಾದ ಲಕ್ಷ್ಮಣ ಸವದಿ ಪರಿಚಯ

English summary
BJP main leader Arvind Limbavali may not get into the Yediyurappa cabinet. High command put stop to Arvind Limbavali minister dream.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X