ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ADGP ದರ್ಜೆ ಅಧಿಕಾರಿಯ ಬಂಧನ: ಭ್ರಷ್ಟಾಚಾರದ ವಿರುದ್ಧ ಸರಕಾರದ ಬದ್ದತೆ ಎಂದ ಗೃಹ ಸಚಿವ

|
Google Oneindia Kannada News

ಬೆಂಗಳೂರು, ಜುಲೈ 5: ಭ್ರಷ್ಟಾಚಾರದ ವಿರುಧ್ದ ಹಿಂದಿನ ಕಾಂಗ್ರೆಸ್ ಸರಕಾರಗಳು ನಿರ್ಲಕ್ಷ್ಯತೆ ವಹಿಸಿದ್ದರೆ, ನಮ್ಮ ಸರಕಾರ, ಎಡಿಜಿಪಿ ದರ್ಜೆಯ ಅಧಿಕಾರಿಯನ್ನು ಬಂಧಿಸಿ ದಿಟ್ಟತನ ತೋರಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಅವರು ಮಂಗಳವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡುತ್ತಾ, " ಪಿಎಎಸ್‌ಐ ಅಕ್ರಮ ಪರೀಕ್ಷಾ ತನಿಖಾ ವಿಷಯದಲ್ಲಿ, ಸರಕಾರ ಅತ್ಯಂತ ಪಾರದರ್ಶಕವಾಗಿ ನಡೆದು ಕೊಂಡಿದ್ದು ಪ್ರಕರಣದಲ್ಲಿ ಭಾಗಿಯಾದ ಯಾರನ್ನೇ ಆಗಲಿ ರಕ್ಷಿಸುವ ಪ್ರಶ್ನೆಯಿಲ್ಲ," ಎಂದು ಕಾಂಗ್ರೆಸ್ ಆರೋಪಗಳ ವಿರುದ್ಧ ಗುಡುಗಿದರು.

ಪಿಎಸ್ಐ ಹಗರಣದ ಗಮನ ಬೇರೆಡೆ ಸೆಳೆಯಲು ಜಮೀರ್ ಮನೆ ಮೇಲೆ ಎಸಿಬಿ ದಾಳಿಪಿಎಸ್ಐ ಹಗರಣದ ಗಮನ ಬೇರೆಡೆ ಸೆಳೆಯಲು ಜಮೀರ್ ಮನೆ ಮೇಲೆ ಎಸಿಬಿ ದಾಳಿ

ಕಾಂಗ್ರೆಸ್ ಸರಕಾರದ ಅವಧಿಯಲ್ಲಿ, ಸಿಐಡಿಗೆ ವಹಿಸಲಾದ ಯಾವುದೇ ಪ್ರಕರಣಗಳು ತಾರ್ಕಿಕ ಅಂತ್ಯವನ್ನು ಕಾಣಲಿಲ್ಲ. ಎಫ್‌ಐಆರ್ ಆದ ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಹಾಕಲಿಲ್ಲ, ಆದರೆ ADGP ದರ್ಜೆಯ ಅಧಿಕಾರಿಯ ಬಂಧನ ನಡೆಸಿದ ನಮ್ಮ ಸರಕಾರದ ಬದ್ಧತೆಯ ಬಗ್ಗೆ ಕಾಂಗ್ರೆಸ್ ನಾಯಕರು ಗೂಬೇ ಕೂರಿಸುತ್ತಿದ್ದಾರೆ ಎಂದು ಆಪಾದಿಸಿದರು.

Arrest of ADGP grade officer: its governments commitment against corruption

"ಪ್ರಾಮಾಣಿಕ ಹಾಗೂ ಪ್ರತಿಭಾವಂತ ಅಭ್ಯರ್ಥಿಗಳನ್ನು ವಂಚಿಸಿ, ಕೆಲವರು ಹಣಬಲ ಮತ್ತು ವಾಮಮಾರ್ಗದಿಂದ ಪೊಲೀಸ್ ಇಲಾಖೆಗೆ ಪ್ರವೇಶಿಸುವುದನ್ನು ತಡೆಗಟ್ಟಲು ದಿಟ್ಟ ನಿರ್ಧಾರ ತಳೆದ ಸರಕಾರದ ಪ್ರಯತ್ನಕ್ಕೆ ಪ್ರತಿಪಕ್ಷ ಕಾಂಗ್ರೆಸ್ ನಾಯಕರು, ಸಹಕಾರ ನೀಡುತ್ತಿಲ್ಲ ಆದರೆ ನಮ್ಮ ರಾಜೀನಾಮೆ ಕೇಳುತ್ತಿದ್ದಾರೆ" ಎಂದು ದೂರಿದರು.

ADGP ದರ್ಜೆಯ ಅಧಿಕಾರಿಯನ್ನೇ ಬಂಧಿಸುವ ಮೂಲಕ ನಮ್ಮ ಸರಕಾರ ಭ್ರಷ್ಟಾಚಾರದ ವಿರುದ್ಧ ಬದ್ದತೆ ಪ್ರದರ್ಶಿಸಿದೆ ಎಂದ ಸಚಿವರು, ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಗಳು, ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಸಾಕ್ಷ್ಯಗಳಿದ್ದರೆ ಕಾನೂನಿನ ಕ್ರಮ ಜರುಗಿಸಲಾಗುವುದು. ಕಾಂಗ್ರೆಸ್ ಪಕ್ಷದ ನಾಯಕರ ಬಳಿ ಯಾವುದೇ ವ್ಯಕ್ತಿಯ ವಿರುದ್ಧ ಸಾಕ್ಷ್ಯಗಳು ಅಥವಾ ಆಧಾರಗಳನ್ನು ಒದಗಿಸಲಿ ಎಂದು ಸಚಿವರು ಸವಾಲೆಸೆದರು.

ಸಿಐಡಿ ಪೊಲೀಸರಿಗೆ ಸ್ವಾತಂತ್ರ್ಯ

545 ಪಿ ಎಸ್ ಐ ಹುದ್ದೆಗಳ ನೇಮಕಾತಿ ಪರೀಕ್ಷಾ ಸಂಬಂಧ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರಿಗೆ, ಸರಕಾರ ಪೂರ್ಣ ಸ್ವಾತಂತ್ರ್ಯ ನೀಡಿದೆ. ತನಿಖೆಯಲ್ಲಿ ಸರಕಾರದಿಂದ ಯಾವುದೇ ಹಸ್ತಕ್ಷೇಪ ಇಲ್ಲ. ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಪರೀಕ್ಷಾ ಅಕ್ರಮಗಳ ಕುರಿತು ಸಾಕ್ಷ್ಯಗಳು ಲಭಿಸಿದ ಕೆಲವೇ ಗಂಟೆಗಳ ಬಳಿಕ ಸಿಐಡಿ ತನಿಖೆಗೆ ಆದೇಶ ಮಾಡಲಾಗಿದೆ. ಹಲವಾರು ವರ್ಷಗಳಿಂದ, ಬೆಳೆದು ಬಂದಿದ್ದ, ಹಣಕ್ಕಾಗಿ ಹುದ್ದೆಗಳು ಎಂಬ ಅನಿಷ್ಠ ಪದ್ದತಿಯನ್ನು ಕೊನೆಗಾಣಿಸಲು ಸರಕಾರ ನಿರ್ಧರಿಸಿ, ಸಿಐಡಿ ತನಿಖೆ ನಡೆಸಲು ಆದೇಶ ಹೊರಡಿಸಿದೆ ಎಂದರು.

ತನಿಖೆಗೆ ಆದೇಶ ಪಡೆದ ಸಿಐಡಿ ಪೊಲೀಸರು, ಎರಡು ಗಂಟೆಗಳ ಒಳಗೆ, ಬೆಂಗಳೂರಿನಿಂದ ಕಲಬುರ್ಗಿಗೆ ಧಾವಿಸಿ, ಮೊಕದ್ದಮೆ ದಾಖಲು ಮಾಡಿಕೊಂಡು, ಆರೋಪಿಯನ್ನು ಬಂಧಿಸಿದ ನಂತರ, ಹಲವಾರು ಪೊಲೀಸ್ ಅಧಿಕಾರಿಗಳನ್ನು, ಸರಣಿ ವಿಚಾರಣೆ ಬಳಿಕ ಬಂಧಿಸಲಾಗಿತ್ತು. ಈ ಹಗರಣದ ಪ್ರಮುಖ ಆರೋಪಿ R D ಪಾಟೀಲ್ ಒಬ್ಬ ಪ್ರಮುಖ ಕಾಂಗ್ರೆಸ್ ನಾಯಕನಾಗಿದ್ದು, ಅಕ್ರಮ ಪರೀಕ್ಷಾ ಹಗರಣದ ಕಿಂಗ್ ಪಿನ್ ಎನ್ನಲಾಗಿದ್ದು, ಮಹಾರಾಷ್ಟ್ರ ದಲ್ಲಿ ಒಬ್ಬ ಕಾಂಗ್ರೆಸ್ ನಾಯಕನ ಮನೆಯಲ್ಲಿ ಹಲವಾರು ದಿನಗಳ ಕಾಲ ಆಶ್ರಯ ಪಡೆದಿದ್ದ. ಕಲಬುರಗಿ ಪೊಲೀಸರು, ಅಕ್ರಮ ಪರೀಕ್ಷಾ ಪ್ರಕರಣದಲ್ಲಿ ದಾಖಲಿಸಲಾದ ಮೊದಲನೇ ಪ್ರಕರಣದಲ್ಲಿ ಆರೋಪಿಯ ವಿರುದ್ಧ, ಚೌಕ್ ಪೊಲೀಸ್ ಠಾಣೆ ಯಲ್ಲಿ ದಾಖಲಿಸಿದ್ದ ದೂರಿನ ಬಗ್ಗೆ, ನಾಳೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ, ಎಂದೂ ಸಚಿವರು ತಿಳಿಸಿದರು.

ನೀವು ರಾಜಿನಾಮೆ ನೀಡಿದ್ರಾ ?
ವಿರೋಧಪಕ್ಷದ ನಾಯಕರಾದ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಲವು ನೇಮಕಾತಿ ಹಗರಣಗಳು ನಡೆದಿವೆ. ಅಂತಹ ಸಂದರ್ಭದಲ್ಲಿ ಅವರು ರಾಜಿನಾಮೆಯನ್ನು ನೀಡಿದ್ದರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು. ಅವರು ಇಂದು ಕಾವೇರಿ ನೀರಾವರಿ ನಿಗಮ ನಿಯಮಿತದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಪಿಎಸ್ ಐ ನೇಮಕಾತಿ ಪರೀಕ್ಷಾ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿರೋಧಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಪೊಲೀಸ್ ಪ್ರಶ್ನೆ ಪತ್ರಿಕೆ ಲೀಕ್ ಆಗಿತ್ತು. ಆಗ ಅವರು ರಾಜೀನಾಮೆ ನೀಡಿದ್ದರೆ? ಈ ಮಾನದಂಡದಲ್ಲಿ ಸಿದ್ಧರಾಮಯ್ಯನವರು ಹಲವು ಬಾರಿ ರಾಜಿನಾಮೆ ನೀಡಬೇಕಿತ್ತು ಎಂದು ಸಿಎಂ ಹೇಳಿದರು.

ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಪೊಲೀಸ್ ನೇಮಕಾತಿ ಪ್ರಕರಣದಲ್ಲಿ ಗುಲ್ಬರ್ಗಾದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಆಗ ಪ್ರಶ್ನೆಪತ್ರಿಕೆ ತಯಾರಿಸಿದ್ದ ಡಿಐಜಿ ಅವರ ಮನೆಯಿಂದಲೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಅದು ವಿಚಾರಣೆಯಾಗಿ ಆರೋಪಿಯೆಂದು ಗುರುತಿಸಿದರು. ಅಧಿಕಾರಿಯನ್ನು ಅಮಾನತ್ತಾಗಲಿ , ವಜಾ ಆಗಲಿ ಮಾಡಲಿಲ್ಲ. ಸಿದ್ಧರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಇಂತಹ ಹಲವು ನೇಮಕಾತಿ ಹಗರಣಗಳ ಬಗ್ಗೆ ಮಾಹಿತಿ ಮುಂದೆ ನೀಡುತ್ತೇನೆ ಎಂದು ತಿಳಿಸಿದರು.

English summary
Previous Congress governments were negligent against corruption, our government showed boldness by arresting an ADGP level officer: Home Minister Araga jnendra said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X