ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕುಮಾರಸ್ವಾಮಿ ಪುಸ್ತಕ ಅವರದ್ದೇ ಕರ್ಮಕಾಂಡ'

|
Google Oneindia Kannada News

ಬೆಂಗಳೂರು, ಫೆ.7 : ಅರ್ಕಾವತಿ ಬಡಾವಣೆ ಡಿನೋಟಿಫೈ ಪ್ರಕರಣದ ಕುರಿತು ಮತ್ತೊಂದು ಸುತ್ತಿನ ವಾಕ್ಸಮರ ಆರಂಭವಾಗಿದೆ. 'ಕುಮಾರಸ್ವಾಮಿ ಅವರು ಹಗರಣದ ಕುರಿತು ಬರೆದಿರುವ ಪುಸ್ತಕ ಅವರದ್ದೇ ಕರ್ಮಕಾಂಡ' ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, 'ನನ್ನ ಅವಧಿಯಲ್ಲಿ ಒಂದೇ ಒಂದು ಗುಂಟೆ ಜಮೀನನ್ನು ಕಾನೂನು ಬಾಹಿರವಾಗಿ ಡಿನೋಟಿಫೈ ಮಾಡಿಲ್ಲ, ಎಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿರುವ 490 ಪುಟಗಳ ದಾಖಲೆ ಪುಸ್ತಕದಲ್ಲಿ ಹೊಸದೇನೂ ಇಲ್ಲ' ಎಂದು ಹೇಳಿದರು.

CM Siddaramaiah

'ಕುಮಾರಸ್ವಾಮಿ ಅವರಿಗೆ ರಾಜಕೀಯವಾಗಿ ಪ್ರಚಾರ ಬೇಕಾಗಿದೆ. ಆದ್ದರಿಂದ ಪುಸ್ತಕನ್ನು ಬಿಡುಗಡೆ ಮಾಡಿದ್ದಾರೆ. 2006 ರಿಂದ 2013ರ ವರೆಗೆ ನಡೆದ ಎಲ್ಲಾ ಅಕ್ರಮಗಳನ್ನು ಕುಮಾರಸ್ವಾಮಿ ನನ್ನ ತಲೆಗೆ ಕಟ್ಟಲು ಪ್ರಯತ್ನ ನಡೆಸುತ್ತಿದ್ದಾರೆ' ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. [ಅರ್ಕಾವತಿ ಕರ್ಮಕಾಂಡ : ಕುಮಾರಸ್ವಾಮಿ ಪುಸ್ತಕದಲ್ಲೇನಿದೆ?]

'ಕುಮಾರಸ್ವಾಮಿ ಅವರು ತಾವು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ನಡೆದಿರುವ ಕರ್ಮಕಾಂಡವನ್ನೇ ರಾಜ್ಯದ ಜನರ ಮುಂದಿಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು. ಕುಮಾರಸ್ವಾಮಿ, ಯಡಿಯೂರಪ್ಪ, ಸದಾನಂದಗೌಡ ಹಾಗೂ ಜಗದೀಶ್ ಶೆಟ್ಟರ್ ಕಾಲದಲ್ಲಿ ನಡೆದಿರುವ ಸಭೆಯ ನಡಾವಳಿಗಳನ್ನು ದಾಖಲೆ ಎಂದು ಕುಮಾರಸ್ವಾಮಿ' ಹೇಳುತ್ತಿದ್ದಾರೆ ಎಂದರು. [ಅರ್ಕಾವತಿ ಬಡಾವಣೆ ವಿವಾದ ಏಕೆ? ಏನು?]

'ಅರ್ಕಾವತಿ ಬಡಾವಣೆಯಲ್ಲಿ ಕಾನೂನು ಬಾಹಿರವಾಗಿ ಬೇರೆಯವರಿಗೆ ನೆರವಾಗುವಂತೆ ಒಂದಿಚೂ ಭೂಮಿಯನ್ನು ಡಿನೋಟಿಫೈ ಮಾಡಿಲ್ಲ. ನ್ಯಾಯಮೂರ್ತಿ ಕೆಂಪಣ್ಣ ಅವರ ಆಯೋಗದ ತನಿಖೆ ನಂತರ ಸತ್ಯಾಂಶ ಹೊರಬರಲಿದೆ. ಕುಮಾರಸ್ವಾಮಿ ಅವರು ಆಯೋಗಕ್ಕೆ ದಾಖಲೆಗಳನ್ನು ಸಲ್ಲಿಕೆ ಮಾಡಲಿ' ಎಂದು ಸಿಎಂ ಸಲಹೆ ನೀಡಿದರು.

ಶುಕ್ರವಾರ 'ಅರ್ಕಾವತಿ ಕರ್ಮಕಾಂಡ-ಸತ್ಯ ಮಿಥ್ಯಗಳ ಇಣುಕು ನೋಟ' ಎಂಬ 490 ಪುಟಗಳ ಪುಸ್ತಕವನ್ನು ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದ್ದರು ಮತ್ತು ಒಂದಿಚೂ ಡಿನೋಟಿಫೈ ಮಾಡಿಲ್ಲ ಎಂದು ಹೇಳುವ ಮುಖ್ಯಮಂತ್ರಿಗಳು ಸದನದ ಮುಂದೆ ಎಲ್ಲಾ ದಾಖಲೆಗಳನ್ನು ಮಂಡಿಸಲಿ ಎಂದು ಸವಾಲು ಹಾಕಿದ್ದರು.

English summary
Karnataka Chief minister Siddaramaiah slams Janata Dal-Secular president HD Kumaraswamy over 490 page book on Arkavathy layout land De-notification scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X