• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಫ್‌ಐಆರ್‌ ರದ್ದು ಕೋರಿ ಕೋರ್ಟ್‌ ಮೊರೆ ಹೋದ ಅರ್ಜುನ್ ಸರ್ಜಾ

|

ಬೆಂಗಳೂರು, ಅಕ್ಟೋಬರ್ 30: ತಮ್ಮ ವಿರುದ್ಧ ನಟಿ ಶ್ರುತಿ ಹರಿಹರನ್ ದಾಖಲಿಸಿರುವ ಲೈಂಗಿಕ ಕಿರುಕುಳದ ಆರೋಪಕ್ಕೆ ಹೇರಲಾರಿಗಿರುವ ಎಫ್‌ಐಆರ್‌ ಅನ್ನು ರದ್ದು ಮಾಡಬೇಕು ಎಂದು ನಟ ಅರ್ಜುನ್ ಸರ್ಜಾ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿ ಶೃತಿ ಹರಿಹರನ್ ಅವರು ಮೊದಲಿಗೆ ಸಾಮಾಜಿಕ ಜಾಲತಾಣದಲ್ಲಿ #ಮಿಟೂ ಅಭಿಯಾನದಡಿ ಆರೋಪ ಮಾಡಿದ್ದರು. ಆ ನಂತರ ಠಾಣೆಯಲ್ಲಿ ದೂರು ಸಹ ನೀಡಿದ್ದರು. ಅದರಂತೆ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಕುಮಾರಸ್ವಾಮಿಗೆ ಕುಮಾರ ಬಂಗಾರಪ್ಪ ಎಸೆದ ವಿಚಿತ್ರ ಸವಾಲು!

ಹೈಕೋರ್ಟ್‌ ಮೊರೆ ಹೋಗಿರುವ ಅರ್ಜುನ್ ಸರ್ಜಾ, ಶ್ರುತಿ ಅವರು ತಮ್ಮ ವಿರುದ್ಧ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವುದಕ್ಕೂ, ಠಾಣೆಯಲ್ಲಿ ನೀಡಿದ ದೂರಿಗೂ ಬಹಳ ಅಂತರವಿದೆ ಅಲ್ಲದೆ ದೂರು ಸುಳ್ಳುಗಳಿಂದ ತುಂಬಿದೆ ಹಾಗಾಗಿ ಎಫ್‌ಐಆರ್‌ ಅನ್ನು ರದ್ದು ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಶ್ರುತಿ ಮಾಡಿರುವ ಆರೋಪಗಳೇನು?

ಶ್ರುತಿ ಮಾಡಿರುವ ಆರೋಪಗಳೇನು?

ಪೊಲೀಸರಿಗೆ ಶ್ರುತಿ ಹರಿಹರನ್ ನೀಡಿರುವ ದೂರಿನಲ್ಲಿ ಹಲವು ಆರೋಪಗಳನ್ನು ಸರ್ಜಾ ಮೇಲೆ ಮಾಡಿದ್ದಾರೆ. ದೇವನಹಳ್ಳಿ ಸಿಗ್ನಲ್‌ ಬಳಿ ತಮ್ಮನ್ನು ಏಕಾಂತ ಸ್ಥಳಕ್ಕೆ ಕರೆದರು ಎಂದು ಹಾಗೂ ಯುಬಿಸಿಟಿಯಲ್ಲಿ ತಮ್ಮನ್ನು ವಿನಾ ಕಾರಣ ತಬ್ಬಿಕೊಂಡು ಕೆಟ್ಟದಾಗಿ ವರ್ತಿಸಿದರೆಂದು ಹಾಗೂ ತಮಗೆ ಬೆದರಿಕೆ ಹಾಕಿದರೆಂದು ಶ್ರುತಿ ನೀಡಿರುವ ದೂರಿನಲ್ಲಿ ಹೇಳಿದ್ದಾರೆ.

ಒಟ್ಟಿಗೆ ಮಜಾ ಮಾಡೋಣ ಎಂದು ಕರೆದ ಸರ್ಜಾ: ಶ್ರುತಿ ಹರಿಹರನ್ ದೂರು

ಮಹಜರ್ ಮಾಡಲಾಗಿದೆ

ಮಹಜರ್ ಮಾಡಲಾಗಿದೆ

ಶ್ರುತಿ ಅವರು ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶ್ರುತಿ ಅವರು ದೂರಿನಲ್ಲಿ ಹೇಳಿದ ಸ್ಥಳಗಳಿಗೆ ಅವರನ್ನು ಕರೆದುಕೊಂಡು ಹೋಗಿ ಮಹಜರ್ ಮಾಡಿದ್ದಾರೆ. ಅಲ್ಲದೆ ಶ್ರುತಿ ಅವರು ಉಲ್ಲೇಖಿಸಿರುವ ಸಾಕ್ಷಿಗಳಲ್ಲಿ ಕೆಲವರನ್ನು ಕರೆದು ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ.

ಸರ್ಜಾ ಪರ ನಿಂತ ನಟಿ ಹರ್ಷಿಕಾ ಪೂಣಚ್ಚಗೆ ಬೆದರಿಕೆ, ಹಣದ ಆಮಿಷ

ಮಾನನಷ್ಟ ಮೊಕದ್ದಮೆ

ಮಾನನಷ್ಟ ಮೊಕದ್ದಮೆ

ಶ್ರುತಿ ಅವರ ಮೇಲೆ ಅರ್ಜುನ್ ಸರ್ಜಾ ಅವರು ಸಹ ಐದು ಕೋಟಿಯ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಶ್ರುತಿ ಅವರು ಸಮಯ ಕೇಳಿದ ಕಾರಣ ವಿಚಾರಣೆ ಮುಂದಕ್ಕೆ ಹೋಗಿದೆ.

ಕಾಂಗ್ರೆಸ್ ವಿರುದ್ಧ ವಿರೋಧಪಕ್ಷಗಳು MeToo ಎನ್ನುತ್ತವೆ ಎಂದ ರಾಜನಾಥ್ ಸಿಂಗ್!

ಶ್ರುತಿಗೆ ಬೆದರಿಕೆ ಕರೆಗಳು

ಶ್ರುತಿಗೆ ಬೆದರಿಕೆ ಕರೆಗಳು

ಅರ್ಜುನ್ ಸರ್ಕಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಶ್ರುತಿ ಅವರಿಗೆ ಹಲವು ಬೆದರಿಕೆ ಕರೆಗಳು ಬಂದಿವೆಯಂತೆ. ಅಲ್ಲದೆ ಅವರ ಚಾರಿತ್ರ್ಯ ಹಾನಿ ಮಾಡುವ ಕಾರ್ಯವೂ ಸಾಮಾಜಿಕ ಜಾಲತಾಣದಲ್ಲಿ ನಡೆದಿವೆಯಂತೆ ಹೀಗೆಂದು ಅವರ ವಕೀಲರು ಹೇಳಿದ್ದಾರೆ.

English summary
Actor Arjun Sarja moved to high court appealing that court should cancel the FIR lodged against him of sexual harassment. actress Sruthi Hariharan gave complaint against Arjun Sarja.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more