ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಕಳೆದ ಒಂದು ದಿನದಲ್ಲಿ ಅತಿ ಹೆಚ್ಚು ಮಳೆಯಾಗಿದ್ದೆಲ್ಲಿ?

|
Google Oneindia Kannada News

ಬೆಂಗಳೂರು, ಜುಲೈ 1: ಕರ್ನಾಟಕದಲ್ಲೂ ಮುಂಗಾರು ಚುರುಕುಗೊಂಡಿದ್ದು ತೀರ್ಥಹಳ್ಳಿ, ಶಿವಮೊಗ್ಗ, ಉತ್ತರಕನ್ನಡ, ಉತ್ತರ ಕರ್ನಾಟಕ ಭಾಗಗಳಲ್ಲಿ ಮಳೆಯಾಗುತ್ತಿದೆ.

ಕಳೆದ 24 ತಾಸಿನಲ್ಲಿ ಶಿವಮೊಗ್ಗದ ಅರಳಸುರಳಿಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಜೂನ್ 30ರ ಬೆಳಗ್ಗೆ 8.30ರಿಂದ ಜುಲೈ 1ರ ಬೆಳಗ್ಗೆ 8.30ರವರೆಗೆ ತೀರ್ಥಹಳ್ಳಿ ಸಮೀಪದ ಅರಳಸುರಳಿಯಲ್ಲಿ 123 ಮಿ.ಮೀನಷ್ಟು ಮಳೆಯಾಗಿದೆ.

ಮುಂಬೈನಲ್ಲಿ ಭಾರಿ ಮಳೆ, ರೈಲು ಸಂಚಾರ ಸ್ಥಗಿತ, ಟ್ರಾಫಿಕ್ ಜಾಮ್ ಮುಂಬೈನಲ್ಲಿ ಭಾರಿ ಮಳೆ, ರೈಲು ಸಂಚಾರ ಸ್ಥಗಿತ, ಟ್ರಾಫಿಕ್ ಜಾಮ್

ನೈಋತ್ಯ ಮುಂಗಾರು ಉತ್ತರ ಕರ್ನಾಟಕದಲ್ಲಿ ಚುರುಕಾಗಿದೆ. ಉಡುಪಿಯಲ್ಲಿ 12 ಸೆಂ.ಮೀ ಮಳೆಯಾಗಿದೆ. ಉತ್ತರ ಕನ್ನಡದ ಶಿರಾಲಿ 9ಸೆಂ.ಮೀ, ಯಲ್ಲಾಪುರ-9 ಸೆಂ.ಮೀ, ಬೆಳಗಾವಿ- 9 ಸೆಂ.ಮೀ, ಲೋಂದಾ 9 ಸೆಂ.ಮೀ, ಕೊಪ್ಪ 9 ಸೆಂ.ಮೀ, ಗೋಕರ್ಣ 7ಸೆಂ.ಮೀ, ನಿಪ್ಪಾಣಿ 6 ಸೆಂ.ಮೀ, ಕಾರವಾರದಲ್ಲಿ 5 ಸೆಂ.ಮೀನಷ್ಟು ಮಳೆಯಾಗಿದೆ.

Arala Surali in Shivamogga district records highest rainfall

ಇನ್ನು ಮುಂಬೈನಲ್ಲಿ ಜನರು ಬೆಚ್ಚಿಬೀಳುವಷ್ಟು ಮಳೆಯಾಗುತ್ತಿದೆ. ರೈಲು ನಿಲ್ದಾಣ, ರಸ್ತೆಗಳು ಸೇರಿದಂತೆ ಎಲ್ಲೆಡೆ ನೀರು ನಿಂತಿದ್ದು ಜನರು ಪರದಾಡುವಂತಾಗಿದೆ. ರೈಲು ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಕಚೇರಿ, ಶಾಲಾ, ಕಾಲೇಜುಗಳಿಗೆ ಹೋಗುವವರು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ನಿಲ್ಲುವಂತಾಗಿತ್ತು.

English summary
Arala Surali in Shivamogga district records the highest rainfall, rainfall of 123 mm in Karnataka in the last 24-hours up to 8.30am on Sunday to 8.30 am on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X