ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಅಡಿಕೆ ಉತ್ಪನ್ನ ಆಮದು ಸುಂಕ ಹೆಚ್ಚಿಸಲು ಕೇಂದ್ರಕ್ಕೆ ಆಗ್ರಹ

|
Google Oneindia Kannada News

ಬೆಂಗಳೂರು, ಆಗಸ್ಟ್ 17: ಅಡಿಕೆ ಉತ್ಪನ್ನ ಆಮದು ಮೇಲಿನ ಸುಂಕ ಹೆಚ್ಚಿಸಲು ರಾಜ್ಯ ನಿಯೋಗ ಬುಧವಾರ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಕೇಂದ್ರ ಸರಕಾರಕ್ಕೆ ಆಗ್ರಹಿಸಿದ್ದಾರೆ.

ರಾಜ್ಯ ಅಡಿಕೆ ಬೆಳೆಗಾರರ ಸಂಘದ ನಿಯೋಗ ಇಂದು ನವದೆಹಲಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಕೇಂದ್ರ ಸರಕಾರದ ಅರ್ಥ, ಕೃಷಿ, ಮತ್ತು ವಾಣಿಜ್ಯ ಖಾತೆಯ ಸಚಿವರನ್ನು ಭೇಟಿ ಮಾಡಿದೆ.

ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್ ತೋಮರ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಅಡಿಕೆ ಬೆಳೆಗಾರ ಹಿತ ರಕ್ಷಣೆಗೆ ವಿದೇಶದಿಂದ ಆಮದಾಗುವ ಅಡಿಕೆ ಉತ್ಪನ್ನದ ಮೇಲೆ ನಿಯಂತ್ರಣ ಹೇರಬೇಕೆಂದು ಒತ್ತಾಯಿಸಿದೆ.

Home Minister Araga Jnanendra, state delegation requested center to increase the duty on the import of arecanut products

ರಾಜ್ಯದ ಅಡಿಕೆ ಬೆಳೆಗಾರರು ಕಷ್ಟದಲ್ಲಿದ್ದಾರೆ. ಅಡಿಕೆ ಮಲೆನಾಡು ಭಾಗದ ರೈತರ ಬದುಕಿಗೆ ನೆರವಾಗಿದೆ. ಹಾಗಾಗಿ, ಅಡಿಕೆ ಬೆಳೆಗಾರರ ಹಿತ ರಕ್ಷಿಸುವಂತೆ ನಿಯೋಗ ಮನವಿ ಮಾಡಿದೆ.

ಅಡಿಕೆ ಬೆಳೆಯ ನಿಗದಿತ ಉತ್ಪಾದನಾ ವೆಚ್ಚ ಹೆಚ್ಚು ಮಾಡಬೇಕು, ಆಮದು ಮೇಲಿನ ಸುಂಕ ಜಾಸ್ತಿ ಮಾಡಬೇಕು ಎಂಬ ಬೇಡಿಕೆಯೊಂದಿಗೆ ನವದೆಹಲಿಗೆ ಬಂದಿದ್ದೇವೆ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಜೊತೆಗೆ ಅಡಿಕೆ ಮೇಲಿನ ಜಿಎಸ್‌ಟಿ ದರದ ಬಗ್ಗೆಯೂ ಕೇಂದ್ರ ಸಚಿವರ ಬಳಿ ಚರ್ಚಿಸಿ, ಮನವಿ ಸಲ್ಲಿಸಲಾಗುವುದು ಎಂದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಜೀವರಾಜ್, ಬಿಜೆಪಿ ಶಾಸಕ ಹರತಾಳು ಹಾಲಪ್ಪ ಹಾಗೂ ಇನ್ನಿತರರು ನಿಯೋಗದಲ್ಲಿದ್ದಾರೆ.

English summary
Home Minister Araga Jnanendra and the state delegation has requested center to increase the duty on the import of arecanut products.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X