ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾ.ಸುಧಾಕರ್ ಗೆ ಹೊಸ ಜವಾಬ್ದಾರಿ: ರಾಜ್ಯ ಬಿಜೆಪಿ ಮುಖಂಡರಿಗೆ ವರಿಷ್ಠರ ಸ್ಪಷ್ಟ ಸಂದೇಶ

|
Google Oneindia Kannada News

ಆಪರೇಶನ್ ಕಮಲದ ಮೂಲಕ ಬಿಜೆಪಿಗೆ ಬಂದು ಸಚಿವರಾದವರಲ್ಲಿ ದಿನದಿಂದ ದಿನಕ್ಕೆ ಜನಪ್ರಿಯ ಪಡೆಯುತ್ತಿರುವವರಲ್ಲಿ ಡಾ.ಸುಧಾಕರ್ ಮೊದಲಿಗರು. ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ವೇಳೆಯಿಂದ, ಕೊರೊನಾ ನಿಯಂತ್ರಣದ ವಿಚಾರದಲ್ಲಿ ಸ್ಪಷ್ಟ ನಿಲುವನ್ನು ಹೊಂದಿದ್ದ ಸುಧಾಕರ್ ಅವರಿಗೆ ಆರೋಗ್ಯ ಇಲಾಖೆಯ ಜವಾಬ್ದಾರಿಯೂ ಸಿಕ್ಕಿತು. ಈಗ, ಬಿಜೆಪಿ ವರಿಷ್ಠರು ಮತ್ತೊಂದು ಜವಾಬ್ದಾರಿಯನ್ನು ನೀಡಿದ್ದಾರೆ.

ಯಡಿಯೂರಪ್ಪನವರ ಕ್ಯಾಬಿನೆಟ್ ನಲ್ಲಿ ಕೊರೊನಾ ನಿರ್ವಹಣೆಯ ವಿಚಾರವನ್ನು ಹಲವು ಸಚಿವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಬಹುತೇಕ ಇದರ ನಿರ್ವಹಣೆ ಆರೋಗ್ಯ ಇಲಾಖೆಯ ಸುಪರ್ದಿಗೆ ಬರುವಂತದ್ದು. ಆದರೂ, ಬೆಂಗಳೂರು ಮೂಲದ ಇಬ್ಬರು ಸಚಿವರುಗಳು ನಿರ್ವಹಣೆಯ ವಿಚಾರದಲ್ಲಿ ಸವಾರಿ ಮಾಡುತ್ತಿದ್ದರು.

ಕೆ. ಸುಧಾಕರ್‌ಗೆ ಮತ್ತೊಂದು ಜವಾಬ್ದಾರಿ ನೀಡಿದ ಬಿಜೆಪಿಕೆ. ಸುಧಾಕರ್‌ಗೆ ಮತ್ತೊಂದು ಜವಾಬ್ದಾರಿ ನೀಡಿದ ಬಿಜೆಪಿ

ಜೊತೆಗೆ, ಆರೋಗ್ಯ ಸಚಿವರಾಗಿದ್ದ ಶ್ರೀರಾಮುಲು ಕೊರೊನಾ ನಿರ್ವಹಣೆಯನ್ನು ನಿರೀಕ್ಷೆಗೆ ತಕ್ಕಂತೆ ನಿಭಾಯಿಸುವಲ್ಲಿ ಎಡವಿದ್ದರು ಕೂಡಾ. ಹಲವು ಸಚಿವರ ಮಧ್ಯಪ್ರವೇಶ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ನಡುವಿನ ಸಮನ್ವಯದ ಕೊರತೆ, ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು.

ಹಾವೇರಿ: 450 ಕೋಟಿ ರೂ. ವೆಚ್ಚದ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸಿಎಂ ಚಾಲನೆಹಾವೇರಿ: 450 ಕೋಟಿ ರೂ. ವೆಚ್ಚದ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸಿಎಂ ಚಾಲನೆ

ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಜೊತೆಗೆ ಆರೋಗ್ಯ ಇಲಾಖೆಯನ್ನು ಡಾ.ಸುಧಾಕರ್ ಅವರಿಗೆ ಸಿಎಂ ಯಡಿಯೂರಪ್ಪ ನೀಡಿದರು. ಸಂಪೂರ್ಣ ಜವಾಬ್ದಾರಿ ಸಿಕ್ಕ ನಂತರ ಕೊರೊನಾ ನಿರ್ವಹಣೆಯನ್ನು ಸರಿಯಾದ ದಾರಿಗೆ ತರುವಲ್ಲಿ ಯಶಸ್ವಿಯಾದರು ಕೂಡಾ. ಡಾ.ಸುಧಾಕರ್ ಗೆ ಹೊಸ ಜವಾಬ್ದಾರಿ: ರಾಜ್ಯ ಬಿಜೆಪಿಗೆ ವರಿಷ್ಥರ ಸ್ಪಷ್ಟ ಸಂದೇಶ, ಮುಂದೆ ಓದಿ...

ಡಾ.ಸುಧಾಕರ್ ಅವರನ್ನು ಸಹ ಉಸ್ತುವಾರಿಯನ್ನಾಗಿ ರಾಷ್ಟ್ರಾಧ್ಯಕ್ಷ ಜೆ.ಪಿ,ನಡ್ಡಾ ನೇಮಿಸಿದ್ದಾರೆ

ಡಾ.ಸುಧಾಕರ್ ಅವರನ್ನು ಸಹ ಉಸ್ತುವಾರಿಯನ್ನಾಗಿ ರಾಷ್ಟ್ರಾಧ್ಯಕ್ಷ ಜೆ.ಪಿ,ನಡ್ಡಾ ನೇಮಿಸಿದ್ದಾರೆ

ಇದರೆ ಜೊತೆಜೊತೆಗೆ, ಬಿಜೆಪಿ ಕೇಂದ್ರ ನಾಯಕರ ವಿಶ್ವಾಸವೃದ್ದಿಯನ್ನೂ ಸುಧಾಕರ್ ಮಾಡಿಕೊಂಡು ಬಂದರು. ಇದರ ಫಲ ಎನ್ನುವಂತೆ ಇವರಿಗೆ ಹೊಸ ಜವಾಬ್ದಾರಿ ಸಿಕ್ಕಿದ್ದು ಒಂದು ಕಡೆಯಾದರೆ, ರಾಜ್ಯ ಬಿಜೆಪಿ ನಾಯಕರಿಗೂ ಬಿಜೆಪಿ ಹೈಕಮಾಂಡ್ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಮುಂಬರುವ ಗ್ರೇಟರ್ ಹೈದರಾಬಾದ್ ಮಹಾನಗರಪಾಲಿಕೆ ಚುನಾವಣೆಗೆ ಡಾ.ಸುಧಾಕರ್ ಅವರನ್ನು ಸಹ ಉಸ್ತುವಾರಿಯನ್ನಾಗಿ ರಾಷ್ಟ್ರಾಧ್ಯಕ್ಷ ಜೆ.ಪಿ,ನಡ್ಡಾ ನೇಮಿಸಿದ್ದಾರೆ.

ಪ್ರಧಾನಿ ಮತ್ತು ಕೇಂದ್ರ ಗೃಹಸಚಿವರ ಸಭೆ

ಪ್ರಧಾನಿ ಮತ್ತು ಕೇಂದ್ರ ಗೃಹಸಚಿವರ ಸಭೆ

ಸುಧಾಕರ್ ಅವರು ಈ ಜವಾಬ್ದಾರಿಗೆ ಆಯ್ಕೆಯಾಗುವ ಮೂಲಕ, ಆಪರೇಶನ್ ಕಮಲದ ಮೂಲಕ ಪಕ್ಷಕ್ಕೆ ಆಗಮಿಸಿದ ಮುಖಂಡರೊಬ್ಬರನ್ನು ಪಕ್ಷದ ಸಂಘಟನಾ ಕೆಲಸಕ್ಕೆ ತೆಗೆದುಕೊಂಡ ಮೊದಲ ನಾಯಕರಾಗಿದ್ದಾರೆ. ಕೊರೊನಾ ನಿರ್ವಹಣೆಯ ಸಂದರ್ಭದಲ್ಲಿ ನಡೆಯುತ್ತಿದ್ದ ಪ್ರಧಾನಿ ಮತ್ತು ಕೇಂದ್ರ ಗೃಹಸಚಿವರ ಸಭೆಯ ವೇಳೆ, ಡಾ.ಸುಧಾಕರ್ ಮಂಡಿಸುತ್ತಿದ್ದ ಸಲಹೆಗಳು, ವರಿಷ್ಠರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಲಾಗುತ್ತಿದೆ.

ಡಾ.ಸುಧಾಕರ್ ಅವರಿಗೆ ತೆಲುಗು ಮತ್ತು ಇಂಗ್ಲಿಷ್ ಭಾಷೆಯ ಮೇಲಿನ ಹಿಡಿತ

ಡಾ.ಸುಧಾಕರ್ ಅವರಿಗೆ ತೆಲುಗು ಮತ್ತು ಇಂಗ್ಲಿಷ್ ಭಾಷೆಯ ಮೇಲಿನ ಹಿಡಿತ

ಡಾ.ಸುಧಾಕರ್ ಅವರಿಗೆ ಹೈದರಾಬಾದ್ ಚುನಾವಣೆಯ ನಿರ್ವಹಣೆಯ ಹಿಂದೆ ಅವರಿಗಿರುವ ತೆಲುಗು ಮತ್ತು ಇಂಗ್ಲಿಷ್ ಭಾಷೆಯ ಮೇಲಿನ ಹಿಡಿತ, ಅಲ್ಲಿನ ಪ್ರಮುಖ ರಾಜಕೀಯ ಮುಖಂಡರು ಒಡನಾಟ ಕಾರಣವಾಗಿರಬಹುದು. ಆದರೆ, ಈ ಆಯ್ಕೆಯ ಹಿಂದೆ, ಜೆ.ಪಿ.ನಡ್ಡಾ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.

Recommended Video

ಈ ಲಸಿಕೆ Americans ರಿಗೆ ಉಪಯೋಗ ಆಗತ್ತಾ? | Oneindia Kannada
ರಾಜ್ಯ ಬಿಜೆಪಿಗೆ ವರಿಷ್ಥರ ಸ್ಪಷ್ಟ ಸಂದೇಶ

ರಾಜ್ಯ ಬಿಜೆಪಿಗೆ ವರಿಷ್ಥರ ಸ್ಪಷ್ಟ ಸಂದೇಶ

ಕಾಂಗ್ರೆಸ್ ನಲ್ಲಿ ಬೇರೂರಿರುವ ಮೂಲ ಮತ್ತು ವಲಸೆ ಕಾಂಗ್ರೆಸ್ಸಿಗರ ಗಾಳಿ ಬಿಜೆಪಿಯಲ್ಲಿ ಬೀಸಬಾರದು ಎನ್ನುವ ಸಂದೇಶ, ಡಾ.ಸುಧಾಕರ್ ಆಯ್ಕೆಯ ಹಿಂದಿದೆ. ಮೂಲ ಬಿಜೆಪಿಗರು ಅಲ್ಲದೇ ಇದ್ದರೂ, ಪಕ್ಷಕ್ಕೆ ಬಂದ ಮೇಲೆ ಅವರು ನಮ್ಮ ಲೀಡರ್ ಗಳು. ಮೂಲ, ವಲಸಿಗರ ವಿಚಾರ ನಗಣ್ಯ ಎನ್ನುವ ಸಂದೇಶವನ್ನು ಬಿಜೆಪಿ ವರಿಷ್ಠರು ರವಾನಿಸಿದ್ದಾರೆ ಎನ್ನುವುದು ಸ್ಪಷ್ಟ.

English summary
Appointment Of Dr.Sudhakar For Greater Hyderabad Muncipal Corporation Election, A Clear Message To State BJP Leaders From BJP High Command
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X