ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೀಯೆಸ್ಸಾರ್ ಸ್ಮಾರಕ ಪ್ರಶಸ್ತಿ : ಅರ್ಜಿ ಆಹ್ವಾನ

|
Google Oneindia Kannada News

ಬೆಂಗಳೂರು, ಮೇ 22 : ಕರ್ನಾಟಕ ಸರ್ಕಾರ ನೀಡುವ ಟೀಯೆಸ್ಸಾರ್ ಸ್ಮಾರಕ ಪತ್ರಿಕ್ರೋದ್ಯಮ ಪ್ರಶಸ್ತಿ ಹಾಗೂ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗೆ ವಿವಿಧ ಪತ್ರಿಕಾ ಸಂಘಟನೆಗಳು ಹಾಗೂ ಮಾಧ್ಯಮ ಸಂಸ್ಥೆಗಳಿಂದ ಅರ್ಹ ಪತ್ರಕರ್ತರ ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿದೆ.

ಟೀಯೆಸ್ಸಾರ್ ಸ್ಮಾರಕ ಪ್ರಶಸ್ತಿಯನ್ನು ಕನ್ನಡ ಪತ್ರಿಕೋದ್ಯಮ ಕ್ಷೇತ್ರಕ್ಕೆ ಹಾಗೂ ಕನ್ನಡ ಭಾಷೆಗೆ ವಿಶಿಷ್ಟ ಕೊಡುಗೆ ನೀಡಿ, ಜೀವಮಾನದ ಸಾಧನೆ ಮಾಡಿದ ಪತ್ರಕರ್ತರಿಗೆ ನೀಡಲಾಗುತ್ತದೆ. ಕನಿಷ್ಠ ಮೂವತ್ತು ವರ್ಷ ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮ ಅಥವಾ ಈ ಎರಡೂ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದ ಪತ್ರಕರ್ತರನ್ನು ಪ್ರಶಸ್ತಿಗಾಗಿ ಪರಿಗಣಿಸಲಾಗುತ್ತದೆ.

Karnataka

ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಯನ್ನು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಯಾವುದೇ ಕನ್ನಡ ಪತ್ರಿಕೆಯನ್ನು ಅಥವಾ ಪತ್ರಿಕಾ ಸಮೂಹವನ್ನು ಕಟ್ಟಿ ಬೆಳೆಸಿದ ಹಾಗೂ ಪ್ರವೃತ್ತಿಯಲ್ಲಿ ಪತ್ರಕರ್ತರಾಗಿ ವೃತ್ತಿಯಲ್ಲಿ ಪತ್ರಿಕಾ ಸಮೂಹದ ಮಾಲೀಕರಾಗಿ, ಆಡಳಿತಗಾರರಾಗಿ ಕನಿಷ್ಠ 30 ವರ್ಷಗಳ ಅನುಭವ ಹೊಂದಿರುವವರನ್ನು ಪರಿಗಣಿಸಲಾಗುತ್ತದೆ.

ಯಾರನ್ನು ಪರಿಗಣಿಸುವುದಿಲ್ಲ : ಭಾರತೀಯ ಪತ್ರಿಕಾ ಮಂಡಳಿಯಿಂದ ಛೀಮಾರಿ ಅಥವಾ ದಂಡ ಹಾಕಿಸಿಕೊಂಡಲ್ಲಿ, ಯಾವುದೇ ಕ್ರಿಮಿನಲ್ ಅಪರಾಧದಲ್ಲಿ ಭಾಗಿಯಾಗಿದ್ದಲ್ಲಿ, ಅಂತಹ ಪತ್ರಕರ್ತರನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ ಹಾಗೂ ಮರಣೋತ್ತರ ಪ್ರಶಸ್ತಿಗೂ ಅವಕಾಶವಿರುವುದಿಲ್ಲ.

ಹೇಗೆ ಅರ್ಜಿ ಸಲ್ಲಿಸಬಹುದು : ಈ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸುವವರು ಅರ್ಹ ಪತ್ರಕರ್ತರ ಪರಿಚಯ, ಸಾಧನೆಯ ಮಾಹಿತಿಯನ್ನು ಶಿಫಾರಸು ಪತ್ರಗಳನ್ನು ಪತ್ರಿಕಾ ಸಂಘಟನೆಗಳು ಹಾಗೂ ಮಾಧ್ಯಮ ಸಂಸ್ಥೆಗಳು ನಿರ್ದೇಶಕರು, ವಾರ್ತಾ ಇಲಾಖೆ , ನಂ. 17, ಭಗವಾನ್ ಮಹಾವೀರ ರಸ್ತೆ, ವಾರ್ತಾ ಸೌಧ, ಬೆಂಗಳೂರು-560001 ಇವರಿಗೆ ಜೂನ್ 3, 2014ರೊಳಗೆ ಕಳುಹಿಸಬಹುದಾಗಿದೆ.

English summary
The Karnataka government invited applications for the TSR Memorial and Mohare Hanumantharaya Journalism awards. June 3 2014 is the last date for sending applications.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X