ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವಸ್ಥಾನಗಳ ಅರ್ಚಕರಿಂದ ಯಡಿಯೂರಪ್ಪಗೆ ಮನವಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 1: ಭಾರತ ಲಾಕ್‌ಡೌನ್ ಆಗಿರುವುದರಿಂದ ಎಲ್ಲಾ ದೇವಸ್ಥಾನಗಳು ಬಂದ್ ಆಗಿವೆ, ಇದರಿಂದ ಸುಮಾರು 1 ಲಕ್ಷ ಅರ್ಚಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅರ್ಚಕರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಅಳಲು ತೋಡಿಕೊಂಡಿದ್ದಾರೆ.

ಎಲ್ಲವೂ ಸಹಜ ಸ್ಥಿತಿಗೆ ಬರುವವರೆಗೆ ತಾತ್ಕಾಲಿಕ ಪರಿಹಾರ ನೀಡಬೇಕು ಎಂದು ಅರ್ಚಕರ, ಆಗಮೀಕರ ಒಕ್ಕೂಟ ಮುಖ್ಯಮಂತ್ರಿಗೆ ಮನವಿ ಮಾಡಿದೆ.

ಕೊರೊನಾ ಭೀತಿ: ಗೌರಿಬಿದನೂರಿನಲ್ಲಿ 1 ಸಾವಿರ ಮಂದಿಗೆ ಗೃಹದಿಗ್ಬಂಧನ ಕೊರೊನಾ ಭೀತಿ: ಗೌರಿಬಿದನೂರಿನಲ್ಲಿ 1 ಸಾವಿರ ಮಂದಿಗೆ ಗೃಹದಿಗ್ಬಂಧನ

ಲಾಕ್‌ಡೌನ್ ಕೊನೆಗೊಂಡು ದೇವಸ್ಥಾನಗಳು ಮತ್ತೆ ಎಂದಿನಂತೆ ಕಾರ್ಯಾಚರಣೆಗೊಳ್ಳುವವರೆಗೆ ತಾತ್ಕಾಲಿಕ ಪರಿಹಾರ ನೀಡಬೇಕು ಎಂದು ಅವರು ಕೇಳಿಕೊಂಡಿದ್ದಾರೆ.

Appeal To Yediyurappa By Priests Of Temples

ಕೊರೊನಾ ಭೀತಿಯಿಂದಾಗಿ ಮುಜರಾಯಿ ಇಲಾಖೆಗೆ ಒಳಪಟ್ಟ ಸಿ ದರ್ಜೆಯ 35 ಸಾವಿರ ದೇವಸ್ಥಾಗಳ ಬಾಗಿಲು ಮುಚ್ಚಲಾಗಿದೆ. ಇಲ್ಲಿ 1 ಲಕ್ಷ ಅರ್ಚಕರು ಕೆಲಸ ಮಾಡುತ್ತಿದ್ದು, ಅವರು ಜೀವನ ನಡೆಸುವುದೇ ಕಷ್ಟವಾಗಿದೆ.

ಅರ್ಚಕರು ಹಾಗೂ ಅವರ ಕುಟುಂಬದ ಜೀವನ ನಿರ್ವಹಣೆಗೆ ಸರ್ಕಾರ ನೆರವು ನೀಡಬೇಕು ಎಂದು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ-ಆಗಮೀಕರ ಮತ್ತು ಉಪಾಧಿವಂತ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಕೆಎಸ್ಎನ್ ದೀಕ್ಷಿತ್ ಮನವಿ ಸಲ್ಲಿಸಿದ್ದಾರೆ.

English summary
Appeal to Yediyurappa by Priests of Temples Temporary relief must be provided until everything is normal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X