• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾದಿಗರ ಬೇಡಿಕೆ ವಿರುದ್ಧ ಮೀಸಲಾತಿ ಒಕ್ಕೂಟದ ಪ್ರತಿ ಚಳವಳಿ

|

ಬೆಂಗಳೂರು, ಅಕ್ಟೋಬರ್ 6:ಕರ್ನಾಟಕ ಮೀಸಲಾತಿ ರಕ್ಷಣಾ ಒಕ್ಕೂಟವು ನ್ಯಾ. ಎಜೆ ಸದಾಶಿವ ವರದಿಯನ್ನು ಜಾರಿಗೊಳಿಸದಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಸಲುವಾಗಿ ಅಕ್ಟೋಬರ್ 15 ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಪ್ರತಿ ಚಳವಳಿಯನ್ನು ಹಮ್ಮಿಕೊಳ್ಳಲು ಮುಂದಾಗಿದ್ದಾರೆ.

ಸದಾಶಿವ ವರದಿ: ಸಿದ್ದರಾಮಯ್ಯ ಮೊರೆ ಹೋಗಲು ಮಾದಿಗರ ತೀರ್ಮಾನ

ಜತೆಗೆ ನವೆಂಬರ್ ಮೊದಲ ವಾರ ಬೆಂಗಳೂರಲ್ಲಿ ಬೃಹತ್ ಏಕತಾ ಸಮಾವೇಶ ನಡೆಸಿ ಲಕ್ಷಾಂತರ ಜನರನ್ನು ಸಂಘಟಿಸಲು ನಿರ್ಧರಿಸಿದೆ. ಒಳ ಮೀಸಲಾತಿ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಮಾದಿಗ ದಂಡೋರ ಸಮುದಾಯ ಒತ್ತಾಯಿಸುತ್ತಿರುವ ಬೆನ್ನಲ್ಲೇ ಅದರ ವಿರುದ್ಧವಾಗಿ ಒಕ್ಕೂಟವು ಪ್ರತಿಭಟನೆ ಹಮ್ಮಿಕೊಂಡಿದೆ.

ಸದಾಶಿವ ಆಯೋಗ ವರದಿ ಭವಿಷ್ಯ ಜ14ಕ್ಕೆ ನಿರ್ಧಾರ?

ಸದಾಶಿವ ಆಯೋಗ ವರದಿ ಜಾರಿಗೆ ಒತ್ತಾಯಿಸಿ ಸಚಿವರ ಮನೆಗಳಿಗೆ ಮುತ್ತಿಗೆ

ಈ ನಡುವೆ, ಆಯೋಗದ ವರದಿಯನ್ನು ಬಹಿರಂಗಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಅಕ್ಟೋಬರ್ 15ರಂದು ಚಳವಳಿ ನಡೆಸಲಾಗುತ್ತಿದೆ.ಸದನದಲ್ಲಿ ವರದಿ ಬಗ್ಗೆ ವಿಸ್ತೃತ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ. ಒಂದೇ ಒಂದು ವರ್ಗ ವರದಿ ಅನುಷ್ಠಾನಕ್ಕೆ ಹುನ್ನಾರ ನಡೆಸಲಾಗುತ್ತಿದೆ. ವರದಿಯೇ ಬಹಿರಂಗಗೊಳ್ಳದಿರುವಾಗ ಇದರಲ್ಲಿ ಯಾರಿಗೆ ಲಾಭ, ನಷ್ಟ ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದಿದ್ದಾರೆ.

English summary
Karnataka reservation protection forum has decided to launch district wise rallies against implementation of Sadashiva commission report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X