ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಅನರ್ಹರನ್ನು ಬಿಟ್ಟು, ಮತ್ಯಾರು ಸೇರಲಿದ್ದಾರೆ ಯಡಿಯೂರಪ್ಪ ಸಂಪುಟ?

|
Google Oneindia Kannada News

ಬೆಂಗಳೂರು, ಡಿಸೆಂಬರ್ 11; ಅಂತೂ ಉಪ ಚುನಾವಣೆ ಮುಗಿದು ರಾಜ್ಯದಲ್ಲಿ ಬಿ ಎಸ್ ಯಡಿಯೂರಪ್ಪ ಅವರ ಸ್ಥಿರ ಸರ್ಕಾರ ನೆಲೆಯೂರಿದೆ. ಚುನಾವಣೆಗೆ ಮುನ್ನ ಅನರ್ಹರಾಗಿದ್ದ 17 ಶಾಸಕರಲ್ಲಿ 12 ಶಾಸಕರು ಈಗ ಅರ್ಹರಾಗಿದ್ದಾರೆ. ಇವರೆಲ್ಲ ಈಗ ಸಚಿವರಾಗಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಹೊಸ ಅರ್ಹ ಶಾಸಕರ ಜೊತೆ ಬಿಜೆಪಿಯಲ್ಲಿ ಘಟನಾನುಘಟಿ ನಾಯಕರು ಕೂಡ ಸಚಿವ ಸಂಪುಟ ಸೇರಬೇಕು ಎಂದು ತೀವ್ರ ಪ್ರಯತ್ನ ನಡೆಸಿದ್ದಾರೆ. ಆದರೆ, ವಲಸೆ ಹಕ್ಕಿಗಳಿಗೆ 10 ರಿಂದ 15 ಸಚಿವ ಸ್ಥಾನ ನೀಡಬೇಕಾಗಿ ಬಂದಿರುವುದರಿಂದ ಮೂಲ ಬಿಜೆಪಿ ಹಿರಿ ತಲೆಗಳು ತಲೆ ಕೆರೆದುಕೊಳ್ಳುತ್ತಿವೆ. ಹೀಗಾಗಿ ಕೆಲವರು ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಸುಮ್ಮನಿದ್ದರೆ, ಕೆಲ ಬಿಜೆಪಿ ಹಿರಿಯ ಶಾಸಕರು ಹಾಗೂ ಯಡಿಯೂರಪ್ಪ ನಿಷ್ಠರು ಸಂಪುಟ ವಿಸ್ತರಣೆಯಲ್ಲಿ ಅವಕಾಶ ಪಡೆಯಲು ಲಾಬಿ ನಡೆಸಿದ್ದಾರೆ.

ವಲಸೆ ಹಕ್ಕಿಗೆಗಳಿಗೆ ಮನ್ನಣೆ

ವಲಸೆ ಹಕ್ಕಿಗೆಗಳಿಗೆ ಮನ್ನಣೆ

ಸದ್ಯ ಬಿಜೆಪಿ ಓಡುವ ಕುದುರೆಯಾಗಿರುವುದರಿಂದ
ಘಟಾನುಘಟಿನಾಯಕರು ಬಿಜೆಪಿಯಲ್ಲಿ ನೆಲೆ ಕಂಡುಕೊಂಡಿದ್ದಾರೆ. 2018 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆದುಕೊಂಡಿದ್ದರೆ, ಈಗ ಬಂದಿರುವ ವಲಸೆ ಹಕ್ಕಿಗಳಿಗೆ ಸ್ಥಾನಗಳನ್ನು ಬಿಟ್ಟು ಕೊಡುವ ಅವಶ್ಯಕತೆ ಬರುತ್ತಿರಲಿಲ್ಲ. ಹೀಗಾಗಿ ಸಚಿವ ಸ್ಥಾನಕ್ಕೆ ಅರ್ಹರಾದವರು ಸುಮ್ಮನೆ ಕುಳಿತಿದ್ದಾರೆ.

ಅಶ್ಲೀಲ ವಿಡಿಯೊ ನಕಲಿ, ಸಂಪುಟ ಸೇರಲು ಸಜ್ಜಾದ ಲಿಂಬಾವಳಿಅಶ್ಲೀಲ ವಿಡಿಯೊ ನಕಲಿ, ಸಂಪುಟ ಸೇರಲು ಸಜ್ಜಾದ ಲಿಂಬಾವಳಿ

ಐವರ ತೀವ್ರ ಪ್ರಯತ್ನ

ಐವರ ತೀವ್ರ ಪ್ರಯತ್ನ

ಕಚ್ಚಾ ರಸ್ತೆ ಬಿಟ್ಟು ಹೆದ್ದಾರಿಗೆ ಬಂದಿರುವ ಬಿ ಎಸ್ ಯಡಿಯೂರಪ್ಪ ಸಚಿವ ಸಂಪುಟ ಸೇರಲು ಬಿಜೆಪಿಯ ಕೆಲ ಹಿರಿಯ ಶಾಸಕರು ತೀವ್ರ ಲಾಬಿ ನಡೆಸಿದ್ದಾರೆ. ಅರವಿಂದ ಲಿಂಬಾವಳಿ, ಮುರುಗೇಶ ನಿರಾಣಿ, ಸಿ.ಪಿ.ಯೋಗಿಶ್ವರ, ಉಮೇಶ ಕತ್ತಿ, ರಾಜುಗೌಡ ಅವರು ಸಂಪುಟ ಸೇರಲೇಬೇಕು ಎಂದು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಇದಕ್ಕೆ ಯಡಿಯೂರಪ್ಪ ಕೂಡ ಮನಸ್ಸು ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಇವರ ಜೊತೆ ಮಾಜಿ ಶಾಸಕ ಸಿ.ಪಿ.ಯೋಗಿಶ್ವರ ಸಂಪುಟ ಸೇರಬಹುದು ಎಂದು ನಿರೀಕ್ಷಿಸಲಾಗಿದೆ.

ಇವರೇ ಏಕೆ?

ಇವರೇ ಏಕೆ?

ಅಲ್ಪಮತದಿಂದ ಬಹುಮತಕ್ಕೆ ಬಂದು ಸ್ಥಿರ ಸರ್ಕಾರ ರಚಿಸಿಲು ಬಿಜೆಪಿ ಸಾಕಷ್ಟು ಬೆವರು ಹರಿಸಿದೆ. ಇದಕ್ಕೆ ಬಿಜೆಪಿಯ ಅರವಿಂದ ಲಿಂಬಾವಳಿ, ಉಮೇಶ ಕತ್ತಿ ಕೂಡ ಸಾಕಷ್ಟು ದುಡದಿದ್ದಾರೆ. ಇದರ ಜೊತೆ ಜೆಡಿಎಸ ಶಾಸಕರನ್ನು ಬಿಜೆಪಿಗೆ ಕರೆತರಲು ಮಾಜಿ ಶಾಸಕ ಸಿ.ಪಿ.ಯೋಗಿಶ್ವರ ಕೂಡ ಸಾಕಷ್ಟು ಸಹಾಯ ಮಾಡಿದ್ದಾರೆ. ಇನ್ನು, ಮುರುಗೇಶ ನಿರಾಣಿ, ರಾಜುಗೌಡ ಹಿರಿಯ ಶಾಸಕರಾಗಿದ್ದು, ಯಡಿಯೂರಪ್ಪ ಅವರಿಗೆ ಆಪ್ತರಾಗಿದ್ದಾರೆ. ಲಿಂಗಾಯಿತ ಪಂಚಮಸಾಲಿ ಮುಖಂಡ ಮುರುಗೇಶ ನಿರಾಣಿ ಬೆಂಬಲವಾಗಿ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮಿ ಅವರು ಬ್ಯಾಟಿಂಗ್ ಮಾಡುತ್ತಿದ್ದಾರೆ. ಮೊನ್ನೆಯ ಉಪ ಚುನಾವಣೆಯಲ್ಲಿ ರಾಣೆಬೆನ್ನೂರು ಹಾಗೂ ಹಿರೇಕೆರೂರು ಬಿಜೆಪಿ ವಶವಾಗಲು ವಚನಾನಂದ ಸ್ವಾಮಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗುತ್ತಿದೆ. ಏಕೆಂದರೆ ಈ ಎರಡೂ ಕ್ಷೇತ್ರಗಳಲ್ಲಿ ಪಂಚಮಸಾಲಿ ಮತಗಳು ನಿರ್ಣಾಯಕವಾಗಿದ್ದವು.

ಸಚಿವ ಸ್ಥಾನ ಆಕಾಂಕ್ಷಿಗಳಿಂದ ಸಿಎಂ ಭೇಟಿ: ಗರಿಗೆದರಿದ ರಾಜ್ಯ ರಾಜಕೀಯಸಚಿವ ಸ್ಥಾನ ಆಕಾಂಕ್ಷಿಗಳಿಂದ ಸಿಎಂ ಭೇಟಿ: ಗರಿಗೆದರಿದ ರಾಜ್ಯ ರಾಜಕೀಯ

ಸಂಪುಟ ವಿಸ್ತರಣೆ ಯಾವಾಗ

ಸಂಪುಟ ವಿಸ್ತರಣೆ ಯಾವಾಗ

ಯಡಿಯೂರಪ್ಪ ಸಂಪುಟ ಸೇರಲು ಆಕಾಂಕ್ಷಿಗಳು ಹೇಗೆ ತುದಿಗಾಲ ಮೇಲೆ ನಿಂತಿದ್ದಾರೊ ಹಾಗೇ ಯಡಿಯೂರಪ್ಪ ಕೂಡ ಪೂರ್ಣಪ್ರಮಾಣದ ಕ್ಯಾಬಿನೆಟ್ ರಚಿಸಿ ಆಡಳಿತಕ್ಕೆ ಚುರುಕು ಮುಟ್ಟಿಸಲು ಅಣಿಯಾಗಿದ್ದಾರೆ. ಸದ್ಯ ಝಾರ್ಖಂಡ್ ಚುನಾವಣೆ ನಡೆಯುತ್ತಿದ್ದು ಇದು ಮುಗಿದ ಮೇಲೆ ಡಿಸೆಂಬರ್ 20 ರ ನಂತರ ಸಂಪುಟ ವಿಸ್ತರಣೆ ಆಗಬಹುದು ಎನ್ನಲಾಗುತ್ತಿದೆ.

English summary
BJPs five senior MLAs serious trying to ministerdhip in c m yadiyurappa cabinet. Aravind Limbavali, Murugesh Nirani,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X