ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನ್ನಭಾಗ್ಯಕ್ಕೆ ಕತ್ತರಿ: 7 ಕೆ.ಜಿ ಯಿಂದ 5 ಕೆ.ಜಿ ಗೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 23: ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡುದಾರರಿಗೆ ನೀಡುವ ಅನ್ನಭಾಗ್ಯದ ಅಕ್ಕಿಯಲ್ಲಿ ಪೌಷ್ಟಿಕಾಂಶದ ಕೊರತೆ ಇರುವ ಕಾರಣ, 7 ಕೆ.ಜಿ ಅಕ್ಕಿಯ ಬದಲು 5 ಕೆ.ಜಿ ಗೆ ಇಳಿಸಲು ಸರ್ಕಾರ ನಿರ್ಧರಿಸಿದೆ.

ಅನ್ನಭಾಗ್ಯದಲ್ಲಿ ಅಕ್ಕಿಯಿಂದ ಪಡಿತರದಾರರಿಗೆ ಅವಶ್ಯಕ ಪೌಷ್ಟಿಕಾಂಶ ಸಿಗುವುದಿಲ್ಲ ಹಾಗಾಗಿ 5 ಕೆ.ಜಿ ಅಕ್ಕಿಯ ಜೊತೆ ಗೋಧಿ ನೀಡಲು ಸರ್ಕಾರ ನಿರ್ಧರಿಸಿತ್ತು.

ಅನ್ನಭಾಗ್ಯ ರದ್ದುಪಡಿಸುವುದಿಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟನೆಅನ್ನಭಾಗ್ಯ ರದ್ದುಪಡಿಸುವುದಿಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟನೆ

ಆದರೆ ಈಗ ಗೋಧಿ ಬದಲು 1 ಕೆ.ಜಿ ತೊಗರಿ ಬೇಳೆ ನೀಡಲು ಸರ್ಕಾರ ನಿರ್ಧರಿಸಿದೆ. ಸದ್ಯ ಮಾರುಕಟ್ಟೆಯಲ್ಲಿ ತೊಗರಿ ಬೇಳೆ 1 ಕೆ.ಜಿ ಗೆ 80 ರುಪಾಯಿ ಇದೆ. ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಕೆ.ಜಿ ಗೆ 38 ರೂ, ನಿಗದಿ ಪಡಿಸಲು ತಯಾರಿ ನಡೆದಿದೆ.

Annabhagya Project: Government Decide To Cut 2 KG Rice

ಸಿದ್ದರಾಮಯ್ಯ ಯೋಜನೆಗಳಿಗೆ ಯಡಿಯೂರಪ್ಪ ಕತ್ತರಿಸಿದ್ದರಾಮಯ್ಯ ಯೋಜನೆಗಳಿಗೆ ಯಡಿಯೂರಪ್ಪ ಕತ್ತರಿ

ಅನ್ನಭಾಗ್ಯ ಯೋಜನೆಗೆ ಕತ್ತರಿ ಹಾಕುವ ಕುರಿತು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಲ್ಲಿ ಚಿಂತನೆ ನಡೆದಿದೆ. ಸದ್ಯ 7 ಕೆ.ಜಿ ಅಕ್ಕಿ ಕೊಡುತ್ತದ್ದಾರೆ. ಮಾಸಿಕ ವಿತರಣೆಗೆ 13 ಸಾವಿರ ಟನ್ ತೊಗರಿ ಬೇಳೆ ಅವಶ್ಯಕ ಇದ್ದು, ಪಡಿತರದಾರರಿಗೆ ರಿಯಾಯ್ತಿ ದರದಲ್ಲಿ 1 ಕೆ.ಜಿ ನೀಡಲು ನಿರ್ಧಾರ ಮಾಡಲಾಗಿದೆ.

English summary
Due to lack of nutrition in rice, the government has decided to reduce it to 5 kg instead of 7 kg.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X