ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ಣಾ ಕ್ಯಾಂಟೀನ್ : 5 ರೂ.ಗೆ ಐದು ಇಡ್ಲಿ, ಉಪ್ಪಿಟ್ಟು, ಚಿತ್ರಾನ್ನ!

|
Google Oneindia Kannada News

ಬೆಂಗಳೂರು, ಫೆ.4 : ಹಟ್ಟಿ ಭಾಗ್ಯ, ಅಣ್ಣ ಇಡ್ಲಿ, ಅಣ್ಣ ತಾರುಣ್ಯ ಆರೋಗ್ಯ ಯೋಜನೆ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಂತೆ ರಾಜ್ಯ ಯೋಜನಾ ಮಂಡಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿಫಾರಸು ಮಾಡಲು ಮುಂದಾಗಿದೆ.

ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷರಾದ ಸಿ.ಎಂ. ಇಬ್ರಾಹಿಂ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಮಂಗಳವಾರ ನಡೆದ ರಾಜ್ಯ ಯೋಜನಾ ಮಂಡಳಿಯ ಸಭೆಯ ಬಳಿಕ ಮಾತನಾಡಿದ ಅವರು, ಸರ್ಕಾರವು ಜನಪರವಾದ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳ ಕುರಿತಂತೆ ಕೈಗೊಳ್ಳಬಹುದಾದ ಹೊಸ ಯೋಜನೆಗಳ ಬಗ್ಗೆ ಶಿಫಾರಸು ಮಾಡಲು ತೀರ್ಮಾನಿಸಿದೆ ಎಂದರು. [ರಾಜ್ಯದ ಜನರಿಗೆ 10 ರೂ.ಲಾಟರಿ ಭಾಗ್ಯ?]

Anna Canteen

ಅಣ್ಣ ಇಡ್ಲಿ : ಈ ಯೋಜನೆಯಡಿ 5 ರೂ.ಗೆ 5 ಇಡ್ಲಿ, ಉಪ್ಪಿಟ್ಟು , ಚಿತ್ರಾನ್ನ, ಪುಳಿಯೊಗರೆ, ಮೊಸರನ್ನ ನೀಡುವ ಪ್ರಾಯೋಗಿಕವಾಗಿ ಯೋಜನೆಯನ್ನು ಜಾರಿಗೊಳಿಸಬಹುದಾಗಿದೆ. ಮೊದಲು ಬೆಂಗಳೂರಿನಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿ ನಂತರ ಮೈಸೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರು ಹಾಗೂ ಕಲಬುರಗಿ ನಗರಗಳಿಗೆ ವಿಸ್ತರಿಸಲಾಗುವುದು ಎಂದರು. ['ಅಮ್ಮಾ ಇಡ್ಲಿ' ಮೇಲೆ ಸಿ.ಎಂ.ಇಬ್ರಾಹಿಂ ಕಣ್ಣು]

ಹಟ್ಟಿ ಭಾಗ್ಯ : ಬುಡಕಟ್ಟು ಜನರ ಆರ್ಥಿಕ ಅಭಿವೃದ್ಧಿ ಮಹಿಳಾ ಸಬಲೀಕರಣ ಹಾಗೂ ಸಾಲದ ಮೇಲಿನ ಸಹಾಯಧನ, ಬಡ್ಡಿ ನೀಡುವ ಸಲುವಾಗಿ ಹಟ್ಟಿ ಭಾಗ್ಯ ಯೋಜನೆಯನ್ನು ಜಾರಿಗೊಳಿಸುವಂತೆ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು. ಈ ಯೋಜನೆಯಿಂದಾಗಿ 8 ರಿಂದ 9 ಲಕ್ಷ ಜನರಿಗೆ ಉಪಯೋಗವಾಗಲಿದೆ ಎಂದು ತಿಳಿಸಿದರು.

ಎಪಿಎಲ್ ಕಾರ್ಡ್‌ ಕೊಡುಗೆ : ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಜನರಿಗೆ 'ಅನ್ನಭಾಗ್ಯ' ಯೋಜನೆ ಜಾರಿಯಲ್ಲಿದೆ. ಅದರಂತೆ, ಎಪಿಎಲ್ ಕಾರ್ಡುದಾರರಿಗೆ ತಿಂಗಳಿಗೆ 15 ಕೆಜಿ ಅಕ್ಕಿ, ಎಣ್ಣೆ, ಬೆಳೆ, ಐಯೋಡೈಸ್ಡ್ ಉಪ್ಪನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ ಎಂದು ಇಬ್ರಾಹಿಂ ಹೇಳಿದರು.

ಅಣ್ಣ ತಾರುಣ್ಯ ಆರೋಗ್ಯ ಯೋಜನೆ : ದೀರ್ಘ‌ಕಾಲೀನ ಮಾರಕ ರೋಗಗಳಿಂದ ಬಳಲುತ್ತಿರುವ ಮಧ್ಯಮ ವರ್ಗ ಹಾಗೂ ಬಡ ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರಕಿಸಿಕೊಡಲು ಸಂಪನ್ಮೂಲ ಕ್ರೋಢೀಕರಣ ಮಾಡುವ ಉದ್ದೇಶದಿಂದ ಲಾಟರಿಯನ್ನು ಪುನಃ ಆರಂಭಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಈ ಯೋಜನೆಗೆ 'ಅಣ್ಣ ತಾರುಣ್ಯ ಆರೋಗ್ಯ ಯೋಜನೆ' ಎಂದು ನಾಮಕರಣ ಮಾಡಲಾಗುತ್ತದೆ ಎಂದರು.

English summary
Deputy Chairman of Karnataka Planning Board C.M. Ibrahim suggests 'Anna' canteens in State. Food outlets that serve hot idlis, upma and rice dishes for just Rs 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X