ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬೈ ಕುರಿಗಾಹಿಯನ್ನು ಹುಟ್ಟೂರಿಗೆ ಕರೆ ತಂದ ಅನ್ನಭಾಗ್ಯ

By Ashwath
|
Google Oneindia Kannada News

ಅನ್ನ ಸಂಸ್ಕೃತಿ, ದಾಸೋಹ ಮಾನವೀಯ ಪರಂಪರೆಯನ್ನು ಜಗತ್ತಿಗೆ ಸಾರಿದ ಬಸವಣ್ಣನವರ ಕರ್ಮಭೂಮಿ ವಿಜಾಪುರದಲ್ಲಿ ಅನ್ನಭಾಗ್ಯ ಯೋಜನೆಯು ಹಸಿದವರ ಬದುಕಿನಲ್ಲಿ ನೆಮ್ಮದಿಯನ್ನು ತಂದಿದೆ.

ಪಂಚ ನದಿಗಳ ನಾಡು, ಕರ್ನಾಟಕದ ಪಂಜಾಬ್ ಎಂದೇ ಖ್ಯಾತಿಗಳಿಸಿದ ಅಪ್ಪಟ ಕೃಷಿಕರ ಜಿಲ್ಲೆ ವಿಜಾಪುರ. ಆದರೆ ಮಳೆಯ ಕೊರತೆಯಿಂದಾಗಿ ಜಿಲ್ಲೆಯ ರೈತರ, ಕೃಷಿ ಕಾರ್ಮಿಕರ ಬದುಕನ್ನು ಹೈರಾಣಾಗಿಸಿತ್ತು. ಸತತ ಬರದಿಂದ ತತ್ತರಿಸಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ಗುಳೆ ಹೋಗುತ್ತಿದ್ದ ಜನರಿಗೆ ಸರ್ಕಾರದ ಅನ್ನಭಾಗ್ಯ ಯೋಜನೆ ಕೊಂಚ ನೆಮ್ಮದಿ ನೀಡಿದೆ.[ಮದ್ದೂರು ಲಕ್ಷ್ಮಮ್ಮನ ಹಸಿವು ನೀಗಿದ ಅನ್ನಭಾಗ್ಯ]

ತಮ್ಮ ತಮ್ಮ ಹುಟ್ಟೂರಲ್ಲೇ ನೆಲೆ ಕಂಡುಕೊಳ್ಳಲು ಗುಳೆ ಹೋದ ಜನರಲ್ಲಿ ಶಕ್ತಿ ತುಂಬಿದೆ. ಹೊರ ರಾಜ್ಯಗಳಲ್ಲಿ ಬದುಕಿನ ನೆಲೆ ಹುಡುಕಿ ಹೊರಟವರನ್ನು ಮರಳಿ ತಾಯ್ನಾಡಿಗೆ ಕರೆತರಲು ಯಶಸ್ವಿಯಾಗಿದೆ.

 ದುಬೈ ಕುರಿಗಾಹಿಯನ್ನು ಹುಟ್ಟೂರಿಗೆ ಕರೆ ತಂದ ಅನ್ನಭಾಗ್ಯ

ದುಬೈ ಕುರಿಗಾಹಿಯನ್ನು ಹುಟ್ಟೂರಿಗೆ ಕರೆ ತಂದ ಅನ್ನಭಾಗ್ಯ

ಅನ್ನಭಾಗ್ಯದಿಂದಾಗಿ ಕುರಿಗಾಹಿಯೊಬ್ಬನ ಬದುಕು ಬದಲಾಗಿದೆ. ಯೋಗಾಪುರದ ನಬಿಲಾಲ ಬಂದಗಿಸಾಬ ಅವರ ಮನೆಯಲ್ಲಿ ಏಳು ಜನ ಸದಸ್ಯರಿದ್ದಾರೆ. ಸ್ಥಳೀಯವಾಗಿ ದೊರೆಯುವ ಕೂಲಿಯಿಂದ ಸಂಸಾರ ನಿರ್ವ‌ಹಣೆ ಕಷ್ಟ ಎಂದ ಅವರು ಕುರಿ ಕಾಯಲು ದುಬೈಗೆ ಉದ್ಯೋಗಕ್ಕಾಗಿ ತೆರಳಿದ್ದರು.

ದುಬೈಯಲ್ಲಿ ಉದ್ಯೋಗ ನಡೆಸಿ, ಇಲ್ಲಿ ನೆಲೆಸಿರುವ ಕುಟುಂಬದವರ ಬೇಡಿಕೆಗಳನ್ನು ಈಡೇರಿಸುತ್ತಿದ್ದರು. ಹುಟ್ಟೂರು ತೊರೆದ ಇವರಿಗೆ ವಿದೇಶಿ ಹಣ ನೆಮ್ಮದಿಯ ಬದಲು ಅನಾಥಪ್ರಜ್ಞೆಯನ್ನು ಹೆಚ್ಚಿಸಿತು.

ಕೆಲಸಕ್ಕೆ ರಜೆ ಪಡೆದು ಊರಿಗೆ ಬಂದಾಗ, ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಒಂದು ರೂ.ಗೆ ಒಂದು ಕೆ.ಜಿ. ಅಕ್ಕಿ ನೀಡುವುದನ್ನು ಕಂಡು ಅರ್ಥಶಾಸ್ತ್ರ ಪರಿಣಿತನಂತೆ ಲೆಕ್ಕ ಹಾಕಿದ ಇವರುಸ್ಥಳೀಯವಾಗಿಯೇ ದುಡಿದರೆ ನೆಮ್ಮದಿಯಿಂದ ಬದುಕಬಹುದೆಂದು ಅರಿತು, ಇಲ್ಲಿಯೇ ಕೆಲಸ ಮಾಡಲು ಇದೀಗ ಮುಂದಾಗಿದ್ದಾರೆ.

 ರೇಷನ್‌ಗೆ ಸಾಕಾಗುತ್ತಿರಲಿಲ್ಲ:

ರೇಷನ್‌ಗೆ ಸಾಕಾಗುತ್ತಿರಲಿಲ್ಲ:

"ಅನ್ನಭಾಗ್ಯ ಯೋಜನೆ ಜಾರಿಗೊಳ್ಳುವ ಮುನ್ನ ಇಲ್ಲಿ ದುಡಿದ ಕೂಲಿ ನಮ್ಮ ಕುಟುಂಬದ ರೇಶನ್‍ಗೆ ಸಾಕಾಗುತ್ತಿರಲಿಲ್ಲ. ಮಹಾರಾಷ್ಟ್ರದ ಇಸ್ಲಾಂಪುರ, ಸಾಂಗ್ಲಿಗೆ ಗುಳೆ ಹೋಗುತ್ತಿದ್ದೇವು.
ಮಕ್ಕಳ ಸ್ಕೂಲು ದೂರದ ಮಾತಾಗಿತ್ತು ಅನ್ನಭಾಗ್ಯದಿಂದಾಗಿ ಈಗ ಊರಲ್ಲೇ ಕೆಲಸ ಮಾಡುತ್ತಿದ್ದೇವೆ."

ಅಮೋಘಲಕ್ಷ್ಮಣ, ಇಂಡಿ ತಾಲೂಕಿನ ಸಾತಕೂರಿನಕೂಲಿ ಕಾರ್ಮಿಕ

 ಅನ್ನಭಾಗ್ಯ ನಮ್ಮ ಬಾಳಿನ ನೆಮ್ಮದಿಯ ಭಾಗ್ಯ:

ಅನ್ನಭಾಗ್ಯ ನಮ್ಮ ಬಾಳಿನ ನೆಮ್ಮದಿಯ ಭಾಗ್ಯ:

"ಕೆಲಸಕ್ಕಾಗಿ ಮನೆಯ ಹಿರಿಯರನ್ನು ಊರಲ್ಲೇ ಬಿಟ್ಟು ಮಕ್ಕಳೊಂದಿಗೆ ದೂರದ ಊರಿನಲ್ಲಿ ಆತಂಕದಿಂದ ದುಡಿಯುತ್ತ್ತಿದ್ದೇವು. ರಾತ್ರಿ ನಿದ್ದೆ ಇರುತ್ತಿರಲಿಲ್ಲ. ಮಕ್ಕಳ ಕಲಿಕೆಯಿಂದ ವಂಚಿತರಾಗುತ್ತಿದ್ದರು. ನಿಜ ಹೇಳಬೇಕಾದರೆ ಅನ್ನಭಾಗ್ಯ ನಮ್ಮ ಬಾಳಿನ ನೆಮ್ಮದಿಯ ಭಾಗ್ಯವನ್ನು ತಂದು ಕೊಟ್ಟಿದೆ."
ಯಲ್ಲಪ್ಪ, ಮುದ್ದೇಬಿಹಾಳ ತಾಲೂಕಿನ ಚೆಲುವಿ ತಾಂಡಾ ಕೃಷಿ ಕಾರ್ಮಿಕ

 ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಸಂಖ್ಯೆ:

ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಸಂಖ್ಯೆ:

ಜಿಲ್ಲೆಯಲ್ಲಿ 3,53,871 ಕುಟುಂಬಗಳಿಗೆ ಅನ್ನಭಾಗ್ಯದಡಿ ನೆರವು ಒದಗಿಸಲಾಗುತ್ತಿದೆ. ಪ್ರತಿ ತಿಂಗಳು 7081941 ಮೆಟ್ರಿಕ್ ಟನ್ ಅಕ್ಕಿ, 3152172 ಮೆಟ್ರಿಕ್ ಟನ್ ಗೋಧಿ, 3353871 ಕೆ.ಜಿ. ಪಡಿತರ ಸಕ್ಕರೆಯನ್ನು ವಿತರಿಸಲಾಗುತ್ತಿದೆ.

English summary
The most ambitious programme of Karnataka govt 'Anna Bhagya' will complete one year on July, 2014. On this occasion Nambilal Bandagisabha of Bijapur district Muddebihal taluk has shared his happiness of being beneficiary of the scheme. He says, now their family is not afraid of hungry. Karnataka Information dept will sharing such success stories everyday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X